ಪಂಚದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರ ತುಂಬಾ ಮಹತ್ವವಾದದ್ದು. ಹಿಂದಿನ ಕಾಲದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು ಆದರೆ ಕಾಲ ಬದಲಾದಂತೆ ಜನರಿಗೆ ದೇವರ ಮೇಲಿನ ಭಕ್ತಿ ಭಾವ ಕಡಿಮೆಯಾಗಿ ಕೇವಲ ಆಡಂಬರದ ತೋರಿಕೆಯ ಭಕ್ತಿ ಇಂದು ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ದೇವರ ಹೆಸರಲ್ಲಿ ಧರ್ಮದ ಹೆಸರಿನಲ್ಲಿ ಕೆಲವೊಂದು ವ್ಯಕ್ತಿಗಳು ಸಹ ಕೆಲವು ಜನರು ದೇವರ ಮೇಲೆ ಇಟ್ಟ ನಂಬಿಕೆ ಹಾಗೂ ಅವರ ಭಾವನೆಗಳ ಜೊತೆ ತಾನು ದೊಡ್ಡ ಜ್ಯೋತಿಷಿ, ಎಲ್ಲರ ಭವಿಷ್ಯವನ್ನು ಹೇಳುತ್ತೇನೆ ಎಂದು ಜನರ ಕಣ್ಣಿಗೆ ಮಣ್ಣೆರಚಿ, ಮೋಸ ಮಾಡಿ ದುಡ್ಡು ಮಾಡಿಕೊಳ್ಳುವವರು ಒಂದೆಡೆ. ಇನ್ನೊಂದು ಕಡೆ ದೇವರನ್ನೇ ನಂಬಿ ನಿಜವಾಗಿಯೂ ತಪಸ್ಸು ಸಾಧನೆ ಮಾಡಿದ ಸನ್ಯಾಸಿಗಳು ಜ್ಯೋತಿಷಿಗಳು ಇನ್ನೊಂದು ಕಡೆ. ಈಗಂತೂ ಬೆಳಿಗ್ಗೆ ಎದ್ದು ಟಿವಿ ನೋಡೋಕೆ ಅಂತ ಕೂತರೆ ಯಾವ ಚಾನೆಲ್ ನೋಡಿದರೂ ಜ್ಯೋತಿಷಿಗಳದ್ದೇ ಹಾವಳಿ. ಯಾರ ಮಾತು ನಂಬುವುದು ಬಿಡುವುದು ಒಂದು ತಿಳಿಯದೆ ಗೊಂದಲ ಉಂಟಾಗುತ್ತದೆ. ಇಂಥವರ ಮಧ್ಯೆ ಒಬ್ಬ ಬಾಲಕ ಭವಿಷ್ಯ ನುಡಿದಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಓಡಾಡುತ್ತಿವೆ. ಆ ಬಾಲಕ ಯಾರು ಅವನು ಹೇಳಿದ ಭವಿಷ್ಯವಾಣಿ ಏನು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
ಈ ಹುಡುಗನ ಹೆಸರು ಅಭಿಗ್ಯ ಆನಂದ್. ಇವನ ಹೆಸರನ್ನು ಈಗಾಗಲೇ ಬಹಳಷ್ಟು ಜನ ಕೇಳಿರಬಹುದು. ತನ್ನ ಅತಿ ಚಿಕ್ಕ ವಯಸ್ಸಿನಲ್ಲೇ ಬಹಳಷ್ಟು ಸಾಧನೆಗಳನ್ನು ಈ ಹುಡುಗ ಮಾಡಿದ್ದಾನೆ. ಈತ ತನ್ನ ಹತ್ತನೇ ವಯಸ್ಸಿಗೆ ಆಯುರ್ವೇದ, ಮೈಕ್ರೋ ಬಯಾಲಜಿ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದಾನೆ. ಸ್ಪಷ್ಟವಾಗಿ ಸಂಸ್ಕೃತ ಉಚ್ಚಾರಣೆ ಮಾಡುವ ಈತ 2015 ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾನೆ. ಇವನಿಗೆ ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹಾಗೂ ಭೂ ಮಂಡಲದ ಆಗು ಹೋಗುಗಳ ಬಗ್ಗೆಯೂ ಗೊತ್ತು.
ಈಗ ಎಲ್ಲೆಡೆ ಸುದ್ದಿಯಾಗಿರುವ ಕರೋನ ವೈರಸ್ ನ ಮಧ್ಯೆ ಅಭಿಗ್ಯ ಆನಂದ್ ಹೆಸರು ಮತ್ತೆ ಸುದ್ದಿಯಾಗಿದೆ. ಇದಕ್ಕೆ ಕಾರಣ ಏನು ಅಂದ್ರೆ ಈತ ಹೇಳಿದ ಭವಿಷ್ಯ. 2019 ರ ಆಗಸ್ಟ್ ಅಲ್ಲಿ ಅಭಿಗ್ಯ ತನ್ನ ಯೂ ಟ್ಯೂಬ್ ಚಾನಲ್ ನಲ್ಲಿ ಒಂದು ವಿಷಯವನ್ನು ಹರಿದುಬಿಟ್ಟಿದ್ದ. 2019 ನವೆಂಬರ್ ನಲ್ಲಿ ಇಡೀ ಜಗತ್ತು ಒಂದು ಅಪಾಯದ ಹಂತಕ್ಕೆ ಕಾಲಿಡುತ್ತಿದೆ. 2019 ನವೆಂಬರ್ ನಿಂದ 2020 ಏಪ್ರಿಲ್ ವರೆಗೆ ಇದು ಮುಂದುವರೆಯುತ್ತದೆ ಎಂದು ಹೇಳಿದ್ದ. ಈಗ ಕರೋನ ದಿಂದ ಆಗಿರುವ ಅವ್ಯವಸ್ಥೆಯನ್ನು ನೋಡಿದಾಗ ಈ ಬಾಲ ಜ್ಯೋತಿಷಿ ಅಭಿಗ್ಯ ಹೇಳಿದ ಮಾತು ನಿಜವಾಯಿತೇನೋ ಅನಿಸಿದ್ದು ಸುಳ್ಳಲ್ಲ.
2019 ನವೆಂಬರ್ ನೀಂದ 2020 ಏಪ್ರಿಲ್ ವರೆಗೆ ಜಾಗತಿಕವಾಗಿ ರೋಗ ಹರಡುತ್ತದೆ. ಮಾರ್ಚ್ 2 ಮತ್ತು ಏಪ್ರಿಲ್ ಒಂದರಂದು ಪರಿಸ್ಥಿತಿ ತೀರಾ ಕೆಟ್ಟದಾಗಿ ಇರುತ್ತದೆ. ಈ ಸಾಯಮಯದಲ್ಲಿ ಹೆಚ್ಚಾಗಿ ಸಾಮಾಜಿಕ ಅನಂತರ ಕಾಯ್ದುಕೊಳ್ಳಬೇಕು ಅಂತಲೂ ಹೇಳಿದ್ದ. ಅಷ್ಟೆ ಅಲ್ಲ ಇದರ ಜೊತೆಗೆ ಈ ಕಠಿಣ ಪರಿಸ್ಥಿತಿ ನಿವಾರಣೆ ಆಗುವುದು ಯಾವಾಗ ಎಂದು ಸಹ ತಿಳಿಸಿದ್ದಾನೆ. 2020 ರ ಮೇ 29 ರ ವರೆಗೂ ಈ ಸಮಸ್ಯೆ ಮುಂದುವರೆಯುತ್ತದೆ . 29 ರಂದು ಭೂಮಿ ಕಠಿಣ ಅವಧಿಯಿಂದ ಪರಿಭ್ರಮಿಸುತ್ತದೆ ನಂತರ ಖಾಯಿಲೆಯ ಭೀಕರತೆ ಇಳಿಮುಖವಾಗುತ್ತದೆ ಹಾಗೂ ಗುಣಪಡಿಸಲು ಬಹುದು ಎಂದು ವಿವರಣೆ ನೀಡಿದ.
ಆದರೆ, ಮಾರ್ಚ್ 31 ರಲ್ಲೀ ಯಾಕೆ ತೀವ್ರ ಕಠಿಣ ಹಂತ ತಲುಪುತ್ತದೆ ಎಂದು ಅಭಿಗ್ಯ ಹೇಳಿದ್ದ? ಅದರ ಸಾರಾಂಶ:- ಜ್ಯೋತಿಷ ಶಾಸ್ತ್ರದ ಆಧಾರದ ಮೇಲೆ ಮಂಗಳ ಗೃಹ ಶನಿ ಮತ್ತು ಗುರು ಗ್ರಹದ ಜೊತೆಗೆ ಸಂಯೋಗ ಆಗುತ್ತದೆ. ಚಂದ್ರನ ಉತ್ತರ ಸಂಪಾಟ ಎಂದೇ ಕರೆಯುವ ರಾಹು ಕೂಡಾ ಚಂದ್ರನೊಂದಿಗೆ ಸೇರುತ್ತಾನೆ. ಸೌರ ವ್ಯವಸ್ಥೆಯಲ್ಲಿ ಮಂಗಳ, ಶನಿ, ಗುರು ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟಿದೆ. ಇವು ಮೂರು ಗ್ರಹಗಳು ಒಟ್ಟಿಗೆ ಸೇರುವುದು ಅಪರೂಪ. ಸೌರ ಮಂಡಲದ ಹೊರ ವರ್ತುಲದಲ್ಲಿ ಇರುವ ಈ ಗ್ರಹಗಳು ಒಳಗೆ ಬಂದಾಗ ಭೂಮಿಯ ಶಕ್ತಿ ಅಧಿಕವಾಗುತ್ತದೆ. ಮಾರ್ಚ್ 31ರಂದು ಚಂದ್ರ ಮತ್ತು ರಾಹು ಸಂಯೋಜನೆ ಆಗುವುದರಿಂದ ವಾತಾವರಣ ತೇವವಾಗಲಿದೆ ಹಾಗಾಗಿ ಜನರಿಗೆ ಕೆಮ್ಮು, ಸೀನುಗಳು ಹೆಚ್ಚಾಗಿ ಖಾಯಿಲೆ ಹೆಚ್ಚಾಗಲಿದೆ. ಹಾಗಾಗಿ ಅಂದು ಯಾರೂ ಪರಸ್ಪರ ಹತ್ತಿರ ಬರದೆ ಅಂತರ ಕಾಯ್ದು ಕೊಳ್ಳಬೇಕು. ಏಪ್ರಿಲ್ ಒಂದರಂದು ಸಹ ಇದೆ ವಾತಾವರಣ ಇರೋದರಿಂದ ವಿಷಮ ಸ್ಥಿತಿ ಇರುತ್ತದೆ. ಎಂದು ಅಭಿಗ್ಯ ವಿವರಿಸಿದ್ದ. ಅವನ ಮಾತಿನಂತೆ ಕರೋನ ಎಂಬ ಮಹಾ ಮಾರಿ ಜಗತ್ತಿಗೆ ಅಂಟಿಕೊಂಡು ಮನುಕುಲ ಮತ್ತು ವೈರಸ್ ನಡುವೆ ನಡೆಯುವ ವಿಶ್ವ ಯುದ್ಧ ಆಗಿದೆ. ಇದು ಮೊದಲು ಚೀನಾದಲ್ಲಿ ಕಳೆದ ನವೆಂಬರ್ ನಲ್ಲೇ ಪತ್ತೆ ಆಗಿತ್ತು. ಮೇ 29 ರಂದು ಗೃಹಗಳ ಸಂಯೋಜನೆಯ ಸ್ಥಾನ ಬಡಾವಣೆ ಗೊಳ್ಳುತ್ತದೆ. ಸ್ಥಾನ ಪಲ್ಲಟದ ಜೊತೆ ಖಾಯಿಲೆಯ ಪ್ರಮಾಣವು ಕಡಿಮೆಯಾಗುತ್ತದೆ. ಮೇ 29 ರ ನಂತರ ಖಾಯಿಲೆಯ ಕಡಿಮೆ ಆಗುತ್ತಿರುವುದು ತಿಳಿಯುತ್ತದೆ ಹಾಗೆಯೇ ನವೆಂಬರ್ 2021 ರ ವೇಳೆಗೆ ಆರ್ಥಿಕತೆಯು ಸಹ ಸರಿ ಹೋಗುತ್ತದೆ ಎಂದು ಅಭಿಗ್ಯ ತಿಳಿಸಿದ್ದಾನೆ. ಇವಿಷ್ಟು ಸಧ್ಯದ ಪರಿಸ್ಥಿತಿಯ ಬಗ್ಗೆ ಬಾಲ ಜ್ಯೋತಿಷಿ ಅಭಿಗ್ಯ ಆನಂದ್ ನೀಡಿರುವ ಮಾಹಿತಿಗಳು