Smart phone: ಇತ್ತೀಚಿಗೆ ಈ ಕಾಮರ್ಸ್ ಟ್ರೇಡ್ ಆಗಿರುವ Amazon ಹಾಗೂ flipkart ಗಳಲ್ಲಿ oppo ಫೋನ್ ಅತಿ ಹೆಚ್ಚು ಮಾರಾಟವಾಗುತ್ತಿದ್ದು ಗ್ರಾಹಕರು ಇದನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ (oppo) ಕಂಪನಿಯ ಫೋನ್ಗಳಿಗೆ ಬೇಡಿಕೆ ಹೆಚ್ಚಾದಂತೆ ಅವುಗಳು ಪೂರೈಕೆಯನ್ನು ಸಹ ಈ ಕಂಪನಿ ತನ್ನದೇ ಆದ ರೀತಿಯ ಚಾಪನ್ನು ಮೂಡಿಸಿದೆ. ಇದರ ಭಾಗವಾಗಿಯೇ ಈ ಒಪ್ಪೋ A17 (oppo A17) ಸ್ಮಾರ್ಟ್ಫೋನ್ ಅನ್ನು ಗ್ರಾಹಕರು 50% ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಅಮೆಜಾನ್, (Amazon) ಫ್ಲಿಪ್ಕಾರ್ಟ್ ಶೈಲಿಯಲ್ಲಿಯೇ ಇದೀಗ ಜಿಯೋ ಮಾರ್ಟ್ (Jio Mart) ಪ್ರಸ್ತುತ ಎಲ್ಲಾ ಸ್ಮಾರ್ಟ್ಡಿವೈಸ್ಗಳಿಗೆ ಆಫರ್ ನೀಡಿದ್ದು, ಎಲೆಕ್ಟ್ರಾನಿಕ್ಸ್ ಫೆಸ್ಟ್ ಆರಂಭ ಮಾಡಿದೆ. ಈ ಮೂಲಕ ಯಾವುದೇ ಸ್ಮಾರ್ಟ್ ಡಿವೈಸ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಅವಕಾಶವನ್ನ ಗ್ರಾಹಕರಿಗೆ ನೀಡುತ್ತಿದೆ. ಅದರಂತೆ ಈಗ 50% ಡಿಸ್ಕೌಂಟ್ಆಫರ್ ಪಡೆದುಕೊಂಡಿರುವ oppo A17 ಸ್ಮಾರ್ಟ್ಫೋನ್ನ ಕ್ಷಣಗಳನ್ನು ತಿಳಿದುಕೊಳ್ಳೋಣ.
ಒಪ್ಪೋ A17 ಪ್ರಮುಖ ಲಕ್ಷಣ ಏನೆಂದರೆ ಈ ಸ್ಮಾರ್ಟ್ ಫೋನ್ 6.56 ಇಂಚಿನ HD+ LCD ಡಿಸ್ಪ್ಲೇ ಹೊಂದಿದ್ದು, ಇದು 720×1,612 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಈ ಫೋನ್ ಮೀಡಿಯಾಟೆಕ್ ಹಿಲಿಯೋ G35 ಆಕ್ಟಾ-ಕೋರ್ ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ ಕಂಪೆನಿಯ ಸ್ವಂತ ಕಲರ್ OS 12.1.1 ನಲ್ಲಿ ರನ್ ಆಗಲಿದೆ ಎಂದು ಹೇಳಲಾಗಿದೆ.
ಇದರ ಸ್ಟೋರೇಜ್ ಕೆಪ್ಯಾಸಿಟಿ ತುಂಬಾ ಚೆನ್ನಾಗಿದ್ದು ಈ ಫೋನ್ 4GB RAM ಅನ್ನು ಹೊಂದಿದೆ ಇದನ್ನು 8GB ವರೆಗೆ ವಿಸ್ತರಣೆ ಮಾಡಬಹುದಾದ ಅವಕಾಶವನ್ನು ಸಹ ಈ ಕಂಪನಿಯು ಬಳಕೆದಾರರಿಗೆ ನೀಡಿದೆ . ಇದರ ಜೊತೆಗೆ 64GB ಇಂಟರ್ ಸ್ಟೋರೇಜ್ ಅನ್ನ ಹಂದಿದ್ದು ಇದಿಷ್ಟೇ ಅಲ್ಲದೆ, ಮೈಕ್ರೋ ಎಸ್ಡಿ ಕಾರ್ಡ್ ಬಳಕೆ ಮಾಡುವ ಮೂಲಕ ಗ್ರಾಹಕರು 1TB ವರೆಗೂ ಸ್ಟೋರೇಜ್ ವಿಸ್ತರಿಸಬಹುದಾಗಿದೆ.
ಇದರ ಕ್ಯಾಮೆರಾ ವಿಶೇಷತೆ ಗಮನಿಸಿದರೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಮತ್ತು f/2.8 ಆಯ್ಕೆಯೊಂದಿಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಒಳಗೊಂಡಿದೆ.ಇನ್ನುಳಿದಂತೆ ಸೆಲ್ಫಿಗಾಗಿ f/2.2 ಆಯ್ಕೆಯೊಂದಿಗೆ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ಇನ್ನು ಈ ಒಪ್ಪೋ A17 ಫೋನ್ನ ಬ್ಯಾಟರಿ 5,000mAh ಸಾಮರ್ಥ್ಯದ ಬ್ಯಾಟರಿ ಆಗಿದ್ದು ದೀರ್ಘ ಸಮಯ ಬ್ಯಾಕಪ್ ನೀಡಲಿದೆ. ಜೊತೆಗೆ ವೈ-ಫೈ 5, ಬ್ಲೂಟೂತ್ ಆವೃತ್ತಿ v5.3, ಜಿಪಿಎಸ್, A-ಜಿಪಿಎಸ್, ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.
50% ಡಿಸ್ಕೌಂಟ್ನಲ್ಲಿ oppo A17: ಜಿಯೋ ಮಾರ್ಟ್ನಲ್ಲಿ ಈ ಆಫರ್ ಲಭ್ಯವಿದ್ದು, 50 % ಡಿಸ್ಕೌಂಟ್ ಪಡೆದುಕೊಳ್ಳುವ ಮೂಲಕ 24,999 ರೂ. ಗಳ ಮೂಲ ಬೆಲೆಯ ಫೋನ್ 12,000 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ ಅದಾಗ್ಯೂ ನೀವು ಹಲವಾರು ಬ್ಯಾಂಕ್ಗಳ ಕಾರ್ಡ್ಗಳ ಮೇಲೂ ಕ್ಯಾಶ್ಬ್ಯಾಕ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದರೆ 2,500 ರೂ. ಗಳ ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಈ oppo A17 ಫೋನ್ ಅನ್ನು 10,000 ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದಾಗಿದೆ.
ಜಿಯೋ ಮಾರ್ಟ್ನಲ್ಲಿ ಮೊದಲ ಬಾರಿಗೆ ಖರೀದಿ ಮಾಡುತ್ತಿರುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಒಮ್ಮೆಲೆ ಇಷ್ಟು ಹಣ ಪಾವತಿ ಮಾಡಲು ಸಾಧ್ಯವಿಲ್ಲ ಎನ್ನುವವರಿಗೆ ಇಎಮ್ಐ ಆಯ್ಕೆಯನ್ನೂ ಸಹ ನೀಡಲಾಗಿದೆ.
ಇದನ್ನೂ ಓದಿ..Jio Recharge: ಜಿಯೋ ರೀಚಾರ್ಜ್ ಹೊಸ ಪ್ಲಾನ್ ಗೆ ದಂಗಾದ ಏರ್ಟೆಲ್, ಐಪಿಎಲ್ ಅಭಿಮಾನಿಗಳು ಫುಲ್ ಖುಷ್