Abhishek Ambarish ಸುಮಲತಾ ಅಂಬರೀಷ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ (Abhishek Ambarish) ಕೆಲವು ದಿನಗಳ ಹಿಂದೆ ಅಷ್ಟೇ ಅದ್ದೂರಿಯಾಗಿ ವಿವಾಹ ಆಗಿದ್ದರು, ಇವರ ಮದುವೆಗೆ ಇಡೀ ಚಿತ್ರತಂಗವೇ ಸೇರಿತ್ತು ಆದ್ರೆ ಇವತ್ತು ಅಭಿಷೇಕ್ ಅವರ ಮದುವೆಯ ಬೀಗರ ಊಟದ ಸಂಭ್ರಮ ಇದೆ. ಹಾಗಾಗಿ ಸುಮಾರು 7 ಟನ್ ಅಷ್ಟು ಚಿಕೆನ್ ಹಾಗೂ ಮಟನ್ ಸೇರಿದಂತೆ ವಿವಿಧ ಬಗೆಯ ಅಡುಗೆಯನ್ನು ಮಾಡಲಾಗಿದೆ.
ಸ್ವತಃ ತಾವೇ ಮುಂದೆ ಇದ್ದು ಅಭಿಷೇಕ್ (Abhishek) ಊಟದ ತಯಾರಿಯನ್ನು ಮಾಡಿಸಿದ್ದು ಸಾವಿರಾರು ಜನರು ಊಟವನ್ನು ಮಾಡಿದ್ದಾರೆ. ಈಗಿರುವಾಗ ಮಾಧ್ಯಮದವರು ಕೇಳಿದ ಪ್ರಶ್ನೆ ಅವಿವಾ ಅವರು ಮುದ್ದೆ ಊಟ ಮಾಡುತ್ತಾರಾ? ಕೇಳಿದಕ್ಕೆ ಅವರು ಅವಿವಾ ಮುದ್ದೆ ಊಟ ಮಾಡೋದು ದೌಟ್ ಇದೆ ಆದ್ರೆ ಬಿರಿಯಾನಿ ಮಾತ್ರ ಪಕ್ಕ ತಿನ್ನುತ್ತಾರೆ ಎಂಬುದಾಗಿ ಅಭಿಷೇಕ್ ಹೇಳಿದ್ದಾರೆ. ಅಪ್ಪನಂತೆ ಅಭಿಷೇಕ್ ತಮ್ಮ ಅಭಿಮಾನಿಗಳಿಗೆ ಊಟದ ಜೊತೆಗೆ ಎಲ್ಲರನ್ನು ನಗುತ್ತಲೇ ಮಾತಾಡಿಸಿ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಬಾಡೂಟ ಶುರು ಆಗಿದ್ದು ಯಾವೆಲ್ಲ ರೀತಿಯ ಊಟ ತಯಾರಾಗಿದೆ ಗೊತ್ತಾ? ರಾಗಿಮುದ್ದೆ, ನಾಟಿ ಕೋಳಿಸಾರು, ಚಿಕನ್ ಕಬಾಬ್, ಮೊಟ್ಟೆ ರೈಸ್, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ತಿಳಿ ಸಾಂಬಾರ್ ಹಾಗೂ ಸಿಹಿ ಪದಾರ್ಥಗಳಲ್ಲಿ ಪಾಯಸ ಬಾದುಷಾ ಹಾಗೂ ಬೀಡಾ ಐಸ್‌ಕ್ರೀಂ, ಬಾಳೆಹಣ್ಣು ಮುಂತಾದವು ಇದೆ. ಇದನ್ನೂ ಓದಿ Kannada News: ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಕರೆಯಲಾಗಿದೆ ಆಸಕ್ತರು ಕೂಡಲೇ ಅರ್ಜಿಹಾಕಿ