ಸದ್ಯ ಭಾರತದಲ್ಲಿ ಕರೋನ ಮಹಾಮಾರಿಯ ವಿಷಯ ಬಿಟ್ಟರೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಎಂದರೆ ಅದು ಐಪಿಎಲ್ ವಿಷಯ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹೌದು ಇತ್ತೀಚಿನ ದಿನಗಳಲ್ಲಿ ಯಾರ ಬಾಯಿಯಲ್ಲಿ ಕೇಳಿದರೂ ಕೂಡ ಐಪಿಎಲ್ ವಿಷಯವೇ ಕೇಳಿಬರುತ್ತಿತ್ತು . ಸದ್ಯ ಐಪಿಎಲ್ ಅನ್ನುವುದು ಭಾರತದ ಕ್ರಿಕೆಟ್ ಪ್ರಿಯರಿಗೆ ಹಬ್ಬವನ್ನ ತಂದುಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳಿಗೆ ಸಪೋರ್ಟ್ ಮಾಡುತ್ತಿದ್ದ ಈ ಭಾರಿಯ ಐಪಿಎಲ್ ಇತ್ತೀಚೆಗೆ ಅಷ್ಟೇ ಮುಗಿದಿದೆ. ಇನ್ನು ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ತಂಡ ಅಂದರೆ ಅದೂ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಎಂದು ಹೇಳಬಹುದು.ಐಪಿಎಲ್ ಆರಂಭ ಆದಾಗಿನಿಂದ ಬೆಂಗಳೂರು ತಂಡ ವಿನ್ ಆಗದೆ ಇದ್ದರೂ ಕೂಡ ಐಪಿಎಲ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಹೇಳಬಹುದು.
ಇನ್ನು ಈ ಭಾರಿಯ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡ ಬಹಳ ಒಳ್ಳೆಯ ಪ್ರದರ್ಶನವನ್ನ ನೀಡಿತ್ತು, ಆದರೆ ಹೈದರಾಬಾದ್ ನಡುವೆ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಕಡೆಯ ತನಕ ಹೋರಾಟವನ್ನ ಮಾಡಿ ಕೊನೆಯಲ್ಲಿ ಸೋಲನ್ನ ಒಪ್ಪಿಕೊಂಡಿತು ನಮ್ಮ RCB ತಂಡ. ಇನ್ನು ಈ ಭಾರಿ ಐಪಿಎಲ್ ನಲ್ಲಿ RCB ತಂಡ ಸೋತಿದ್ದು ಅದೆಷ್ಟೋ ಅಭಿಮಾನಿಗಳಿಗೆ ಬಹಳ ನಿರಾಸೆಯನ್ನ ತಂದಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಈ ಭಾರಿ ಕಪ್ ಗೆಲ್ಲುವುದು ನಾವೇ ಎಂದು ಅದೆಷ್ಟೋ ಅಭಿಯಾನಿಗಳು ನಂಬಿಕೆಯನ್ನ ಇಟ್ಟುಕೊಂಡಿದ್ದರು. ಆದರೆ ಈ ಭಾರಿಯೂ ಅದೂ ಕನಸಾಗಿಯೇ ಉಳಿಯಿತು. ಇನ್ನು RCB ತಂಡದ ಹೆಸರಾಂತ ಆಟಗಾರ ಮತ್ತು ಆಪ್ತರಕ್ಷಕ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ತನ್ನ ಅಭಿಮಾನಿಗಳಲ್ಲಿ ಭಾವುಕದಿಂದ ಕ್ಷಮೆಯನ್ನ ಕೇಳಿದ್ದಾರೆ. ಹಾಗಾದರೆ ಎಬಿ ಡಿ ವಿಲಿಯರ್ಸ್ ಅಭಿಮಾನಿಗಳಿಗೆ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸದಾ ಐಪಿಎಲ್ ತಮ್ಮದೇ ಎಂದು ಕನವರಿಸುತ್ತಿರುವ ಅಭಿಮಾನಿಗಳಿಗೆ ಈ ಭಾರಿ ಕೂಡ RCB ತಂಡ ನಿರಾಸೆಯನ್ನ ಮೂಡಿಸಿದೆ. ಆದರೆ ಪ್ರತಿ ಭಾರಿಯಂತೆ ಈ ಭಾರಿ ಅಭಿಮಾನಿಗಳ ಮನಸನ್ನು ಗೆಲ್ಲುವಲ್ಲಿ ಬೆಂಗಳೂರು ತಂಡ ಯಶಸ್ಸನ್ನ ಸಾಧಿಸಿದೆ. ಇನ್ನು ತಂಡ ಪ್ಲೇ ಆಫ್ ತಲುಪಲು ಪ್ರಮುಖ ಪಾತ್ರವನ್ನ ವಹಿಸಿದ ಎಬಿ ಡಿ ವಿಲಿಯರ್ಸ್ ಪಂದ್ಯ ಮುಗಿದ ತಕ್ಷಣ ಅಭಿಮಾನಿಗಳನ್ನ ಕ್ಷಮೆಯನ್ನ ಕೇಳಿದ್ದು ಮುಂದಿನ ವರ್ಷ ತಂಡವನ್ನ ಇನ್ನಷ್ಟು ಬಲಿಷ್ಠವನ್ನಾಗಿ ಮಾಡಿಕೊಂಡು ಕಪ್ ಗೆಲ್ಲುವುದಾಗಿ ಭರವಸೆಯನ್ನ ನೀಡಿದ್ದಾರೆ. ಆಟವನ್ನ ಮುಗಿಸಿ ಡ್ರೆಸ್ಸಿಂಗ್ ರೂಮ್ ಕಡೆ ತಂಡದ ಆಟಗಾರರು ಬಂದನಂತರ ತಂಡದವರ ಜೊತೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಅವರು ನಾವು ಕಷ್ಟಪಟ್ಟು ಪ್ಲೇ ಆಫ್ ತಲುಪಿದ್ದೇವೆ ನಾವು ಮಾಡಿದ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ನಾವು ಗೆಲುವಿನಿಂದ ದೂರ ಉಳಿಯಬೇಕಾಗಿದೆ ಆದರೆ ಕಳೆದ ವರ್ಷ ಹಾದಿ ತಪ್ಪಿದ ತಂಡ ಈ ವರ್ಷ ಬಹಳ ಸುಧಾರಿಸಿಕೊಂಡಿದೆ ಮತ್ತು ಮುಂದಿನ ವರ್ಷ ಇನ್ನಷ್ಟು ಪ್ರಯತ್ನ ಮಾಡೋಣ ಎಂದು ನಾಯಕ ವಿರಾಟ್ ಕೊಹ್ಲಿ ಅವರು ತಂಡದ ಸದಸ್ಯರಿಗೆ ಧನ್ಯವಾದವನ್ನ ಹೇಳಿದ್ದಾರೆ.