ಬಾಳೆಹಣ್ಣು ಯಾರಿಗೆ ತಾನೇ ಗೊತ್ತಿರುವುದಿಲ್ಲ ಮಲೆನಾಡಿನ ಹಳ್ಳಿಗಳಲ್ಲಿ ಬಾಳೆ ಮರವನ್ನು ಹೆಚ್ಚು ಬೆಳೆಸುತ್ತಾರೆ ಆದರೆ ಬಾಳೆಕಾಯಿಯಿಂದ ಸಹ ಬಹಳ ಪ್ರಯೋಜನಕಾರಿ ಇದೆ. ನಮ್ಮ ಆಹಾರದಲ್ಲಿ ಬಾಳೆಕಾಯಿಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಹಸಿರಾಗಿರುವ ಬಾಳೆಕಾಯಿಯನ್ನು ಮಾರ್ಕೇಟಿನಲ್ಲಿ ನೋಡುತ್ತೇವೆ. ಇದನ್ನು ತರಕಾರಿಯೆಂದು ಪರಿಗಣಿಸುತ್ತೇವೆ. ಕಲ್ಲು ಬಾಳೆಕಾಯಿ ಅನ್ನುವ ಒಂದು ಬಾಳೆ ಜಾತಿಯಿದೆ. ಇದು ಹಣ್ಣಾದ ನಂತರ ಇದರ ಬೀಜ ಕಲ್ಲಾಗುತ್ತದೆ ಆದ್ದರಿಂದ ಕಲ್ಲು ಬಾಳೆಹಣ್ಣು ಎನ್ನುತ್ತಾರೆ. ಈ ಬಾಳೆಕಾಯಿಯನ್ನು ತಿನ್ನಲು ಆಗುವುದಿಲ್ಲ ಆದ್ದರಿಂದ ಇದನ್ನು ಸಾರು, ಪಲ್ಯ ಮಾಡಬಹುದು ಅಲ್ಲದೇ ಬಾಳೆಕಾಯಿಯಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ.

ಇದರಲ್ಲಿ ನಾರಿನ ಅಂಶ, ವಿಟಮಿನ್ಸ್, ಖನಿಜಗಳು ಹಾಗೂ ಹೇರಳವಾಗಿ ಪಿಷ್ಟ ಇರುತ್ತದೆ. ಈ ಬಾಳೆಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಅತಿಸಾರ, ಬೇಧಿ, ಆಮಶಂಕೆ ಇರುವವರಿಗೆ ಬಾಳೆಕಾಯಿ ಉತ್ತಮ ಮದ್ದು ಅಲ್ಲದೆ ಕರುಳಿನ ಆರೋಗ್ಯಕ್ಕೆ ಇದು ಉತ್ತಮ. ಇದು ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ, ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಹೊಟ್ಟೆಯುಬ್ಬರ, ಮಲಬದ್ಧತೆ ಸಮಸ್ಯೆಗೆ ಬಾಳೆಹಣ್ಣನ್ನು ತಿನ್ನುವುದು ಪರಿಹಾರವಾಗಿದೆ. ಬಾಳೆಕಾಯಿಯನ್ನು ಪಲ್ಯ, ಸಾರು ಹೀಗೆ ಅದರ ರೆಸಿಪಿಗಳನ್ನು ಮಾಡಿಕೊಂಡು ತಿನ್ನುವುದು ಉತ್ತಮ ಏಕೆಂದರೆ ಯಾವುದು ಅತಿಯಾದರೂ ದೇಹಕ್ಕೆ ಹಾನಿ ಹಾಗೂ ಬೇಯಿಸಿ ತಿನ್ನುವುದು ಉತ್ತಮ.

ಮೊಸರಿನಂತೆ ಬಾಳೆಕಾಯಿಯಲ್ಲಿಯೂ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ಇವೆ. ಟೈಪ್ 2 ಮಧುಮೇಹವನ್ನು ಅನುಭವಿಸುತ್ತಿರುವ ರೋಗಿಗಳು ತಪ್ಪದೆ ತಮ್ಮ ಆಹಾರದಲ್ಲಿ ಬಾಳೆಕಾಯಿಯನ್ನು ಬಳಸಬೇಕು. ಬಾಳೆಕಾಯಿಯಲ್ಲಿ ವಿಟಮಿನ್ ಬಿ6 ಹೆಚ್ಚಾಗಿ ಸಿಗುತ್ತದೆ. ನಮ್ಮ ದೇಹದಲ್ಲಿ ನೂರಕ್ಕೂ ಹೆಚ್ಚು ಕಿಣ್ವ ಆಧಾರಿತ ಕಾರ್ಯದಲ್ಲಿ ವಿಟಮಿನ್ ಬಿ6 ಸಹಾಯಕಾರಿಯಾಗಿದೆ ಹಾಗೂ ಹಿಮೋಗ್ಲೋಬಿನ್ ಉತ್ಪಾದನೆಗೆ ಅವಶ್ಯಕವಾಗಿದೆ.

ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಬಾಳೆಕಾಯಿ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿರುವ ಎಲೆಕ್ಟ್ರೋಲೈಟ್ ಗಳು ಸಮತೋಲನವಾಗಿ ಕಾರ್ಯ ನಿರ್ವಹಿಸಲು ಬಾಳೆಕಾಯಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತದೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ತಪ್ಪದೆ ತಮ್ಮ ಆಹಾರದಲ್ಲಿ ಬಾಳೆಕಾಯಿಯನ್ನು ಸೇರಿಸಿಕೊಳ್ಳಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!