ಗ್ಯಾಸ್ಟ್ರಿಕ್ ಇದು ಎಲ್ಲರಿಗೂ ಹೆಚ್ಚಾಗಿ ಕಂಡುಬರುತ್ತದೆ. ಏನು ತಿಂದರೂ ಉಂಟಾಗುತ್ತದೆ. ಇದಕ್ಕೆ ವಯಸ್ಸಿನ ಸಂಬಂಧ ಇಲ್ಲ. ಇದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಇದು ಕಾಡುವ ತೊಂದರೆ ಆಗಿದೆ. ಇದರಿಂದ ಬಹಳ ತೊಂದರೆಯಾಗುತ್ತದೆ. ಇದರ ಪರಿಣಾಮಗಳನ್ನು ಅನುಭವಿಸುವರಿಗೆ ಗೊತ್ತಿದೆ. ಆದ್ದರಿಂದ ನಾವು ಇಲ್ಲಿ ಗ್ಯಾಸ್ಟ್ರಿಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೆಲವರಿಗೆ ಏನು ತಿಂದರೂ ಗ್ಯಾಸ್ಟ್ರಿಕ್ ಆಗುತ್ತದೆ. ತರಕಾರಿ, ಹಣ್ಣುಗಳನ್ನು ತಿಂದರೆ ಗ್ಯಾಸ್ಟ್ರಿಕ್ ಆಗುತ್ತದೆ. ಎಳೆನೀರು ಕುಡಿದರೂ ಗ್ಯಾಸ್ಟ್ರಿಕ್ ಆಗುತ್ತದೆ. ಹೀಗೆ ಕೆಲವರು ತಿಳಿದಿರುತ್ತಾರೆ. ಕೆಲವರು ಇದರಿಂದ ಮುಕ್ತಿ ಪಡೆಯಲು ಆಹಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಆದರೂ ಕಡಿಮೆ ಆಗುವುದಿಲ್ಲ. ಹಳೆಯ ಕಾಲದಲ್ಲಿ ದೇವಸ್ಥಾನಕ್ಕೆ ಹೋದರೆ ಗ್ಯಾಸ್ಟ್ರಿಕ್ ಎಂದು ಹೇಳಿದರೆ ಕಾಲಿನ ಬೆರಳಿಗೆ ರಿಂಗನ್ನು ಹಾಕುತ್ತಿದ್ದರು. ಅಂದರೆ ಕಾಲಿನ ಹೆಬ್ಬೆರಳಿನ ಬುಡಕ್ಕೆ ರಿಂಗನ್ನು ಹಾಕುತ್ತಿದ್ದರು.
ಇದು ಈಗಲೂ ಪರಿಣಾಮ ಕಾಣುತ್ತದೆ. ಹೆಂಗಸರು ರಿಂಗನ್ನು ಹಾಕಿಕೊಳ್ಳಬೇಕು. ಹಾಗೆಯೇ ಹೆಂಗಸರು ದಾರವನ್ನು ಕಾಲಿನ ಹೆಬ್ಬೆರಳಿಗೆ ಕಟ್ಟಿಕೊಳ್ಳಬಹುದು. ಹಾಗೆಯೇ ಗಂಡಸರು ರಬ್ಬರ್ ಬ್ಯಾಂಡ್ ನ್ನು ಸುಮಾರು ಎಂಟು ತಾಸುಗಳ ಕಾಲ ಹಾಕಿಕೊಳ್ಳಬೇಕು. ಇದರಿಂದ ಗ್ಯಾಸ್ಟ್ರಿಕ್ ಹತೋಟಿಯಲ್ಲಿ ಬರುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಹತೋಟಿಗೆ ಬಂದ ಹಲವಾರು ಉದಾಹರಣೆಗಳು ಇವೆ. ಮೊದಲು ಊಟದ ಸಮಯದಲ್ಲಿ ಮನೆಯವರಿಗೆ ಊಟ ಬಡಿಸಿ ನಂತರ ಉಳಿದರೆ ಹೆಂಗಸರು ಊಟ ಮಾಡುತ್ತಿದ್ದರು.
ಇದರಿಂದ ಗ್ಯಾಸ್ಟ್ರಿಕ್ ಆಗುತ್ತಿತ್ತು. ಹೀಗಾಗಿ ಅವರ ಕಾಲಿಗೆ ಉಂಗುರವನ್ನು ಹಾಕುವ ಅಭ್ಯಾಸ ಮಾಡಿದ್ದರು. ಹೀಗಾಗಿ ಹುಡುಗಿಯರಿಗೆ ಮದುವೆ ಆದ ನಂತರ ಕಾಲಿಗೆ ಉಂಗುರವನ್ನು ಹಾಕುತ್ತಾರೆ. ಹಾಗೆಯೇ ಇದರಿಂದ ಇನ್ನೂ ಹಲವಾರು ಪ್ರಯೋಜನಗಳು ಹುಡುಗಿಯರಿಗೆ ಆಗುತ್ತವೆ. ಹಾಗೆಯೇ ಗಂಡಸರು ಕೂಡ ಕಾಲಿಗೆ ಏನನ್ನಾದರೂ ಹಾಕುವುದರಿಂದ ಗ್ಯಾಸ್ಟ್ರಿಕ್ ಹತೋಟಿಯಲ್ಲಿ ಬರುವುದನ್ನು ಕಾಣಬಹುದು. ಇದನ್ನು ನೀವು ಸಹ ಮಾಡಿನೋಡಿ ಪ್ರಯೋಜನ ಪಡೆದುಕೊಳ್ಳಿ.