ನಮ್ಮ ಶರೀರದಲ್ಲಿ ಯಾವುದೋ ಕಾರಣದಿಂದ ಬೀಳುವ ಸ್ಟ್ರೆಚ್ ಮಾರ್ಕ್ಸ್ ವಾಸಿಯಾಗುವುದೇ ಇಲ್ಲ ಇದಕ್ಕೆ ಪರಿಹಾರವಿಲ್ಲ ಎಂದು ತಿಳಿದುಕೊಂಡಿರುತ್ತೇವೆ ಆದರೆ ಮನೆಯಲ್ಲೇ ಸಿಗುವ ನೈಸರ್ಗಿಕ ಸಾಮಗ್ರಿಗಳನ್ನು ಬಳಸಿ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡಿಕೊಳ್ಳಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮ ಕೂಡ ಆಗುವುದಿಲ್ಲ. ಹಾಗಾದರೆ ಶರೀರದ ಮೇಲೆ ಸ್ಟ್ರೆಚ್ ಮಾರ್ಕ್ ಹೇಗೆ ಆಗುತ್ತದೆ ಹಾಗೂ ಇದಕ್ಕೆ ಸುಲಭ ಪರಿಹಾರ ಏನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ದಪ್ಪ ಇದ್ದವರು ತೆಳ್ಳಗಾದಾಗ ದೇಹದ ಮೇಲೆ ಸ್ಟ್ರೆಚ್ ಮಾರ್ಕ್ ಬೀಳುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರ ದೇಹದ ಮೇಲೆ ಹಲವು ಬದಲಾವಣೆಗಳಾಗುವುದು ಸಹಜ ಅವರಿಗೆ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ಈ ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ ಪರಿಹಾರವಿಲ್ಲ ಎಂದು ಬಹಳಷ್ಟು ಜನರು ತಿಳಿದುಕೊಂಡಿರುತ್ತಾರೆ ಆದರೆ ಇದನ್ನು ಮನೆಯಲ್ಲೇ ಸಿಗುವ ನೈಸರ್ಗಿಕ ಉತ್ಪನ್ನಗಳ ಮೂಲಕ ನಿವಾರಿಸಿಕೊಳ್ಳಬಹುದು. ಸಕ್ಕರೆ ಸ್ಕ್ರಬ್ ಇದನ್ನು ಮಾಡಿಕೊಳ್ಳುವುದರಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ ಒಂದು ಕಪ್ ಸಕ್ಕರೆಗೆ ಒಂದು ಸ್ಪೂನ್ ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಿ ಸಮುದ್ರದ ಒದ್ದೆ ಮರಳಿಗೆ ಮಿಶ್ರಣ ಮಾಡಿಕೊಂಡು ಸ್ವಲ್ಪ ನಿಂಬೆ ರಸ ಹಾಕಿಕೊಂಡು ಸರಿಯಾಗಿ ಸ್ಟ್ರೆಚ್ ಮಾರ್ಕ್ಸ್ ಇರುವಲ್ಲಿ ನಿಧಾನವಾಗಿ ಸ್ಕ್ರಬ್ ಮಾಡಿಕೊಳ್ಳಬೇಕು ಹೀಗೆ ವಾರದಲ್ಲಿ ಹಲವು ಬಾರಿ ಮಾಡಿಕೊಳ್ಳಬಹುದು ಇದರಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆ ಹಲವು ರೀತಿಯಲ್ಲಿ ಶರೀರಕ್ಕೆ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯನ್ನು ಪ್ರತಿದಿನ ಸ್ಟ್ರೆಚ್ ಮಾರ್ಕ್ಸ್ ಇರುವಲ್ಲಿ ಹಚ್ಚಿಕೊಂಡರೆ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ.
ಅಲೋವೆರಾದಲ್ಲಿರುವ ಲೋಳೆಯನ್ನು ತೆಗೆದು ಸ್ಟ್ರೆಚ್ ಮಾರ್ಕ್ ಇರುವಕಡೆ ಹಚ್ಚಿ 30 ನಿಮಿಷ ಬಿಟ್ಟು ಸ್ನಾನ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ ಮಾಯವಾಗುತ್ತದೆ ಅಲ್ಲದೆ ಇದು ಬೇರೆ ಬೇರೆ ಕಲೆಗಳನ್ನು ಸಹ ದೂರ ಮಾಡುತ್ತದೆ. ಹೈಲುರಾನಿಕ್ ಆಮ್ಲವನ್ನು ಹಚ್ಚಿಕೊಳ್ಳುವುದರಿಂದ ಸ್ಟ್ರೆಚ್ ಮಾರ್ಕ್ ನಿವಾರಣೆಯಾಗಿ ಚರ್ಮ ಕಾಂತಿಯುತವಾಗುತ್ತದೆ. ಶರೀರಕ್ಕೆ ವಿಟಮಿನ್ ಇ ಸಿಗುವುದರಿಂದ ಚರ್ಮ ಮೃದುವಾಗುತ್ತದೆ, ಯೌವ್ವನಯುತ ತ್ವಚೆಯನ್ನು ನೀಡುತ್ತದೆ. ವಿಟಮಿನ್ ಇ ಹೇರಳವಾಗಿರುವ ಆಹಾರವನ್ನು ಸೇವಿಸುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಇ ಆಯಿಲನ್ನು ಸ್ಟ್ರೆಚ್ ಮಾರ್ಕ್ ಇರುವಲ್ಲಿ ಹಚ್ಚಿಕೊಂಡರೆ ನಿಧಾನವಾಗಿ ನಿವಾರಣೆಯಾಗುತ್ತದೆ. ಇವುಗಳನ್ನು ತಪ್ಪದೇ ಮಾಡಿದಲ್ಲಿ ದೇಹದ ಮೇಲೆ ಸ್ಟ್ರೆಚ್ ಮಾರ್ಕ್ ನಿವಾರಣೆಯಾಗುತ್ತದೆ.