ಈ ಭೂಮಿಯಲ್ಲಿ ಕೆಲವೊಂದು ಆಶ್ಚರ್ಯಕರ ಸತ್ಯ ಘಟನೆಗಳು ನಂಬಲಸಾಧ್ಯವಾದ ಘಟನೆಗಳು ನಡೆಯುತ್ತದೆ. ಕೆಲವೊಂದು ಸಾಮಾನ್ಯವಾಗಿ ಅದರದೇ ಆದ ವಿಶೇಷತೆಯನ್ನು, ಸತ್ಯತೆಯನ್ನು, ಹೊಂದಿರುತ್ತದೆ. ಹೀಗೆ ಇರುವ ಕೆಲವೊಂದು ವಿಶೇಷ ಸತ್ಯ ಘಟನೆಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ನಮ್ಮ ಹುಟ್ಟು ಮತ್ತು ಸಾವು ನಮಗೆ ತಿಳಿಯಲು ಸಾಧ್ಯವಿಲ್ಲ. ಆದರೆ ಇಲ್ಲೊಂದು ವಿಶೇಷವಾದ ಕೈಗಡಿಯಾರವನ್ನು ತಯಾರಿಸಿದ್ದಾರೆ. ಇದು ಮನುಷ್ಯನ ಸಾವಿನ ಸಮಯವನ್ನು ತೋರಿಸುತ್ತದೆ. ಇದಕ್ಕೆ ಡೆತ್ ವಾಚ್ ಅಂತಲೂ ಕರೆಯುತ್ತಾರೆ. ಈ ಗಡಿಯಾರವು ಮನುಷ್ಯನ ಆರೋಗ್ಯದ ಸ್ಥಿತಿ, ಹೆಂಗಸು, ಗಂಡಸು,ಅವರವಯಸ್ಸಿನ ಆಧಾರದ ಮೇಲೆ ಅವನ ಸಾವಿನ ಸಮಯವನ್ನು ತೋರಿಸುತ್ತದೆ. ಇದರ ಉಪಯೋಗವೇನೆಂದರೆ ಮನುಷ್ಯ ತನ್ನ ಸಾವಿನ ಸಮಯವನ್ನು ಅರಿತಾಗ ಇರುವ ಪ್ರತಿಯೊಂದು ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಇನ್ನೊಂದು ವಿಶೇಷತೆ ಸಂಗತಿಯೇನೆಂದರೆ ಅಮೆರಿಕಾದ ಒಬ್ಬ ಮಹಿಳೆ ಒಂದು ಹಂದಿಯನ್ನು ಸಾಕಿರುತ್ತಾಳೆ. ಒಂದು ದಿನ ಈ ಮಹಿಳೆ ಅಡುಗೆ ಮಾಡುತ್ತಿರುವಾಗ ತೀವ್ರವಾದ ಎದೆನೋವು ಕಾಣಿಸಿಕೊಂಡು ನರಳಾಡುತ್ತಿರುತ್ತಾಳೆ. ಆಕೆಯನ್ನು ನೋಡಿ ಹಂದಿಯು ಸರಿಯಾದ ಯೋಚನೆ ಮಾಡಿ ಸರಿಯಾದ ಸಮಯಕ್ಕೆ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿ ಆಕೆಯನ್ನು ಬದುಕಿಸುತ್ತದೆ. ಹಂದಿಗಳು ನಾಯಿ, ಬೆಕ್ಕು ಗಳಿಗಿಂತ ಹೆಚ್ಚು ಚುರುಕಾಗಿ ಇರುತ್ತದೆ.
ಚೀನಾದವರು ಕೃತಕ ಚಂದ್ರನನ್ನು ನಿರ್ಮಿಸಲು ಹೊರಟಿದ್ದಾರೆ. ಏಕೆಂದರೆ ಚೀನಾದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಕಾರಣ ವಿದ್ಯುತ್ ಬಳಕೆಯ ಕೂಡ ಹೆಚ್ಚಾಗಿರುತ್ತದೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಕೃತಕ ಚಂದ್ರನನ್ನು ಆಕಾಶದಲ್ಲಿ ಬಿಡಲು ನಿರ್ಧರಿಸಿದ್ದಾರೆ. ಬರ್ಡ್ಸ್ ಕೀಪರ್ಸ್ ಎಂಬ ವಿಶೇಷವಾದ ಮೀನು ನೀರಿನಲ್ಲಿ ಅಲ್ಲದೆ ಭೂಮಿಯ ಮೇಲೆ ಕೂಡ ಬದುಕಬಲ್ಲದು. ಈ ಮೀನುಗಳು ನೀರಿನಿಂದ ನೆಲದ ಮೇಲೆ ಬಂದ ಕೂಡಲೇ ತನ್ನ ಚರ್ಮದ ಮೂಲಕ ಉಸಿರಾಟವನ್ನು ನಡೆಸುತ್ತದೆ.
1995 ರಲ್ಲಿ ನಮ್ಮ ವಿಜ್ಞಾನಿಗಳು 10000 ಲೈಟ ಇಯರ್ಸ್ ದೂರದಲ್ಲಿ ಒಂದು ಬಗೆಯ ಗ್ಯಾಸ್ ನಿಂದ ತುಂಬಿದ ಮೋಡವನ್ನು ಗುರುತಿಸಿದ್ದಾರೆ. ಈ ಮೋಡವೆಲ್ಲಾ ಆಲ್ಕೋಹಾಲ್ ನಿಂದ ತುಂಬಿದೆ. ಅದರಲ್ಲಿ ತುಂಬಾ ಬಿಯರ್ ಇರಬಹುದೆಂದು ಅಂದಾಜಿಸಲಾಗಿದೆ. ಇದನ್ನು ಭೂಮಿಯ ಮೇಲೆ ತಂದರೆ 100 ವರ್ಷಗಳ ಕಾಲ ಇಡಿ ಭೂಮಂಡಲದಲ್ಲಿರುವ ಎಲ್ಲ ಜನರಿಗೆ ನೀಡುವಷ್ಟು ಬಿಯರ್ ಇದೆ ಎಂದು ಅಂದಾಜಿಸಲಾಗಿದೆ.
ಸುಜುಕಿ ಆಲ್ಟೊ 800 ಗಾಡಿಯನ್ನು ಭಾರತದಲ್ಲಿ ಹೊರತುಪಡಿಸಿ ಬಾಕಿಯೆಲ್ಲ ದೇಶದಲ್ಲಿ ಬ್ಯಾನ್ ಮಾಡಿದ್ದಾರೆ. ಕಾರಣವೆಂದರೆ ಒಂದು ಸಂಸ್ಥೆ ನಡೆಸುವ ಸೇಫ್ಟಿ ಟೆಸ್ಟ್ನಲ್ಲಿ ಇದು ಫೇಲ್ ಆಗಿದೆ. ಅಂದರೆ ಅಪಘಾತವಾದ ಸಮಯದಲ್ಲಿ ಚಾಲಕ ಮತ್ತು ಅದರಲ್ಲಿ ಸಂಚರಿಸುವವರು ಸಾವಿಗೀಡಾಗುವದು ಹೆಚ್ಚಾಗಿರುತ್ತದೆ. ಆದಕಾರಣ ಭಾರತವನ್ನು ಹೊರತುಪಡಿಸಿ ಬಾಕಿ ಎಲ್ಲಾ ದೇಶದಲ್ಲಿ ಈ ಗಾಡಿಯನ್ನು ಬ್ಯಾನ್ ಮಾಡಿದ್ದಾರೆ.
ಮನುಷ್ಯನು ಈ ಭೂಮಿಯ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮನುಷ್ಯ ಜೊತೆಗೂಡಿ ಈ ಭೂಮಿಯ ಮೇಲೆ 87 ಲಕ್ಷ ಜೀವರಾಶಿಗಳಿವೆ. ವಿಶೇಷ ಬಗೆಯ ಪ್ರಾಣಿ ಪಕ್ಷಿಗಳು, ಅನೇಕ ವಿಧದ ಗಿಡಮರಗಳು, ಅನೇಕ ಬಗೆಯ ಅಣಬೆಗಳು, ಅಮೀಬಾಗಳು ಜೀವಿಸುತ್ತಿದೆ. ಇದರಲ್ಲಿ ಮನುಷ್ಯರು ಕೂಡ ಒಂದು ಬಗೆಯ ಜೀವಿಯಾಗಿ ಹುಟ್ಟಿ ಅದೃಷ್ಟವಂತನಾಗಿದ್ದಾನೆ.
ಹೆಚ್ಚಾಗಿ ಗಾಯಕರು ಹಾಡುವಾಗ ತಮ್ಮ ಒಂದು ಕಿವಿಯನ್ನು ಮುಚ್ಚಿಕೊಂಡು ಹಾಡುತ್ತಾರೆ. ಕಾರಣವೇನೆಂದರೆ ಇನ್ಸ್ಟ್ರುಮೆಂಟ್ ಸೌಂಡ್ ಅಥವಾ ಪಕ್ಕದ ಗಾಯಕರ ಸೌಂಡ್ ನಿಂದ ತಮ್ಮ ಗಾಯನದ ಸೌಂಡ್ ಅನ್ನು ಕೇಳಲು ವೈಜ್ಞಾನಿಕ ಟ್ರಿಕ್ ಅನ್ನು ಬಳಸುತ್ತಾರೆ. ಸಾಮಾನ್ಯವಾಗಿ ಒಂದು ಕಿವಿಯನ್ನು ಮುಚ್ಚಿದಾಗ ಬೇರೆ ಸುತ್ತಮುತ್ತಲಿನ ಶಬ್ದಗಳು ಕಡಿಮೆ ಕೇಳಿಸುತ್ತದೆ. ಇದರಿಂದ ತಮ್ಮ ಶಬ್ದಗಳ ಮೇಲೆ ಹೆಚ್ಚು ಗಮನಕೊಡಲು ಅನುಕೂಲವಾಗುತ್ತದೆ.
ಇನ್ನೊಂದು ಸತ್ಯಸಂಗತಿಯೆಂದರೆ ನೀಲಗಿರಿ ಮರದ ಎಲೆಯಲ್ಲಿ ಬಂಗಾರದ ಅಂಶವನ್ನು ಹೊಂದಿದೆ. ವಿಜ್ಞಾನಿಗಳ ಅನ್ವೇಷಣೆಯಲ್ಲಿ ಬಯಲಾದ ವಿಚಾರವೇನೆಂದರೆ ನೀಲಗಿರಿ ಮರದ ಬೇರುಗಳು ನೀರಿಗಾಗಿ ಬಹಳ ಆಳದವರೆಗೆ ಕಳುಹಿಸುತ್ತದೆ. ಆ ಸಮಯದಲ್ಲಿ ಆ ಜಾಗದಲ್ಲಿ ಬಂಗಾರದ ಗಣಿಗಳಿದ್ದರೆ ಬಂಗಾರದ ಅಂಶವನ್ನು ಈ ಬೇರುಗಳು ಹೀರಿಕೊಂಡು, ಕಾಂಡಗಳಿಗೆ ಹೋಗಿ, ತಮಗೆ ಬೇಡವಾದ ವಸ್ತುವನ್ನು ಎಲೆಗಳ ಮೂಲಕ ಹೊರಹಾಕುತ್ತವೆ. ಆದಕಾರಣ ಈ ಎಲೆಗಳಲ್ಲಿ ಬಂಗಾರದ ಅಂಶಗಳು ಕಾಣಿಸಿಕೊಳ್ಳುತ್ತದೆ, ಅಂದರೆ ಈ ನೀಲಗಿರಿ ಮರ ಇರುವ ಜಾಗದಲ್ಲಿ ಬಂಗಾರದ ಅಂಶ ಇದ್ದಾಗ ಮಾತ್ರ ಎಲೆಗಳಲ್ಲಿ ಬಂಗಾರದ ಅಂಶಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಇನ್ನೂ ಅನೇಕ ವಿಚಿತ್ರವಾದ ಸತ್ಯ ಘಟನೆಗಳು ಕೂಡ ಇವೆ. ಆಶ್ಚರ್ಯವೆನಿಸಿದರೂ ಅವನ್ನು ನಾವು ನಂಬಲೇ ಬೇಕು.