ಆಚಾರ್ಯ ಚಾಣಕ್ಯ ಜೀವನದಲ್ಲಿ ಯಶಸ್ಸನ್ನು ಕಾಣಲು ಹೇಳಿದ ನೀತಿ ಸೂತ್ರವಿದು

0 3

ಕೆಲವರಿಗೆ ಒಳ್ಳೆಯ ಗುಣ ಸ್ವಲ್ಪ ಮಟ್ಟಿಗೆ ಇರುತ್ತದೆ. ಆದರೆ ಕೆಲವರಿಗೆ ಒಳ್ಳೆಯ ಗುಣಗಳು ಸ್ವಲ್ಪ ಹೆಚ್ಚಾಗಿಯೇ ಇರುತ್ತವೆ. ಅತಿಯಾದ ಒಳ್ಳೆತನ ಒಳ್ಳೆಯದಲ್ಲ ಗೆಲ್ಲಬೇಕೆಂದರೆ ಕೆಟ್ಟವರಾಗಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಆಚಾರ್ಯ ಚಾಣಕ್ಯ ಜೀವನದಲ್ಲಿ ಯಶಸ್ಸನ್ನು ಕಾಣಲು ಹಲವಾರು ನೀತಿಗಳನ್ನು ನೀಡಿದ್ದಾರೆ. ಅವುಗಳು ಇಂದಿಗೂ ಪ್ರಸ್ತುತದಲ್ಲಿ ಇದೆ. ಅದನ್ನು ನಾವು ಇಲ್ಲಿ ನೋಡೋಣ.

ಚಾಣಕ್ಯನ ಪ್ರಸ್ತುತದಲ್ಲಿರುವ ನೀತಿಯಲ್ಲಿ ಅತಿಯಾದ ಒಳ್ಳೆಯತನ ಒಳ್ಳೆಯದಲ್ಲ ಎನ್ನುವುದು ಸಹ ಆಗಿದೆ.ಸಾಮಾನ್ಯವಾಗಿ ಒಳ್ಳೆಯವರಾಗಿ, ಒಳ್ಳೆಯವರಾಗಿ ಬದುಕಿ ಎಂದು ಎಲ್ಲರೂ ಹೇಳುತ್ತಿರುತ್ತಾರೆ.ಆದರೆ ಬರೀ ಒಳ್ಳೆತನದಿಂದ ಗೆಲುವು ಸಿಗುವುದಿಲ್ಲ.ಗೆಲ್ಲಬೇಕೆಂದರೆ ಕೆಲವು ಬಾರಿ ಕೆಟ್ಟವರಾಗಬೇಕಾಗುವ ಸಮಯ ಸಹ ಬರುತ್ತದೆ.

ಅತಿಯಾದ ಪ್ರಾಮಾಣಿಕವಾಗಿದ್ದರೂ ಒಳ್ಳೆಯದಲ್ಲ ಎಂದು ಕೂಡ ಚಾಣಕ್ಯ ಹೇಳಿದ್ದಾರೆ. ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾದ ಮರಗಳನ್ನು ಮೊದಲು ಕತ್ತರಿಸುತ್ತಾರೆ.ಅಂಕುಡೊಂಕಾಗಿರುವ ಮರದಿಂದ ಯಾವುದೇ ರೀತಿಯ ಉಪಯೋಗವಿಲ್ಲ.ಅಂಕುಡೊಂಕಾಗಿರುವ ಕೆಟ್ಟವರನ್ನು ಬಿಟ್ಟು ಒಳ್ಳೆಯವರನ್ನೇ ಬಲಿ ಕೊಡುತ್ತಾರೆ ಎನ್ನುವುದು ಕೂಡ ಅಪ್ಪಟ ಸತ್ಯ.

ಹಾಗೆಯೇ ದುಷ್ಟ ವ್ಯಕ್ತಿಗಳ ಸಿಹಿ ಮಾತಿನ ಮೇಲೆ ಯಾವುದೇ ವಿಶ್ವಾಸವನ್ನು ಯಾವತ್ತೂ ಇಡಬಾರದು.ಆಲೋಚನೆಯಂತೆ ನಡೆದರೆ ಮಾತ್ರ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಹಣ ಇಲ್ಲದಿದ್ದರೂ ಇವೆಲ್ಲ ಇದೆ ಎಂದು ತೋರಿಸಿಕೊಳ್ಳಬೇಕು.ಉದಾಹರಣೆಗೆ ತನ್ನ ಹಲ್ಲಿನಲ್ಲಿ ವಿಷ ಇಲ್ಲದಿದ್ದರೂ ಕೂಡ ಹಾವು ತನ್ನ ಆತ್ಮರಕ್ಷಣೆಗಾಗಿ ಬಸ್ ಗುಡುತ್ತಿರುತ್ತದೆ. ಹಾಗಾಗಿ ನಮ್ಮ ಕಷ್ಟವನ್ನು ತೋರಿಸದೇ ಬದುಕಬೇಕು.

ಗುಣವಂತರ ಸ್ನೇಹ ಮಾಡಬೇಕು.ಗುಣವಂತರ ಜೊತೆ ಸ್ನೇಹ ಮಾಡಿದರೆ ಸ್ನೇಹ ಮಾಡಿದವರು ಕೂಡ ಗುಣವಂತರಾಗುತ್ತಾರೆ. ನಮ್ಮ ಕುಟುಂಬದಲ್ಲಿ ಕಾಳಜಿ ವಹಿಸದಿದ್ದರೆ ಸಮಾಜದಲ್ಲಿ ಬೆಲೆಯೇ ಇರುವುದಿಲ್ಲ.ದೊಡ್ಡ ಆನೆಯನ್ನು ನಿಯಂತ್ರಿಸಲು ಒಂದು ಅಂಕುಶ ಬೇಕು.ಆದ್ದರಿಂದ ದೇಹದ ಗಾತ್ರ, ಆಕಾರ,ಸೌಂದರ್ಯ ಮುಖ್ಯವಲ್ಲ. ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಮುಖ್ಯ.

ಜೀವನದಲ್ಲಿ ಹಂತ ಹಂತವಾಗಿ ಮೇಲೇರಬೇಕು.ಅದಕ್ಕಾಗಿ ಮನೆ ಮತ್ತು ಮೋಹವನ್ನು ತ್ಯಾಗ ಮಾಡಬೇಕು.ಇದರಿಂದ ಜೀವನದಲ್ಲಿ ಮೇಲೇರಲು ಸಾಧ್ಯ. ಸ್ತ್ರೀಯರನ್ನು ಕೆಟ್ಟ ದ್ರಷ್ಟಿಯಿಂದ ನೋಡುವವನು ಯಾವಾಗಲೂ ಪವಿತ್ರನಾಗುವುದಿಲ್ಲ. ತನ್ನ ಸಾವನ್ನು ತಾನೇ ಹತ್ತಿರ ತಂದುಕೊಳ್ಳುತ್ತಾನೆ.ಜೀವನದಲ್ಲಿ ಹೆಣ್ಣು, ಹೊನ್ನು, ಮಣ್ಣು ತಾನಾಗಿಯೇ ದೊರೆಯಬೇಕು.

ಹುಟ್ಟುಗುಣವನ್ನು ಬದಲಾಯಿಸಲು ಸಾಧ್ಯವಿಲ್ಲ. ಬೇವಿನ ಮೇಲೆ ಹಾಲಿನ ಅಭಿಷೇಕ ಮಾಡಿದರೂ ಬೇವು ತನ್ನ ಗುಣವನ್ನು ಬಿಟ್ಟುಕೊಡುವುದಿಲ್ಲ.ಒಬ್ಬ ವ್ಯಕ್ತಿಯ ಗೌರವ ಅವನ ಗುಣಗಳ ಮೇಲೆ ನಿರ್ಧಾರ ಆಗುತ್ತದೆ.ಬದಲಾಗಿ ಸ್ನಾನ ಆದ ಮೇಲೆ ಬದಲಾಗುವುದಿಲ್ಲ. ಆದ್ದರಿಂದ ಎಲ್ಲಾ ಕಡೆ ಒಳ್ಳೆಯ ವ್ಯಕ್ತಿಯಾಗಿ ಬದುಕೋಣ.

Leave A Reply

Your email address will not be published.