ನಾವು ಕಷ್ಟಪಟ್ಟು ದುಡಿಯುತ್ತೇವೆ. ಏಕೆಂದರೆ ನಮಗೆ ಬೇಕಾದಂತೆ ಜೀವನ ನಡೆಸಬೇಕು ಎಂದು. ನಮಗೆ ಇಷ್ಟವಾದ ವಸ್ತುಗಳನ್ನು ಮತ್ತು ಸೇವೆಗಳನ್ನು ಪಡೆದುಕೊಳ್ಳಲು ಹಣ ಬೇಕೇ ಬೇಕು. ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ ಆದರೆ ಎಲ್ಲರ ಕೆಯ್ಯಲ್ಲಿ ದುಡ್ಡು ನಿಲ್ಲುವುದಿಲ್ಲ. ಕೆಲವರು ಎಷ್ಟು ದುಡಿದರೂ ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಅಂತಹವರು ಈ ಕೆಳಗಿನ ಮಾಹಿತಿಯನ್ನು ಬಳಸಿಕೊಂಡು ಹಣವನ್ನು ಉಳಿಸಬಹುದು.

ಜಗತ್ತಿನಲ್ಲಿ ತುಂಬಾ ಜನ ಕಷ್ಟಪಟ್ಟು ದುಡಿತಾರೆ ಆದರೆ ಕ್ಯೆಯಿಗೆ ದುಡ್ಡೇ ಬರುವುದಿಲ್ಲ. ಹಾಗೇ ದುಡಿದುಕೊಂಡು ಹೋಗುತ್ತಾರೆ ಹೇಗೆ ಖರ್ಚಾಗುತ್ತೆ ಅನ್ನೋದೇ ತಿಳಿಯೋದಿಲ್ಲ. ಇನ್ನು ಕೆಲವರು ನೌಕರಿಗಾಗಿ ಓಡಾಡುತ್ತಿರುತ್ತಾರೆ. ನೌಕರಿ ಕೊಡಲ್ಲ ಸರ್ಕಾರಿ ಅಥವಾ ಖಾಸಗಿ ಆಗಿರಬಹುದು. ಇನ್ನು ನೌಕರಿ ಸಿಗತ್ತೆ ಅನ್ನುವಷ್ಟರಲ್ಲಿ ಏನಾದರೂ ತೊಂದರೆ ಆಗಿ ಕೈ ತಪ್ಪಿ ಹೋಗುತ್ತದೆ. ಮನೆಯಲ್ಲಿ ಶುಭ ಕಾರ್ಯಗಳೇ ನಡೆಯುತ್ತಿಲ್ಲ. ವಿವಾಹಕ್ಕೆ ತಾಪತ್ರಯಗಳು ಜಾಸ್ತಿ. ಇಂತಹ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ.

ತೆಂಗಿನಕಾಯಿ ಬಹಳ ಶ್ರೇಷ್ಠವಾದುದು. ಸೋಮವಾರ ಅಥವಾ ಗುರುವಾರ 11ತೆಂಗಿನಕಾಯಿಯನ್ನು ದೇವಸ್ತಾನಕ್ಕೆ ಕೊಟ್ಟು ಬರಬೇಕು. ಅದು ದೇವರಿಗೆ ದಾನ ಎಂದು ತಿಳಿದು ಕೊಟ್ಟು ಬರಬೇಕು. ಅದೇ ರೀತಿ ಗುರುವಾರ ಮಾಡಬಹುದು. ಏನು ದಂಧೆನೇ ಇಲ್ಲ ಅಂದುಕೊಂಡೊರಿಗೆ ಪರವಾಗಿಲ್ಲ ಅಂತ ಅನಿಸುತ್ತೆ. ದುಡ್ಡು ನಿಲ್ಲುತ್ತಲೇ ಇಲ್ಲ ಅನ್ನುವವವರಿಗೆ ಕೈಲಿ ದುಡ್ಡು ನಿಲ್ಲುತ್ತೇ ಅಂತ ಅನಿಸುತ್ತೆ. ಮನೆಯಲ್ಲಿ ವರ್ಷಪೂರ್ತಿ ಶುಭಕಾರ್ಯಗಳು ಯಾವುದೇ ವಿಘ್ನವಿಲ್ಲದೇ ನಡೆಯುತ್ತದೆ.

ಹಾಗೆಯೇ ಇನ್ನೊಂದು ಪರಿಹಾರ ಇದೆ. ಆಫೀಸಿನಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವಾಗ ಮೇಲಿನ ಅಧಿಕಾರಿಗಳು ವಿಶೇಷವಾಗಿ ಸ್ತ್ರೀಯರಿಗೆ ಒತ್ತಡ ಹೇರುತ್ತಾರೆ. ಕೆಲವರಿಗೆ ಕೆಲಸ ಮಾಡದೇ ಇದ್ದರೆ ಜೀವನ ನಡೆಸಲು ಕಷ್ಟವಾಗುತ್ತದೆ. ಅಂತಹವರು ಆದಿತ್ಯಹೃದಯವನ್ನು ದಿನಕ್ಕೆ ಮೂರು ಬಾರಿ ಒಂದು ತಿಂಗಳು ಪಠಿಸಿ, ಅಥವಾ 48 ದಿನ ಪಠಿಸಿದರೆ ತುಂಬಾ ಒಳ್ಳೆಯದು . ಆ ಸಮಸ್ಯೆಗಳು ಖಂಡಿತವಾಗಿಯೂ ದೂರವಾಗುತ್ತದೆ. ಇದರಿಂದ ಎಷ್ಟೋ ಜನ ಪರಿಹಾರ ಕಂಡುಕೊಂಡಿದ್ದಾರೆ. ಸೂರ್ಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಸರ್ಕಾರಿ ನೌಕರಿಗಳಿಗೆ ಕಾರಕನಾಗಿದ್ದಾನೆ. ಅತ್ಯಂತ ಒಳ್ಳೆಯ ಫಲಗಳು ಬೇಕೆಂದರೆ 32 ಶ್ಲೋಕಗಳನ್ನು 3ಸಲ ಪಠಿಸಬೇಕು. ಸಮಯ ಇಲ್ಲದಿದ್ದರೆ ಒಂದು ಬಾರಿಯಾದರೂ ಪಠಿಸಿ. ಭಾನುವಾರವಾದರೂ ದಿನಕ್ಕೆ 3ಬಾರಿ ಪಠಿಸಿ. ಯಾವುದೆಂದು ತಿಳಿಯದಿದ್ದರೆ ಆದಿತ್ಯಹೃದಯ ಎಂದು ಮೊಬೈಲ್ ಇಂಟರ್ನೆಟ್ ಜಾಲದಲ್ಲಿ ಹುಡುಕಿದರೆ ಸಿಗುತ್ತದೆ.

ಹಾಗೆಯೇ ಮಾಟ ಮಂತ್ರವನ್ನು ಕೆಲವರು ಮಾಡಿಸುತ್ತಾರೆ. ಇದಕ್ಕೆ ಒಂದು ಪರಿಹಾರ ಇದೆ. ಒಂದಿಷ್ಟು ಸಾಸಿವೆ ಎಣ್ಣೆಗೆ, ಸ್ವಲ್ಪ ಬೇವಿನ ಎಣ್ಣೆಯನ್ನು ಸೇರಿಸಿ, 3ಚಮಚ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದಿನಾ ಸಾಯಂಕಾಲ ದೇವರ ಮನೆಯಲ್ಲಿ ಬಿಟ್ಟು ಬೇರೆ ಎಲ್ಲಾದರೂ ಒಂದು ಹಣತೆಯಲ್ಲಿ ಹತ್ತಿ ಹಾಕಿ ಮಿಕ್ಸ್ ಮಾಡಿದ ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು. ಇದರಿಂದ ಮನೆಯಲ್ಲಿ ದುಷ್ಟ ಶಕ್ತಿಗಳನ್ನು ಓಡಿಸಬಹುದು. ಇದು ಸುಲಭದ ಪರಿಹಾರ ಆಗಿದೆ.

By

Leave a Reply

Your email address will not be published. Required fields are marked *