Low Budget House in Karnataka: ಕಡಿಮೆ ಬಜೆಟ್ (Low Budge) ನಲ್ಲಿ ವಾಸಕ್ಕೆ ಯೋಗ್ಯವಾದಂತಹ ಮನೆಯನ್ನು ನಿರ್ಮಿಸುವುದು ಹೇಗೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ. ಪ್ರತಿಯೊಂದು ಮನುಷ್ಯನಿಗೂ ಮನೆ ಎನ್ನುವುದು ಒಂದು ಕನಸಾಗಿರುತ್ತದೆ ಮನೆಯೂ ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಯೂ ಕೂಡ ಆಗಿದ್ದು ತಮ್ಮ ಸುರಕ್ಷತೆಗಾಗಿ ನೆಮ್ಮದಿಯಿಂದ ಜೀವನವನ್ನು ಕಳೆಯಲು ಮನೆ ಅವಶ್ಯಕತೆ ವಾಗಿ ಬೇಕಾಗಿರುತ್ತದೆ ಆದರೆ ಕೆಲವೊಬ್ಬರಿಗೆ ಕಡಿಮೆ ವೆಚ್ಚದಲ್ಲಿ ಮನೆ (House) ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕಡಿಮೆ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡಲು ಹಲವಾರು ಏಜೆನ್ಸಿಗಳು ಇರುತ್ತವೆ.

ಇಂತಹ ಏಜೆನ್ಸಿಗಳು ಈಗ ಕರ್ನಾಟಕದಲ್ಲಿ ಪ್ರಾರಂಭಗೊಂಡಿದ್ದು ಮನೆ ಇಲ್ಲದೆ ಜೋಪಡಿಗಳಲ್ಲಿ ವಾಸಿಸುವ ಜನರಿಗೆ ಹಾಗೂ ಮನೆ ಕಟ್ಟಲು ಹಣವನ್ನ ಉಳಿಸುತ್ತಿರುವಂತಹ ವ್ಯಕ್ತಿಗಳಿಗೆ ಅತ್ಯಂತ ಉಪಯುಕ್ತವಾಗಲಿದೆ ಈ ಏಜೆನ್ಸಿಗಳು ಮನೆಯನ್ನ ನಿರ್ಮಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ ಅಷ್ಟೇ ಅಲ್ಲದೆ ಹೆಚ್ಚು ವೆಚ್ಚವನ್ನು ಹೇಳುವುದಿಲ್ಲ ಕಡಿಮೆ ಖರ್ಚಿನಲ್ಲಿ ಉತ್ತಮವಾದ ವ್ಯವಸ್ಥಿತವಾದ ಮನೆಯನ್ನ ನಿರ್ಮಿಸಿ ಕೊಡುವ ಉದ್ದೇಶವನ್ನು ಈ ಏಜೆನ್ಸಿಗಳು ಹೊಂದಿರುತ್ತವೆ.

ಅಷ್ಟಕ್ಕೂ ಹೀಗೆ ಕಡಿಮೆ ಖರ್ಚಿನಲ್ಲಿ ಮನೆಯನ್ನ ಕಟ್ಟಿಸಿ ಕೊಡುವ ಈ ಕಂಪನಿಯ ಹೆಸರು ಉನ್ನತಿ ಇಕೋ ಫ್ರೆಂಡ್ಲಿ ಫ್ರೀ ಫ್ಯಾಬ್ರಿಕೇಟೆಡ್ ಹೋಮ್ಸ್ ಇದು ಸ್ಥಾಪಿತವಾಗಿರುವುದು ಚಿಕ್ಕಮಂಗಳೂರಿನಲ್ಲಿ. ಬಡವರು ಸಾಮಾನ್ಯವಾಗಿ ವರ್ಗದವರು ಸುಲಭವಾಗಿ ಮನೆಯನ್ನ ನಿರ್ಮಿಸಿಕೊಳ್ಳುವಂತೆ ಆಗಬೇಕು ಎಂಬ ಉದ್ದೇಶದಿಂದ ಸಿವಿಲ್ ಇಂಜಿನಿಯರ್ ಭಾಗ್ಯದೇವ ಕರ್ನಾಟಕದಲ್ಲಿ ಈ ಕಂಪನಿಯನ್ನ ಪ್ರಾರಂಭಿಸಿದರು. ಅತ್ಯಂತ ಪರಿಣಾಮಕಾರಿಯಾಗಿ ಇವರು ಮನೆ ನಿರ್ಮಿಸಿ ಕೊಡುವುದರಿಂದ ನಾಡಿನಾದ್ಯಂತ ಈ ಸಂಸ್ಥೆ ಉನ್ನತ ಸ್ಥಾನವನ್ನ ಗಳಿಸಿಕೊಂಡಿದೆ.

ಈ ರೀತಿಯ ಮನೆಗಳನ್ನು ಆಸ್ಟ್ರೇಲಿಯಾ ಶೈಲಿಯ ರಾಪಿಡ್ವಾಲ್ ಟೆಕ್ನಾಲಜಿ ಮೂಲಕ ನಿರ್ಮಾಣ ಮಾಡುತ್ತಾರೆ ಫ್ರೀ ಕಾನ್ಸ್ಟೆಂಟ್ ಕಾಂಕ್ರೀಟ್ ವಾಲ್ ಗಳನ್ನು ಬಳಸಿ ಮನೆ ನಿರ್ಮಿಸುವ ಇವರು ಗ್ರಾಹಕರ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ಒಂದು ಇಂಚು ಅಥವಾ ಒಂದೂವರೆ ಇಂಚು ಅಥವಾ ಎರಡು ಇಂಚಿನ ಅಳತೆಯ ರೀತಿಯಲ್ಲಿ ಕಾಂಕ್ರೀಟ್ವಾಲಲ್ಲಿ ನಿರ್ಮಿಸುತ್ತಾರೆ ಅಷ್ಟೇ ಅಲ್ಲದೆ ಇವರು ಫ್ರೀ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ವಾಲ್ ಗಳನ್ನು ಜೋಡಿಸುವ ಮೂಲಕ ಸುಲಭವಾಗಿ ಮನೆಯಲ್ಲೇ ನಿರ್ಮಾಣ ಮಾಡುತ್ತಾರೆ.

ಇಂತಹ ಮನೆಗಳನ್ನು ನಿರ್ಮಿಸಲು ಎಲ್ಲಾ ರೀತಿಯ ತಯಾರಿಯನ್ನು ಮೊದಲೇ ಮಾಡಿಕೊಂಡಿರುವುದರಿಂದ ಬಹಳ ಸಮಯ ತೆಗೆದುಕೊಳ್ಳುವುದಿಲ್ಲ ಹಾಗೆ ವೆಚ್ಚ ಕೂಡ ಕಡಿಮೆಯಾಗುತ್ತದೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆಗಳನ್ನು ಇವರು ನಿರ್ಮಿಸಿ ಕೊಡುತ್ತಾರೆ ಕಡಿಮೆ ಎಂದರೆ 70000 ಖರ್ಚು ಹಾಗೆ ಆಗುತ್ತದೆ ಇನ್ನು ಕೆಲವೊಂದು ಸಂದರ್ಭಗಳಲ್ಲಿ ಇದಕ್ಕಿಂತ ಸ್ವಲ್ಪ ಹೆಚ್ಚಿಗೆ ಆಗಬಹುದು

150 ರಿಂದ 200 sq/ft ನಲ್ಲಿರುವ ಒಂದು ಹಾಲ್ ಮತ್ತು ಕಿಚನ್ ಇರುವ ಮನೆಗಳನ್ನು ಈ ಮೊತ್ತಕ್ಕೆ ನಿಮಗೆ ಕಟ್ಟಿಕೊಡಲಾಗುತ್ತದೆ. 400 ಇಂದ 500 sq/ft ಜಾಗದಲ್ಲಿ1BHK ಮನೆಯಲ್ಲ ಒಂದುವರೆ ಲಕ್ಷ ಮೊತ್ತಗಳಿಗೆ ಕಟ್ಟಿಸಿ ಕೊಡುತ್ತಾರೆ. 2BHK ಮನೆಯನ್ನು ಕೂಡ ಇವರು ನಿರ್ಮಿಸಿ ಕೊಡುತ್ತಾರೆ. ಈ ಏಜೆನ್ಸಿಯ ಬಗ್ಗೆ ಪತ್ರಿಕೆಗಳನ್ನು ಕೂಡ ಪ್ರಕಟವಾಗಿದ್ದು ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವ ಕನಸು ಹೊಂದಿದ್ದವರು ಇದರ ಸದುಪಯೋಗವನ್ನ ಪಡೆದುಕೊಳ್ಳಬಹುದು. ಇದನ್ನೂ ಓದಿ Kannada News: ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಕರೆಯಲಾಗಿದೆ ಆಸಕ್ತರು ಕೂಡಲೇ ಅರ್ಜಿಹಾಕಿ

Leave a Reply

Your email address will not be published. Required fields are marked *