ಕರ್ನಾಟಕ ಪೋಸ್ಟ್ ಆಫೀಸ್ 2442 ಹುದ್ದೆಗಳಿಗೆ ನೇರ ನೇಮಕಾತಿ

0 1

ನಿರುದ್ಯೋಗಿಗಳಿಗೆ ಸರ್ಕಾರದಿಂದ ಒಂದು ಸಿಹಿ ಸುದ್ದಿ ಇದೆ. ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಸಲು ಅಪ್ಲಿಕೇಷನ್ ಕರೆದಿದ್ದಾರೆ. ಅಪ್ಲಿಕೇಷನ್ ಸಲ್ಲಿಸಲು ಪ್ರಾರಂಭದ ದಿನಾಂಕ ಕೊನೆಯ ದಿನಾಂಕ ಹಾಗೂ ಅಪ್ಲಿಕೇಷನ್ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪೋಸ್ಟ್ ಆಫೀಸ್ ನಲ್ಲಿ 2442 ಹುದ್ದೆಗಳಿಗೆ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ. 21/12/2020 ರಿಂದ ಅಪ್ಲಿಕೇಷನ್ ಸಲ್ಲಿಸಬಹುದು 20/01/2021 ಕೊನೆಯ ದಿನಾಂಕವಾಗಿರುತ್ತದೆ. SSLC ಪಾಸಾಗಿರಬೇಕು, ಇಂಗ್ಲೀಷ್ ಮತ್ತು ಲೋಕಲ್ ಲಾಂಗ್ವೇಜ್ ಕನ್ನಡ ಈ ಎರಡು ವಿಷಯಗಳನ್ನು ಓದಿರಬೇಕು ಹಾಗೂ ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಅದರ ಸರ್ಟಿಫಿಕೇಟ್ ಹೊಂದಿರಬೇಕು. ಒಬ್ಬರು 20 ಪೋಸ್ಟ್ ಗಳಿಗೆ ಫ್ರಿಫರೆನ್ಸ್ ಕೊಡಬೇಕು. ದಿನಕ್ಕೆ 4 ತಾಸು ಕೆಲಸ ಮಾಡಿದರೆ 12,000 ರೂಪಾಯಿ, 5 ತಾಸು ಕೆಲಸ ಮಾಡಿದರೆ 14,500 ರೂಪಾಯಿ ಸಂಬಳ ಸಿಗುತ್ತದೆ. ಗ್ರಾಮಿಣ ದಕ್ ಸೇವಕ್ ಪೋಸ್ಟ್ ಗೆ ದಿನಕ್ಕೆ 4 ತಾಸು ಕೆಲಸ ಮಾಡಿದರೆ 10,000 ರೂಪಾಯಿ, 5 ತಾಸು ಕೆಲಸ ಮಾಡಿದರೆ 12,000 ರೂಪಾಯಿ ಸಿಗುತ್ತದೆ ನಂತರ ಹೆಚ್ಚಾಗುತ್ತದೆ. ಅಪ್ಲಿಕೇಷನ್ ಸಲ್ಲಿಸಲು 20/12/2020 ದಿನಕ್ಕೆ 18 ವರ್ಷ ಕಂಪ್ಲೀಟ್ ಆಗಿರಬೇಕು. ಗರಿಷ್ಟ 40 ವರ್ಷ ವಯೋಮಿತಿ ಇರುತ್ತದೆ. ಎಸ್ಸಿ ಜನಾಂಗದವರು 45 ವರ್ಷ ವಯಸ್ಸಿನವರೆಗೆ ಅಪ್ಲಿಕೇಷನ್ ಸಲ್ಲಿಸಬಹುದು. ಇತರೆ ಹಿಂದುಳಿದ ವರ್ಗದವರು 43 ವರ್ಷ ವಯಸ್ಸಿನವರೆಗೆ ಅಪ್ಲಿಕೇಷನ್ ಸಲ್ಲಿಸಬಹುದು. ಅಂಗವಿಕಲರಿಗೆ ವಯಸ್ಸಿನಲ್ಲಿ ರಿಯಾಯತಿ ಇರುತ್ತದೆ.

ಸಾಮಾನ್ಯ, ಹಿಂದುಳಿದ ಜನಾಂಗದವರಿಗೆ ಅಪ್ಲಿಕೇಷನ್ ಜೊತೆಗೆ 100 ರೂಪಾಯಿ ತುಂಬಬೇಕು ಅದನ್ನು ಆನಲೈನ್ ನಲ್ಲಿ ತುಂಬಬೇಕು ಹಾಗೂ ಎಸ್ಸಿ ಹಾಗೂ ಎಸ್ಟಿ, ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಯಾವುದೇ ಹಣ ಪಾವತಿ ಮಾಡಬೇಕಾಗಿಲ್ಲ. 10 ನೇ ಕ್ಲಾಸಿನಲ್ಲಿ ಪಡೆದ ಅಂಕದ ಮೇಲೆ ಮೆರಿಟ್ ಲಿಸ್ಟ್ ಬಿಡುತ್ತಾರೆ ನಂತರ ಶಾರ್ಟ್ ಲಿಸ್ಟ್ ಮಾಡುತ್ತಾರೆ ಆಗ ಮೇಲ್ ಗೆ ಮೆಸೇಜ್ ಬರುತ್ತದೆ, ಆಯ್ಕೆ ಆದವರ ಹೆಸರು ವೆಬ್ ಸೈಟ್ ನಲ್ಲಿ ನೋಡಬಹುದು ಅಪ್ಲಿಕೇಷನ್ ಸಲ್ಲಿಸಲು SSLC ಮಾರ್ಕ್ಸ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಫೋಟೋ, ಸಿಗ್ನೇಚರ್ ಬೇಕಾಗುತ್ತದೆ. ಅಪ್ಲಿಕೇಷನ್ ಅನ್ನು ವೆಬ್ ಸೈಟ್ ನಲ್ಲಿ ಸಲ್ಲಿಸಬೇಕು. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟ್ ಖಾಲಿ ಇದೆ ಎಂದು ಆನ್ಲೈನ್ ನಲ್ಲಿ ತಿಳಿಯಬಹುದು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗಲಿ.

Leave A Reply

Your email address will not be published.