ಯುಪಿಎಸ್ ಸಿ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಮೊದಲ ಪ್ರಯತ್ನದಲ್ಲಿ ಡಿವೈಎಸ್ ಪಿ ಆದ ಅನುಷಾ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅವರ ಮಾರ್ಗದರ್ಶನವನ್ನು ಈ ಲೇಖನದ ಮೂಲಕ ತಿಳಿಯೋಣ.

ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ ಚನ್ನಣ್ಣನವರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಕ್ಕಾಗಿ ಯುಪಿಎಸ್ ಸಿ ಅಕಾಡೆಮಿ ಕಾರ್ಯಕರ್ಮವನ್ನು ಹಮ್ಮಿಕೊಂಡಿತ್ತು. ಡಿಗ್ರಿ ಓದಿದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪಿಎಸ್ಐ, ಕೆಎಎಸ್ ಆಗಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ. ಅನುಷಾ ಅವರು ತಾವು ವಿದ್ಯಾರ್ಥಿಯಾಗಿದ್ದಾಗ ರವಿ ಡಿ ಚನ್ನಣ್ಣನವರ್ ಅವರ ಮಾತುಗಳನ್ನು ಟಿವಿ, ಯೂಟ್ಯೂಬ್ ಗಳಲ್ಲಿ ನೋಡಿದ್ದಾರೆ.

ಅವರು 2014ರಲ್ಲಿ ಪಿಎಸ್ಐ ಪಾಸಾಗಿದ್ದರು ಅವರು ಕಾರ್ಯನಿರ್ವಹಿಸುವಾಗ ರವಿ ಸರ್ ಮೈಸೂರಿನಲ್ಲಿ ಎಸ್ ಪಿ ಆಗಿದ್ದರು ಆಗ ಅನುಷಾ ಅವರಿಗೆ ನೀವು ಓದುತ್ತೀರ ನನಗೆ ನಂಬಿಕೆಯಿದೆ ಎಂದು ಹೇಳಿದ್ದರು. ನಂತರ ಅನುಷಾ ಅವರು ಕೆಎಎಸ್ ಪಾಸಾದರು ಎಸಿ ಪೋಸ್ಟ್ ಸಿಕ್ಕಿತ್ತು ಆದರೆ ಅವರು ಡಿವೈಎಸ್ ಪಿ ಆದರು ಅವರಿಗೆ ಯೂನಿಫಾರ್ಮ್ ಸರ್ವಿಸ್ ನಲ್ಲಿ ಆಸಕ್ತಿ ಇದ್ದ ಕಾರಣ ದಿವೈಎಸ್ ಪಿ ಆದರು.

ಅನುಷಾ ಅವರು ಡಿಗ್ರಿ ಮುಗಿದ ಸಮಯದಲ್ಲಿ ಐದು ವರ್ಷಗಳ ನಂತರ ಪಿಎಸ್ಐ ಪರೀಕ್ಷೆ ಕರೆದಿರುವ ಕಾರಣ ನನ್ನಿಂದ ಪರೀಕ್ಷೆ ಪಾಸ್ ಆಗಲು ಸಾಧ್ಯವೇ ಎಂದು ಅಂದುಕೊಳ್ಳುತ್ತಿದ್ದರು ಆಗ ಅವರ ತಂದೆ ನೀನು ಓದು, ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡು ಪರೀಕ್ಷೆಯನ್ನು ಪಾಸು ಮಾಡುವುದು ಬಿಡುವುದು ದೇವರಿಗೆ ಬಿಟ್ಟಿದ್ದು ಎಂದು ಹೇಳುತ್ತಾರೆ ಅದರಂತೆ ಅನುಷಾ ಅವರು ಎರಡು ತಿಂಗಳು ಕಠಿಣ ಪರಿಶ್ರಮ ಪಟ್ಟು ಓದುತ್ತಾರೆ.

ಪರೀಕ್ಷೆ ಬರೆದು ಸಂದರ್ಶನದ ನಂತರ ಮಹಿಳೆಯರ ಲೀಸ್ಟ್ ನಲ್ಲಿ ರ್ಯಾಂಕ್ ಬರುತ್ತಾರೆ ಆಗ ಅವರಿಗೆ ತಮ್ಮ ಮೇಲೆ ಆತ್ಮವಿಶ್ವಾಸ ಮೂಡಿತು. 2015ರಿಂದ ಅವರ ವೃತ್ತಿಜೀವನ ಪ್ರಾರಂಭವಾಯಿತು ಪಿಎಸ್ಐ ಟ್ರೇನಿಂಗ್ ಸಮಯದಲ್ಲಿ ಕೆಎಎಸ್ ಸಂದರ್ಶನವಿತ್ತು ಆಗಲು ಟ್ರೇನಿಂಗ್ ನಡುವೆ ಓದಿ ಸಂದರ್ಶನ ಕೊಡುತ್ತಾರೆ. ಸಂದರ್ಶನದಲ್ಲಿ ಅವರು ಪಾಸ್ ಆಗುತ್ತಾರೆ ಆಗ ಅವರಿಗೆ ಆದ ಖುಷಿ ಮತ್ತೆ ಸಿಗಲಾರದು.

ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಎಷ್ಟೊತ್ತು ಏನೇನು ಓದಬೇಕು ಎಂದು ವೇಳಾಪಟ್ಟಿ ಹಾಕಿಕೊಳ್ಳಬೇಕು. ಆಸಕ್ತಿಯಿಂದ ಓದಿದಾಗ ಮಾತ್ರ ಅದು ನೆನಪಿರುತ್ತದೆ. ಓದುವಾಗ ಮೊದಲು 5 ನಿಮಿಷ ಸುಮ್ಮನೆ ಕುಳಿತುಕೊಂಡು ಆಳವಾಗಿ ಉಸಿರಾಡಬೇಕು ತಂದೆ ತಾಯಿಯ ಕಷ್ಟವನ್ನು ನೆನೆಸಿಕೊಳ್ಳಬೇಕು. ನಂತರ ವೇಳಾಪಟ್ಟಿಯಂತೆ ಓದಲು ಪ್ರಾರಂಭಿಸಬೇಕು. ಒಂದು ವಾರ ಒಂದು ತಿಂಗಳು ಓದಿ ನಂತರ ಸುಮ್ಮನಾಗಬಾರದು ಪ್ರತಿದಿನ ಓದುತ್ತಿರಬೇಕು.

ಹತಾಶರಾಗದೆ ತಾಳ್ಮೆಯನ್ನು ಹೊಂದಿರಬೇಕು. ಓದುವ ವಿದ್ಯಾರ್ಥಿಗಳು ಕ್ರಮಬದ್ಧ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಓದಲು ಆರೋಗ್ಯ ಬಹಳ ಮುಖ್ಯ ಆಹಾರದ ಜೊತೆಗೆ ವ್ಯಾಯಾಮ ಮಾಡಬೇಕು. ವಿದ್ಯಾರ್ಥಿಯು 24 ಗಂಟೆಯನ್ನು ಹೇಗೆ ಬಳಸಿಕೊಳ್ಳುತ್ತಾನೆ ಎನ್ನುವುದು ಮುಖ್ಯವಾಗಿದೆ. 24ಗಂಟೆಯಲ್ಲಿ ನಿದ್ದೆ, ಒಂದು ತಾಸು ವ್ಯಾಯಾಮ, ಒಂದು ತಾಸು ಹವ್ಯಾಸಗಳಿಗೆ, ಒಂದು ತಾಸು ಕುಟುಂಬದವರಿಗೆ ಮೀಸಲಿಡಬೇಕು.

ಕನಿಷ್ಠ ಮೂರು ತಿಂಗಳು ವೇಳಾಪಟ್ಟಿಯನ್ನು ಹಾಕಿಕೊಂಡು ಕ್ರಮಬದ್ಧವಾಗಿ ಓದಿದಾಗ ಪರೀಕ್ಷೆಯನ್ನು ಪಾಸ್ ಮಾಡಬಹುದು. ಅನುಷಾ ಅವರು ಯುವಕರು ಬಿಸಿರಕ್ತದ ಹುಮ್ಮಸ್ಸಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ, ಇಂದಿನ ಯುವಕರು ತಮ್ಮ ಹುಮ್ಮಸ್ಸನ್ನು ಒಳ್ಳೆಯ ಕೆಲಸಗಳಿಗೆ ಮೀಸಲಿಡಬೇಕು ಎಂದು ಯುವಕರಿಗೆ, ಯುವತಿಯರಿಗೆ ಕಿವಿಮಾತು ಹೇಳಿದ್ದಾರೆ. ಕನ್ನಡಿಯಲ್ಲಿ ನಮ್ಮ ಮುಖ ಹೇಗಿದೆ ಎಂದು ನೋಡಿಕೊಳ್ಳುವುದಕ್ಕಿಂತ ನಾವು ಏನಾಗಬೇಕೆಂಬ ರೀತಿಯಲ್ಲಿ ನೋಡಿಕೊಳ್ಳಬೇಕು ಆಗ ನಮ್ಮ ಮನಸ್ಸು ಜಾಗೃತಗೊಳ್ಳುತ್ತದೆ. ನಾವು ಯಾವ ಉದ್ದೇಶಕ್ಕೋಸ್ಕರ ಕಷ್ಟಪಡುತ್ತಿರುತ್ತೇವೊ ಅದರತ್ತ ಮನಸ್ಸನ್ನು ಕೇಂದ್ರಿಕರಿಸಬೇಕು. ಈ ರೀತಿ ವಿದ್ಯಾರ್ಥಿಗಳು ಓದಿದರೆ ಪರೀಕ್ಷೆ ಪಾಸು ಮಾಡಿ ಕನಸ್ಸನ್ನು ನನಸು ಮಾಡಿಕೊಳ್ಳಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!