ಪ್ರಿಯೆ.ನೀನು ಕೇಳಿದ್ರೆ ಚಂದ್ರನನ್ನೇ ಬೇಕಾದ್ರೂ ತಂದುಕೊಡ್ತೀನಿ ಅನ್ನೋದು ಸಿನಿಮಾಗಳಲ್ಲಿ, ಕಥೆ ಕಾದಂಬರಿಗಳಲ್ಲಿ ಕೇಳಿಬರೋ ಡೈಲಾಗ್. ಆದ್ರೆ ಇಲ್ಲೊಬ್ಬರು ಪತಿ ಈ ಮಾತನ್ನ ನಿಜವಾಗಿಸಿದ್ದಾರೆ.
ಮದುವೆ ವಾರ್ಷಿಕೋತ್ಸವಕ್ಕಾಗಿ ತನ್ನ ಮಡದಿಗೆ ಚಂದ್ರನ ಮೇಲಿನ ಮೂರು ಎಕರೆ ಜಾಗವನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ ಅಂದ್ರೆ ನೀವು ನಂಬಲೇಬೇಕು. ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುದ್ದಿನ ಮಡದಿಗೆ ಚಂದ್ರನ ಮೇಲೆ 3 ಎಕರೆ ಭೂಮಿ ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ ಪತಿರಾಯ.
ರಾಜಸ್ಥಾನದ ಅಜ್ಮೆರ್ ನಿವಾಸಿ ಧರ್ಮೇಂದ್ರ ಅನಿಜಾ ಹಾಗೂ ಸಪ್ನಾ ದಂಪತಿ ಡಿಸೆಂಬರ್ 24ರಂದು ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದಾರೆ. ಇದು ಅವರ 8ನೇ ವರ್ಷದ ಮದುವೆ ವಾರ್ಷಿಕೋತ್ಸವವಾಗಿದ್ದ ಹಿನ್ನೆಲೆ ಪತ್ನಿಗೆ ಏನಾದ್ರೂ ಸ್ಪೆಷಲ್ ಗಿಫ್ಟ್ ಕೊಡಬೇಕು ಅಂತ ಧರ್ಮೇಂದ್ರ ಅಂದುಕೊಂಡಿದ್ರಂತೆ. ಎಲ್ಲರೂ ಕಾರ್, ಒಡವೆ ಇತ್ಯಾದಿ ವಸ್ತುಗಳನ್ನ ಕೊಡ್ತಾರೆ. ಆದ್ರೆ ನಾನು ವಿಭಿನ್ನವಾಗಿ ಏನಾದ್ರೂ ಮಾಡಬೇಕು ಅನ್ನಿಸಿತು. ಹೀಗಾಗಿ ನನ್ನ ಪತ್ನಿಗಾಗಿ ಚಂದ್ರನ ಮೇಲೆ ಜಾಗವನ್ನ ಖರೀದಿ ಮಾಡಿದೆ ಎಂದು ಧರ್ಮೇಂದ್ರ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರೋ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಧರ್ಮೇಂದ್ರ ಚಂದ್ರನ ಮೇಲಿನ ಜಾಗವನ್ನ ಕೊಂಡುಕೊಂಡಿದ್ದಾರೆ. ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ವರ್ಷ ಸಮಯ ಬೇಕಾಯ್ತು. ಈಗ ನನಗೆ ಸಂತೋಷವಾಗಿದೆ. ಬಹುಶಃ ಚಂದ್ರನ ಮೇಲೆ ಜಾಗ ಖರೀದಿಸಿರೋ ರಾಜಸ್ಥಾನದ ಮೊದಲ ವ್ಯಕ್ತಿ ನಾನೇ ಅನ್ನಿಸುತ್ತದೆ ಅಂತ ಧರ್ಮೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.
ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುದ್ದಿನ ಮಡದಿಗೆ ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡುವ ಮೂಲಕ ರಾಜಸ್ಥಾನದ ವ್ಯಕ್ತಿಯೊಬ್ಬರು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ತನಗಾಗಿ ಚಂದ್ರನ ತುಂಡನ್ನೇ ಗಿಫ್ಟ್ ಕೊಟ್ಟ ಪತಿಯ ಪ್ರೀತಿಗೆ ಸಪ್ನಾ ಮಾರುಹೋಗಿದ್ದಾರೆ. ಇಂಥ ಸ್ಪೆಷಲ್ ಉಡುಗೊರೆಯನ್ನ ನಾನು ನಿರೀಕ್ಷೆ ಮಾಡಿರಲಿಲ್ಲ. ವೃತ್ತಿಪರ ಇವೆಂಟ್ ಆರ್ಗನೈಸರ್ಗಳಿಂದ ಪಾರ್ಟಿ ಆಯೋಜನೆ ಮಾಡಿಸಿದ್ದರು. ಅವರು ಹಾಕಿದ್ದ ಸೆಟ್ಟಿಂಗ್ ನಂಬಲಸಾಧ್ಯವಾಗಿತ್ತು. ನಾವು ನಿಜಕ್ಕೂ ಚಂದ್ರನ ಮೇಲೆ ಇದ್ದೇವೆ ಎಂಬತ್ತೆ ಭಾಸವಾಗ್ತಿತ್ತು. ಆ ಸಂಭ್ರಮದ ವೇಳೆ ನನ್ನ ಪತಿ, ಫ್ರೇಮ್ ಮಾಡಿಸಿದ ಚಂದ್ರನ ಮೇಲಿನ ಆಸ್ತಿ ದಾಖಲೆಯ ಪ್ರಮಾಣಪತ್ರವನ್ನ ನನಗೆ ಗಿಫ್ಟ್ ಆಗಿ ಕೊಟ್ಟರು ಅಂತ ಅವರು ಹೇಳಿದ್ದಾರೆ. ಇನ್ನು 2018ರಲ್ಲಿ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಚಂದ್ರನಲ್ಲಿ ಭೂಮಿ ಖರೀದಿಸಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಬೋಧಗಯಾದ ನಿವಾಸಿ ನೀರಜ್ ಕುಮಾರ್ ಸಹ ಚಂದ್ರನಲ್ಲಿ ಒಂದು ಎಕರೆ ಖರೀದಿಸಿದ್ದರು.