ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು, ಮೂಗು, ಕೂದಲು, ಹಲ್ಲುಗಳು ಮತ್ತು ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಹಾಗೆಯೇ ಅದರಲ್ಲಿ ಮುಖ ಕೂಡ ಒಂದು. ಮುಖ ಸುಂದರವಾಗಿ ಇರಬೇಕು ಎಂದರೆ ಯಾವುದೇ ರೀತಿಯ ಕಲೆಗಳು ಇರಬಾರದು. ಕಲೆಗಳು ಇದ್ದರೆ ಮುಖದಲ್ಲಿ ಅವು ಎದ್ದು ಕಾಣುತ್ತವೆ. ಆದ್ದರಿಂದ ನಾವು ಇಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೋ ಬಗೆಯ ಕ್ರೀಮ್ ಗಳು ಮತ್ತು ಫೇಸ್ ವಾಷ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಅವುಗಳಿಂದ ಒಳ್ಳೆಯ ಪರಿಣಾಮಗಳಿಗಿಂತ ಅಡ್ಡ ಪರಿಣಾಮಗಳು ಉಂಟಾಗುವುದು ಹೆಚ್ಚು. ಏಕೆಂದರೆ ಅದಕ್ಕೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಮನೆಯಲ್ಲಿ ಬೇಕಾದಷ್ಟು ವಸ್ತುಗಳನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಸಾಮಾನ್ಯವಾಗಿ ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚುತ್ತಾರೆ. ಆದರೆ ಅಕ್ಕಿಹಿಟ್ಟನ್ನು ಸಹ ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಮುಖದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ಹೋಗಲಾಡಿಸುತ್ತದೆ.
ಒಣಚರ್ಮ ಹೊಂದಿದವರು ಹಸಿ ಹಾಲನ್ನು ದಿನಾಲೂ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮ ಮೃದು ಆಗುತ್ತದೆ. ಮುಖ ಕಾಂತಿಯನ್ನು ಹೊಂದಲು ಮೊದಲ ಹಂತದಲ್ಲಿ ಹಸಿಹಾಲನ್ನು ತೆಗೆದುಕೊಂಡು ಅದನ್ನು ಹತ್ತಿಯ ಚೂರಿನಲ್ಲಿ ಮುಖಕ್ಕೆ ಹಚ್ಚಬೇಕು. ನಂತರ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಎರಡನೆಯ ಹಂತದಲ್ಲಿ ಹಾಗೆಯೇ ಒಂದು ಕಪ್ ನಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಅಕ್ಕಿಹಿಟ್ಟನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಹಸಿಯಾದ ಹಾಲನ್ನೇ ತೆಗೆದುಕೊಳ್ಳಬೇಕು.
ಈ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು. ಇದನ್ನು ಮುಖದ ಪ್ರತಿಯೊಂದು ಭಾಗಕ್ಕೂ ಚೆನ್ನಾಗಿ ಮಸಾಜ್ ಮಾಡಬೇಕು. ಹಾಗೆಯೇ ತುಟಿಯ ಕೆಳಗಡೆ ಕೂಡ ಮಸಾಜ್ ಮಾಡಬೇಕು. ಬಿಸಿಲಿಗೆ ಹೋಗಿ ಬಂದು ಮುಖ ಕಪ್ಪಾಗಿರುತ್ತದೆ. ಆಗ ಈ ರೀತಿಯಾಗಿ ಮಾಡಿ ಮುಖಕ್ಕೆ ಹಚ್ಚಿದರೆ ಬಹಳ ಒಳ್ಳೆಯದು. ಹಾಗೆಯೇ ನಂತರ ಮೂರನೆಯ ಹಂತದಲ್ಲಿ ಹಾಲಿಗೆ ಒಂದು ಚಮಚ ಟೊಮೆಟೊ ರಸ ಮತ್ತು ಗಂಧದ ಪುಡಿ ಮತ್ತು ಅಕ್ಕಿಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಗಂಧದ ಪುಡಿ ಬೇಕಾದರೆ ಬಳಸಬಹುದು. ಕೊನೆಯದಾಗಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು. ವಾರಕ್ಕೆ ಎರಡು ಬಾರಿ ಇದನ್ನು ಮಾಡುತ್ತಾ ಬಂದರೆ ಮುಖದ ಕಲೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ.