ನಮ್ಮ ಹೆಸರಿನ ಮೊದಲ ಅಕ್ಷರ ಪ್ರಾಮುಖ್ಯತೆ ಪಡೆದಿರುತ್ತದೆ. ಹೆಸರಿನ ಮೊದಲ ಅಕ್ಷರ A ಆಗಿದ್ದರೆ ಕೆಲವು ರಹಸ್ಯಗಳನ್ನು ಹೊಂದಿರುತ್ತಾರೆ ಅಲ್ಲದೆ ತಮ್ಮದೆ ವಿಭಿನ್ನ ಗುಣ ಸ್ವಭಾವವನ್ನು ಹೊಂದಿರುತ್ತಾರೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮೊದಲೆಲ್ಲ ಅಡ್ಡಾ ದಿಡ್ಡಿ ಅಜ್ಜ ಮುತ್ತಜ್ಜನ ಮುತ್ತಜ್ಜಿಯ ಹೆಸರನ್ನು ಇಡುತ್ತಿದ್ದರು ಆದರೆ ಈಗಿನ ದಿನಗಳಲ್ಲಿ ನಾಜೂಕಾಗಿ ಮಗುವಿಗೆ ಯಾವ ಅಕ್ಷರ ಬರುತ್ತದೆ ಎಂದು ನೋಡಿ ಆ ಅಕ್ಷರದಿಂದ ಹೆಸರನ್ನು ಇಡುತ್ತಾರೆ. ವ್ಯಕ್ತಿಯ ಜೀವನದಲ್ಲಿ ಅವನ ಹೆಸರು ನಂಬಿಕೆ, ಶಕ್ತಿ, ವಿಶ್ವಾಸ ನೀಡುತ್ತದೆ. ಹೆಸರು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಸಮಾಜದಲ್ಲಿ ಆತ ಹೇಗೆ ಗುರುತಿಸಿಕೊಳ್ಳುತ್ತಾನೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ ಎಂದು ಮನಃ ಶಾಸ್ತ್ರಜ್ಞರು ಹೇಳುತ್ತಾರೆ. ನಾವು ಯಾರನ್ನಾದರೂ ಹೊಸದಾಗಿ ಭೇಟಿ ಮಾಡಿದಾಗ ಮಾತು ಆರಂಭವಾಗುವುದು ನಿಮ್ಮ ಹೆಸರೇನು ಎಂಬ ಮಾತಿನಿಂದ ಅಲ್ಲದೆ ನಾವು ಯಾರನ್ನಾದರೂ ನೆನಪು ಮಾಡಿಕೊಂಡಾಗ ಅವರ ಹೆಸರನ್ನೊಮ್ಮೆ ನೆನಪು ಮಾಡಿಕೊಳ್ಳುತ್ತೇವೆ.

ಈಗೀಗ ಹೆಸರಿಡುವುದು ಟ್ರೆಂಡ್ ಆಗಿದೆ. ಹೆಣ್ಣಾದರೆ ಈ ಹೆಸರು ಗಂಡಾದರೆ ಈ ಹೆಸರು ಎಂದು ಮಗು ಹುಟ್ಟುವ ಮೊದಲೆ ನೋಡಿಕೊಳ್ಳುತ್ತಾರೆ. ಹೆಸರಿಡುವುದು ಕೆಲವರಿಗೆ ಸಂಭ್ರಮ ಇನ್ನೂ ಕೆಲವರಿಗೆ ಹೆಸರು ತಾನೆ ಎನ ಮಹಾ ಎನ್ನುವ ಅಸಡ್ಡೆಯು ಇರುತ್ತದೆ. ಯಾರಾದರೂ ನಮ್ಮ ಹೆಸರನ್ನು ವಕ್ರವಾಗಿ ಕರೆದರೆ ಕಣ್ಣು ಕೆಂಪು ಮಾಡಿ ನೋಡುತ್ತೇವೆ. ಕೆಲವರು ತಮ್ಮ ಹೆಸರಿಗೆ ಖ್ಯಾತಿ ತಂದುಕೊಟ್ಟರೆ ಇನ್ನು ಕೆಲವರು ಹೆಸರು ಬದಲಾಯಿಸಿ ಸಾಧನೆ ಮಾಡಿದವರು ಇದ್ದಾರೆ. ನಮ್ಮ ಹೆಸರಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರೆ ನಮಗೆ ಹೆಮ್ಮೆ ಎನಿಸುತ್ತದೆ ಹಾಗೂ ನಮ್ಮಲ್ಲಿ ಪೊಸಿಟಿವಿಟಿ ಹೆಚ್ಚುತ್ತದೆ. ನಮ್ಮ ಹೆಸರಿನ ಮೊದಲ ಅಕ್ಷರವು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಹೆಸರಿನ ಮೊದಲ ಅಕ್ಷರ ಅವರ ಗುಣ ಸ್ವಭಾವದ ಬಗ್ಗೆ ಹೇಳುತ್ತದೆ. A ಅಕ್ಷರ ಹೆಚ್ಚು ಪವರ್ ಫುಲ್ ಅಕ್ಷರವಾಗಿದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಧೈರ್ಯವಂತ, ಛಲವುಳ್ಳವರು ಆಗಿರುತ್ತಾರೆ, ಯಾವಾಗಲೂ ಸಾಹಸ, ಚಟುವಟಿಕೆಯಲ್ಲಿ ತೊಡಗುವವರು ಆಗಿರುತ್ತಾರೆ.

A ಅಕ್ಷರದ ಹೆಸರಿನವರು ಕೌಶಲ್ಯದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆ. ಇವರು ತಮ್ಮ ಜೀವನದಲ್ಲಿ ಗುರಿ ಇಟ್ಟುಕೊಂಡು ಬದುಕುತ್ತಾರೆ. ಇವರು ತಮ್ಮ ಸ್ವಾತಂತ್ರವನ್ನು ಪ್ರೀತಿಸುತ್ತಾರೆ ಹಾಗೂ ಸಂತೋಷವನ್ನು ಹಂಚುತ್ತಾರೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಸ್ವಲ್ಪ ಆಲಸ್ಯ ಹೊಂದಿರುತ್ತಾರೆ ಆದರೂ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಾಳ್ಮೆ ಹೊಂದಿರುತ್ತಾರೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಸ್ಪಷ್ಟವಾಗಿ ಮಾತನಾಡುತ್ತಾರೆ ಒಳಗೊಂದು ಹೊರಗೊಂದು ಮಾತನಾಡುವುದಿಲ್ಲ, ಇವರ ಮನಸ್ಸು ಹೆಚ್ಚು ಸ್ವಚ್ಛವಾಗಿರುತ್ತದೆ. ಇವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಕೆಲಸ ಮಾಡುವ ಸ್ಥಳದಲ್ಲಿ ಇವರ ಕೆಲಸದ ಬಗ್ಗೆ ಪ್ರಶಂಸೆ ಮಾಡುತ್ತಾರೆ. ನಮ್ಮ ಜೀವನದಲ್ಲಿ ಪ್ರಮುಖ ಘಟ್ಟ ಎಂದರೆ ಅದು ಮದುವೆ. ಸಂಖ್ಯಾಶಾಸ್ತ್ರ A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಸ್ವಲ್ಪ ನಿಧಾನ ಎಂದು ಹೇಳುತ್ತದೆ.

ಇವರಿಗೆ ಪ್ರೀತಿ, ಪ್ರೇಮ ಎಂದರೆ ಆಗುವುದಿಲ್ಲ ಎಂದಲ್ಲ ಆದರೆ ಇವರಿಗೆ ಭಾವನೆಗಳನ್ನು ವ್ಯಕ್ತಪಡಿಸುವುದು ಅಂದರೆ ಆಗುವುದಿಲ್ಲ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಗಂಡಂದಿರು ಹೃದಯವಂತರು ಹಾಗೂ ತಮ್ಮ ಹೆಂಡತಿಯನ್ನು ಎಲ್ಲಾ ವಿಷಯದಲ್ಲೂ ಗೌರವಿಸುತ್ತಾರೆ ಹೀಗಾಗಿ ತಮ್ಮ ಸಂಬಂಧ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತಾರೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾವುದಾದರು ತೀರ್ಮಾನ ಮಾಡಿದರೆ ಅದು ಪೂರೈಸುವವರೆಗೆ ಬಿಡುವವರಲ್ಲ, ಅವರಿಗೆ ಅವರ ಸಾಮರ್ಥ್ಯದ ಬಗ್ಗೆ ವಿಪರೀತ ನಂಬಿಕೆ ಇರುತ್ತದೆ. ಇವರು ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಿರುತ್ತಾರೆ. ಈ ಹೆಸರಿನವರು ಬಹಳ ಮೃದು ಸ್ವಭಾವದವರು ಹಾಗೂ ಬುದ್ಧಿವಂತರಾಗಿರುತ್ತಾರೆ. ಇವರು ಕೆಲಸಕ್ಕೆ ಹಾಗೂ ಸಮಯಕ್ಕೆ ಹೆಚ್ಚು ಮನ್ನಣೆ ಕೊಡುತ್ತಾರೆ, ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಾರೆ ಇವರು ಸುಮ್ಮನೆ ಕೂರುವುದಿಲ್ಲ ಯಾವುದಾದರೂ ಕೆಲಸದಲ್ಲಿ ತೊಡಗುತ್ತಾರೆ.

ಇವರು ಶಿಸ್ತಿನ ಜೀವನ ನಡೆಸುತ್ತಾರೆ. A ಅಕ್ಷರದ ಹೆಸರಿನವರು ಸುಂದರವಾಗಿ ಆಕರ್ಷಣೀಯ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಸ್ವಲ್ಪ ಕೋಪ ಸ್ವಭಾವ ಹೊಂದಿರುತ್ತಾರೆ. ವಿದ್ಯಾಕ್ಷೇತ್ರದಲ್ಲೂ ಈ ಹೆಸರಿನವರು ಸಾಧನೆ ಮಾಡುತ್ತಾರೆ. ಬಹಳ ಶ್ರಮ ಪಟ್ಟು ಓದುತ್ತಾರೆ ಹಾಗೂ ಉತ್ತಮ ಉದ್ಯೋಗಾವಕಾಶ ದೊರೆಯುತ್ತದೆ ನಿಷ್ಠೆಯಿಂದ ಕೆಲಸ ಮಾಡುವುದರಿಂದ ಉನ್ನತ ಹುದ್ದೆಗೆ ಹೋಗುತ್ತಾರೆ. ಇವರು ಮಾಡುವ ಪ್ರತಿ ಕೆಲಸದಲ್ಲಿ ದಿಗ್ವಿಜಯ ಸಾಧಿಸುತ್ತಾರೆ. ಇವರು ಅಂದುಕೊಂಡ ಗುರಿಯನ್ನು ತಲುಪುತ್ತಾರೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರನ್ನು ನಂಬಿದವರಿಗೆ ಯಾವಾಗಲೂ ಮೋಸ ಆಗುವುದಿಲ್ಲ ತಾವು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುತ್ತಾರೆ.

ಸ್ವಲ್ಪ ಜಂಭ ಹಾಗೂ ಪ್ರತಿಷ್ಟೆ ಅವರಿಗೆ ಇರುತ್ತದೆ. ಅವರು ಕುಟುಂಬದವರಿಗೆ ಅಚ್ಚು ಮೆಚ್ಚಿನವರಾಗಿರುತ್ತಾರೆ. ಅವರ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಅವರು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಾರೆ. ಕುಟುಂಬದವರಿಗೆ ಮೊದಲ ಆದ್ಯತೆ ಕೊಡುತ್ತಾರೆ. ಆರ್ಥಿಕವಾಗಿ ಉನ್ನತ ಸ್ಥಾನ ಪಡೆಯುತ್ತಾರೆ. ಅವರು ವಿನಾಕಾರಣ ಹಣ ಖರ್ಚು ಮಾಡುವುದಿಲ್ಲ ಅವರು ವ್ಯಾಪಾರ ವ್ಯವಹಾರದಲ್ಲಿ ಉನ್ನತಿ ಪಡೆಯುತ್ತಾರೆ. ಅವರಲ್ಲಿ ಸಮಯ ಪ್ರಜ್ಞೆ ಹೆಚ್ಚಾಗಿ ಇರುತ್ತದೆ. A ಅಕ್ಷರದ ಹೆಸರಿನವರಿಗೆ ಕೋಪ ಬೇಗ ಬರುತ್ತದೆ, ಅವರನ್ನು ಕೆಣಕಲು ಹೋಗಬಾರದು.

A ಅಕ್ಷರದ ಹೆಸರಿನವರಿಗೆ ಅದೃಷ್ಟದ ಸಂಖ್ಯೆ 6, ಅವರ ಅದೃಷ್ಟದ ಬಣ್ಣ ಕೆಂಪು ಬಣ್ಣ, ಯಶಸ್ಸು ತರುವ ಬಣ್ಣ ನೇರಳೆ ಆಗಿದೆ. ಹೊಸ ಕೆಲಸ ಮಾಡುವ ಮುನ್ನ ಮಹತ್ವದ ಭೇಟಿಯನ್ನು ಮನೆಯಿಂದ ಸ್ವಲ್ಪ ದೂರದಲ್ಲಿರುವ ದೇವಸ್ಥಾನದಲ್ಲಿ, ಕೆಫೆಯಲ್ಲಿ, ಹೋಟೆಲ್ ನಲ್ಲಿ ಮಾಡಿದರೆ ಒಳ್ಳೆಯದಾಗುತ್ತದೆ. ಈ ಹೆಸರಿನವರು ಯಾವಾಗಲೂ ಸಕಾರಾತ್ಮಕ ಶಕ್ತಿ ಇರುವಂತೆ ನೋಡಿಕೊಳ್ಳಿ. A ಅಕ್ಷರದ ಹೆಸರಿನವರ ಗುಣ ಸ್ವಭಾವದ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!