ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು. ಹಲವು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅದರಲ್ಲಿ ಗಂಗಮ್ಮ ಎನ್ನುವವರು ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ ಹಾಗೂ ಅವರ ಪ್ರಚಾರದ ಪ್ರಣಾಳಿಕೆ ಹೇಗಿದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಲರವ ಹೆಚ್ಚಿದ್ದು ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅಂತೆಯೇ ತುಮಕೂರು ಜಿಲ್ಲೆಯ ಪಂಚಾಯಿತಿಯಲ್ಲಿ ಡಿಸೆಂಬರ್ 22 ರಂದು ಮತದಾನ ನಡೆಯಲಿದೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದ ಕಲ್ಕೆರೆ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಯಲ್ಲಿ ಗಂಗಮ್ಮ ಹೆಚ್ ಅಭ್ಯರ್ಥಿ ಚಪ್ಪಲಿ ಗುರುತಿನ ಮೂಲಕ ಕಣಕ್ಕಿಳಿದಿದ್ದಾರೆ. ಅವರು ನೀಡಿರುವ ಭರವಸೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲೂ ವಿಶೇಷವೆಂದರೆ ಗಂಗಮ್ಮ ಗೆದ್ದರೆ ಮಾಡುವ ಕೆಲಸಗಳಿಗಿಂತ ಸೋತರೆ ಮಾಡುವ ಕೆಲಸಗಳ ಪಟ್ಟಿಯೇ ಚೆನ್ನಾಗಿದೆ.

ಇನ್ನೊಂದು ವಿಶೇಷವೆಂದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನವನ್ನು ಗಂಗಮ್ಮ ಸೆಳೆದಿದ್ದಾರೆ. ಅವರು ಸಹ ತಮ್ಮ ಫೇಸ್ ಬುಕ್ ಪೋಸ್ಟ್‌ನಲ್ಲಿ ‘ಇದೊಂದು ವಿನೂತನ ಚುನಾವಣಾ ಪ್ರಚಾರ ಪತ್ರ’. ಇದನ್ನು ಇದುವರೆಗೆ ನೋಡಿರಲಿಲ್ಲ ಎಂದು ಪ್ರಣಾಳಿಕೆ ಪೋಟೋವನ್ನು ಶೇರ್ ಮಾಡಿದ್ದಾರೆ. ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಗಂಗಮ್ಮ ಪ್ರಣಾಳಿಕೆ ಹರಿದಾಡುತ್ತಿದೆ. ಗಂಗಮ್ಮ ಅವರನ್ನು ಸೋಲಿಸುವುದಕ್ಕಿಂತ ಗೆಲ್ಲಿಸುವುದೇ ಉತ್ತಮ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಕಲ್ಕೆರೆ ಮಾತ್ರವಲ್ಲ ಇಡೀ ರಾಜ್ಯದ ಜನರು ಈ ಕುರಿತು ಆಲೋಚಿಸುವಂತೆ ಮಾಡಿದ್ದಾರೆ.

ಕಲ್ಕೆರೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಗಂಗಮ್ಮ ತಮ್ಮ ಗ್ರಾಮದ ಮತದಾರರ ಬಳಿ ಮಾತಯಾಚನೆ ಮಾಡಲು ಕರಪತ್ರವೊಂದನ್ನು ಹೊರಡಿಸಿದ್ದಾರೆ. ಅದರಲ್ಲಿ ಗೆದ್ದರೆ ಮಾಡುವ ಕೆಲಸಗಳು, ಸೋತರೆ ಮಾಡುವ ಕೆಲಸಗಳು ಎಂಬ ಎರಡು ಪಟ್ಟಿ ಇದೆ. ಗೆದ್ದರೆ ದೇವಾಲಯ ಮತ್ತು ಅರಳಿ ಕಟ್ಟೆ ಕಟ್ಟಿಸುವ ಭರವಸೆ ಇದೆ. ರಸ್ತೆ ಮಾಡಿಸುವುದು, ನೀರು ರಸ್ತೆಗೆ ಹೋಗದಂತೆ ಸಿ.ಸಿ. ಚರಂಡಿ ಮಾಡಿಸುವ ಭರವಸೆ ಕೊಡಲಾಗಿದೆ. ಒಂದು ವೇಳೆ ಗಂಗಮ್ಮ ಚುನಾವಣೆಯಲ್ಲಿ ಸೋತರೆ ಮಾಡುವ ಕೆಲಸಗಳು ಯಾವುದೆಂದರೆ.

ಅನರ್ಹವಾಗಿ ಪಡೆದಿರುವ ರೇಷನ್ ಕಾರ್ಡ್ ರದ್ದು, ಸುಳ್ಳು ಮಾಹಿತಿ ಕೊಟ್ಟು ಪಡೆಯುತ್ತಿರುವ ವಿವಿಧ ಯೋಜನೆಗೆ ಹಣ ಕಟ್ ಮಾಡಿಸುವುದು. ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಇದರಲ್ಲಿ ಸೇರಿವೆ. ವಿಭಿನ್ನವಾಗಿ ಗಂಗಮ್ಮ ಅವರು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟಿದ್ದಾರೆ. ಒಟ್ಟಾರೆಯಾಗಿ ಅವರು ಗೆಲ್ಲುತ್ತಾರಾ, ಸೋಲುತ್ತಾರಾ ಎಂದು ಡಿಸೆಂಬರ್ 30ಕ್ಕೆ ಗೊತ್ತಾಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!