ನಿರ್ಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್ ನಟ ಹುಡುಗಿ ಹೇಗಿದ್ದಾರೆ ನೋಡಿ

0 0

ಚಿತ್ರರಂಗ, ಧಾರವಾಹಿಯಲ್ಲಿ ನಟಿಸುವ ನಟ, ನಟಿಯರು ವಿವಾಹವಾಗುವ ವಿಷಯವನ್ನು ತಿಳಿದು ಅಭಿಮಾನಿಗಳು ಸಂತಸಪಡುತ್ತಾರೆ. ಅವರ ಸಾಲಿಗೆ ಇದೀಗ ಸೇರುತ್ತಿರುವ ರಾಹುಲ್ ಅವರು ಮದುವೆಯಾಗಲಿದ್ದಾರೆ. ಅವರು ಯಾವ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಹಾಗೂ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ನಟ ಮದುವೆಯಾಗಲು ನಿರ್ಧರಿಸಿದ್ದಾರೆ. 2012 ರಲ್ಲಿ ಡಾಲ್ಸ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಬಳಿಕ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರವಾಹಿಯಲ್ಲಿ ನಾಯಕ ನಟನಾಗಿ ಅಭಿನಯಿಸಿದ ರಾಹುಲ್ ರವಿ ಈಗ ಲಕ್ಷ್ಮೀ ನಾಯರ್ ಎನ್ನುವವರೊಂದಿಗೆ ಮದುವೆಯಾಗಲಿದ್ದಾರೆ. ಇವರು ಎಮ್ ಬಿಎ ಯನ್ನು ಮುಗಿಸಿದ್ದಾರೆ, ಇವರು ಯಾವ ಫಿಲ್ಮ್ ಹೀರೋಯಿನ್ ಗೂ ಕಡಿಮೆ ಇಲ್ಲ.

ಇತ್ತೀಚೆಗೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಾಹುಲ್ ರವಿ ನಂದಿನಿ ಧಾರವಾಹಿಯಲ್ಲಿ ನಿತ್ಯಾ ರಾಮ್ ಜೊತೆ ನಟಿಸಿದ್ದರು. ಕೆಲವು ರಿಯಾಲಿಟಿ ಶೋನಲ್ಲಿ ರಾಹುಲ್ ರವಿ ಅವರು ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಧಾರಾವಾಹಿಯಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಪ್ರೇಕ್ಷಕರು ಚೋಕಲೇಟ್ ಹೀರೊ ಎಂದು ಕರೆಯುತ್ತಾರೆ. ಇವರು ಮುದ್ದು ಮುದ್ದಾಗಿ ಕಾಣುವ ಹುಡುಗಿಯನ್ನು ವರಿಸಲಿದ್ದಾರೆ. ಕೆಲವು ದಿನಗಳ ಹಿಂದೆ ತಾವು ಮದುವೆಯಾಗುವ ಹುಡುಗಿಯ ಫೋಟೋವನ್ನು ಹಂಚಿಕೊಂಡು ಯಾರಿದು ಎಂದು ಗೆಸ್ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿದ್ದಾರೆ.

ನಂತರ ಮತ್ತೊಂದು ಫೋಟೋವನ್ನು ಶೇರ್ ಮಾಡಿದ ನಟ ಎಲ್ಲರಂತೆ ನಾನು ಅವಳನ್ನು ಭೇಟಿಯಾದ ದಿನ ಸಹಜವಾಗಿತ್ತು, ಆದರೆ ಪ್ರತಿದಿನ ಚೆನ್ನಾಗಿದೆ ಎಂದು ಅನ್ನಿಸಿತು. ನಂತರ ನನಗೆ ಅವಳೊಂದಿಗೆ ವಿಶೇಷ ಅನ್ನಿಸಿತು ಆಮೇಲೆ ಅವಳ ನಗು, ಮಾತಿನಿಂದ ನನ್ನ ಜೀವನ ಉತ್ತಮವಾಗಿದೆ ಎಂದು ಅಂದುಕೊಂಡೆ. ಅವಳು ಕೇವಲ ಹುಡುಗಿಯಲ್ಲ ನನ್ನ ಬದುಕು ಎಂದು ಅರ್ಥಮಾಡಿಕೊಂಡೆ. ನನ್ನ ಬಾಳು ಬೆಳಗುತ್ತಿರುವುದಕ್ಕೆ ಧನ್ಯವಾದಗಳು. ನಮ್ಮ ಬದುಕಿನ ದೊಡ್ಡ ದಿನಕ್ಕಾಗಿ ಕಾಯುತ್ತಿರುವೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ. ರಾಹುಲ್ ಅವರಿಗೆ ಅಭಿಮಾನಿಗಳ ಬಳಗವೇ ಇದೆ. ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಒಟ್ಟಿನಲ್ಲಿ ಈ ಜೋಡಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.

Leave A Reply

Your email address will not be published.