ಮೊಳಕೆ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಒಳ್ಳೆಯ ವಿಟಮಿನ್ ಗಳು ಇರುತ್ತವೆ. ಹಾಗಾಗಿ ಮೊಳಕೆ ಕಾಳುಗಳನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ. ಮೊಳಕೆ ತರಿಸಿಕೊಂಡು ಸುಮಾರು ಕಾಳುಗಳನ್ನು ತಿನ್ನಬಹುದು. ಅವುಗಳೆಂದರೆ ಹೆಸರುಕಾಳು, ಕಡಲೆಕಾಳು, ಅವರೆಕಾಳು. ಹಾಗೆಯೇ ಇನ್ನೂ ಹಲವಾರು ಕಾಳುಗಳಿವೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಒಳ್ಳೆಯ ಲಾಭಗಳು ಸಿಗುತ್ತವೆ. ಆದ್ದರಿಂದ ಮೊಳಕೆಕಾಳಿನ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಾಳುಗಳನ್ನು ಹಾಗೆ ತಿನ್ನುವುದರ ಬದಲು ಮೊಳಕೆಗಳನ್ನು ತಂದುಕೊಂಡು ತಿನ್ನಬೇಕು. ಸಾಮಾನ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವುದು ಎಲ್ಲರಿಗೂ ಅಭ್ಯಾಸ ಇರುತ್ತದೆ. ನಂತರ ಸ್ನಾನವನ್ನು ಮಾಡಿ ಉಪಹಾರ ಸೇವನೆ ಮಾಡುತ್ತಾರೆ. ಆದರೆ ಸ್ನಾನ ಮಾಡುವ ಮೊದಲು ಒಂದು ಮುಷ್ಟಿಯಷ್ಟು ಮೊಳಕೆ ಕಾಳನ್ನು ತಿನ್ನಬೇಕು. ಇದರಿಂದ ಹೆಚ್ಚಿನ ಪೌಷ್ಟಿಕಾಂಶಗಳು ದೇಹಕ್ಕೆ ದೊರೆಯುತ್ತದೆ. ಇದರಲ್ಲಿ ನಾರಿನ ಅಂಶ ಇರುತ್ತದೆ. ಹಾಗೆಯೇ ವಿಟಮಿನ್ ಬಿ ಇರುತ್ತದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ.
ಹಾಗೆಯೇ ವಿಟಮಿನ್ ಸಿ ಮತ್ತು ಡಿ ಕೂಡ ಇರುತ್ತದೆ. ಆದ್ದರಿಂದ ಇದನ್ನು ನಮ್ಮ ಆಹಾರ ಪದ್ಧತಿಯಲ್ಲಿ ರೂಢಿಸಿಕೊಂಡರೆ ಒಳ್ಳೆಯದು. ಹಾಗೆಯೇ ಇದರಲ್ಲಿ ವಿಟಮಿನ್ ಕೆ ಕೂಡ ಇದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಸಹಕಾರಿ. ಆದ್ದರಿಂದ ಮೊಳಕೆ ಕಾಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಕೆ ಸಿಗುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿದ್ದು ಸೋಂಕು ಮತ್ತು ಖಾಯಿಲೆಗಳು ಬರದಂತೆ ತಡೆಗಟ್ಟುತ್ತದೆ.
ಹಾಗೆಯೇ ಚರ್ಮದ ಕ್ಯಾನ್ಸರ್ ಕೂಡ ಇದನ್ನು ಸೇವಿಸುವುದರಿಂದ ಬರುವುದಿಲ್ಲ. ಆದ್ದರಿಂದ ಚರ್ಮದ ಕ್ಯಾನ್ಸರ್ ತಡೆಗಟ್ಟಲು ಮೊಳಕೆಕಾಳು ಒಂದು ಉತ್ತಮ ಆಹಾರ ಎಂದರೆ ಹೇಳಬಹುದು. ಕೂದಲಿನ ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ಇದನ್ನು ತಿನ್ನುವುದರಿಂದ ಕೂದಲು ಉದ್ದ ಮತ್ತು ದಟ್ಟವಾಗಿ ಬೆಳೆಯುತ್ತದೆ. ಹಾಗೆಯೇ ಇದರಿಂದ ದೇಹದ ಜೀರ್ಣ ಶಕ್ತಿ ಕೂಡ ಹೆಚ್ಚುತ್ತದೆ. ಮೊಳಕೆಕಾಳಿನಲ್ಲಿ ಫೈಬರ್ ಅಂಶ ಇರುತ್ತದೆ. ಹಾಗೆಯೇ ಮಲಬದ್ಧತೆಯನ್ನು ಕೂಡ ದೂರ ಮಾಡುತ್ತದೆ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ದಿನನಿತ್ಯ ಮೊಳಕೆಕಾಳುಗಳನ್ನು ತಿಂದು ಇದರ ಪ್ರಯೋಜನವನ್ನು ಪಡೆದುಕೊಳ್ಳಿ.