ಅಬ್ರಹಮ್ ಬೆಂಜಮಿನ್ ಡಿ ವಿಲಿಯರ್ಸ್ ಫೆಬ್ರವರಿ 17 1984ರಲ್ಲಿ ಪ್ರೆಟೋರಿಯಾದ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದಾರೆ. ಇವರು ದಕ್ಷಿಣ ಆಫ್ರಿಕಾದ ಆಟಗಾರ. ಎಬಿಡೀ ವಿಲಿಯರ್ಸ್ ಏಕದಿನ ಹಾಗೂ ಟ್ವೆಂಟಿ20 ಪಂದ್ಯಗಳಿಗೆ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ. ಈತ ಬಲಗೈ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದು ಕೆಲವೊಮ್ಮೆ ಅಗ್ರಕ್ರಮಾಂಕದಲ್ಲೂ ಆಡುತ್ತಾರೆ. ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡದ ಪರ ಇವರು ಆಡುತ್ತಾರೆ. ಇವರ ಆಟವನ್ನು ವೀಕ್ಷಿಸಲು ಇವರ ಪತ್ನಿ, ತಾಯಿ ಮತ್ತು ಅತ್ತೆ ಬೆಂಗಳೂರಿಗೆ ಆಗಮಿಸಿದ್ದರು. ಆದ್ದರಿಂದ ನಾವು ಇಲ್ಲಿ ಎಬಿಡಿ ಅವರ ಬಗೆಗಿನ ಅವರ ಅಭಿಪ್ರಾಯವನ್ನು ತಿಳಿದುಕೊಳ್ಳೋಣ.
ಎಬಿ ಡಿವಿಲಿಯರ್ಸ್ ವಿಶ್ವದ ಅತ್ತ್ಯುತ್ತಮ ಕ್ಷೇತ್ರ ರಕ್ಷಕರಲ್ಲಿ ಒಬ್ಬರು. ಎಬಿ ಡೀ ವಿಲಿಯರ್ಸ್ ಐಸಿಸಿ ರಾಂಕಿಂಗ್‍ನ ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಏಕದಿನ ಪಂದ್ಯದ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಮೊದಲು ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಈತ ಕೆಲವೊಮ್ಮೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‍ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಪರವಾಗಿ ಆಡಿದ್ದರು. ಆದರೆ ನಂತರ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು.
ಎಬಿಡಿ ವಿಲಿಯರ್ಸ್ ಅತ್ಯಂತ ಪ್ರತಿಭಾಶಾಲಿ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. 2021ರ ಆವೃತ್ತಿಯ ಐಪಿಎಲ್ ನಲ್ಲಿ ಬೆಂಗಳೂರು ಪರ ಇವರು ಆಡುತ್ತಿದ್ದಾರೆ. ಇವರ ಆಟವನ್ನು ವೀಕ್ಷಿಸಲು ಇವರ ತಾಯಿ ಹೆಂಡತಿ ಹಾಗೂ ಅತ್ತೆ ಬೆಂಗಳೂರಿಗೆ ಬಂದಿದ್ದಾರೆ. ಎಬಿಡಿ ಅವರ ತಾಯಿ ಹಾಗೂ ಅತ್ತೆ ಮೊದಲನೇಯ ಬಾರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಎಬಿಡಿ ಅವರ ತಾಯಿಯವರು ಹೇಳುವಂತೆ ಅವರು ಮೂರನೇ ವಯಸ್ಸಿನಲ್ಲಿಯೇ ತಮ್ಮ ಅಣ್ಣಂದಿರ ಜೊತೆ ಕ್ರಿಕೆಟನ್ನು ಆಡುತ್ತಿದ್ದರು. ಎಬಿಡಿ ಅವರು ಮೊದಲು ಇಷ್ಟಪಡುವ ಆಟ ಟೆನಿಸ್. ಹೈಸ್ಕೂಲ್ ದಿನಗಳಲ್ಲಿ ಇವರು ಕ್ರಿಕೆಟ್ಗೆ ಹೆಚ್ಚಾಗಿ ಒಲವು ತೋರಿಸಿ ಸ್ಕೂಲ್ ಕ್ರಿಕೆಟ್ ಹಾಗೂ ನಂತರ ಸೌತ್ಆಫ್ರಿಕಾದ ಅಂಡರ್19 ತಂಡದಲ್ಲಿ ಆಡುತ್ತಾರೆ.
ಎಬಿಡಿ ಅವರು ಒಳ್ಳೆಯ ವ್ಯಕ್ತಿತ್ವವುಳ್ಳ ಆಟಗಾರರಾಗಿದ್ದಾರೆ. ಎಬಿಡಿ ಅತ್ತೆಯವರು ಮಗಳ ಸಂಗೀತ ಪ್ರೇಮದ ಬಗೆಗಿನ ವಿಚಾರವನ್ನು ಹೇಳಿಕೊಳ್ಳುತ್ತಾರೆ. ನಂತರ ಎಬಿಡಿ ಅವರ ಪತ್ನಿ ಅವರ ಮೊದಲ ಪರಿಚಯದ ಬಗ್ಗೆ ಹೇಳಿಕೊಳ್ಳುತ್ತಾರೆ. ಎಬಿಡಿ ಅವರ ತಾಯಿ ಹಾಗೂ ಎಬಿಡಿ ಪತ್ನಿಯವರ ತಂದೆ ಮತ್ತು ತಾಯಿಯವರು ವ್ಯವಹಾರದಿಂದ ಪರಿಚಿತರಾಗುತ್ತಾರೆ. ಇದರಿಂದ ಅವರಿಬ್ಬರ ಪರಿಚಯವಾಗಿ ಐದು ವರ್ಷಗಳ ನಂತರ ವಿವಾಹವಾಗುತ್ತಾರೆ. ನಂತರ ಎಬಿಡಿ ಅವರು ಅತ್ಯುತ್ತಮವಾಗಿ ಬಂದ ಒತ್ತಡಗಳನ್ನು ಎದುರಿಸುತ್ತಾರೆ ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ. ಹೀಗೆ ಇವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.