ಚಿಕ್ಕವರಿರುವಾಗ ಕದ್ದು ಹುಣಸೆಹಣ್ಣಿನ ಮಿಠಾಯಿ ತಿಂದಿರುವುದು ನೆನೆಸಿಕೊಂಡರೆ ಬಾಲ್ಯದ ನೆನಪಾಗುತ್ತದೆ. ಹುಣಸೆಹಣ್ಣಿನ ಮಿಠಾಯಿ ಯಾವಾಗಲೂ ತಿನ್ನಬಹುದು. ಮನೆಯಲ್ಲೇ ಸುಲಭವಾಗಿ ಹುಣಸೆ ಹಣ್ಣಿನ ಮಿಠಾಯಿ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಾವು ಚಿಕ್ಕವರಿರುವಾಗ ಹುಣಸೆ ಹಣ್ಣಿನ ಮಿಠಾಯಿ ತಿನ್ನುತ್ತಿದ್ದೇವು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇಷ್ಟವಾಗುವ ಹುಣಸೆಹಣ್ಣಿನ ಮಿಠಾಯಿಯನ್ನು ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಮಾಡಬಹುದು. ಹುಣಸೆಹಣ್ಣಿನ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು ಹುಣಸೆಹಣ್ಣು, ಬೆಲ್ಲ, ಚಿಲ್ಲಿ ಫ್ಲೆಕ್ಸ್, ಜೀರಿಗೆ ಪೌಡರ್, ಬ್ಲಾಕ್ ಸಾಲ್ಟ್, ಖಾರದ ಪುಡಿ, ಬೆಳ್ಳುಳ್ಳಿ, ಉಪ್ಪು, ಫುಡ್ ರ್ಯಾಪ್ ಕವರ್ ಅಥವಾ ಪ್ಲಾಸ್ಟಿಕ್ ಸ್ಪೂನ್. ಒಂದು ಕಪ್ ಹುಣಸೆ ಹಣ್ಣನ್ನು ಬೀಜ, ಸಿಪ್ಪೆ ತೆಗೆದು ನೀರಿನಲ್ಲಿ 10 ನಿಮಿಷ ನೆನೆಸಿಕೊಳ್ಳಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ 4, 4-5 ಕರಿಬೇವಿನ ಎಲೆ, ಒಂದು ಸ್ಪೂನ್ ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಬೇಕು ತರಿತರಿಯಾಗಿ ಪೇಸ್ಟ್ ಆದರೆ ಸಾಕು.
ನಂತರ ಒಂದು ಪಾನ್ ಗೆ ಮುಕ್ಕಾಲು ಕಪ್ ಬೆಲ್ಲ, ಒಂದು ಸ್ಪೂನ್ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗಿದ ನಂತರ ಗ್ರೈಂಡ್ ಮಾಡಿಕೊಂಡ ಹುಣಸೆಹಣ್ಣಿನ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಸ್ವಲ್ಪ ಉಪ್ಪು, ಚಿಲ್ಲಿ ಫ್ಲೆಕ್ಸ ಅಥವಾ ಖಾರದ ಪುಡಿ, ಬ್ಲಾಕ್ ಸಾಲ್ಟ್, ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು 15 ನಿಮಿಷ ಕೈಯಾಡಿಸಿದ ನಂತರ ಅದು ಕಲರ್ ಚೇಂಜ್ ಆಗಿ ಹಲ್ವ ರೀತಿಯಲ್ಲಿ ಆಗುತ್ತದೆ ತಣ್ಣಗಾದ ನಂತರ ವುಡನ್ ಸ್ಪೂನ್ ಅಥವಾ ಪ್ಲಾಸ್ಟಿಕ್ ಸ್ಪೂನ್ ಮೇಲೆ ಹಾಕಿ ಫುಡ್ ರ್ಯಾಪ್ ಕವರ್ ನಿಂದ ಸುತ್ತಿ ರಬ್ಬರ್ ಹಾಕಿ ಇಟ್ಟುಕೊಳ್ಳಬಹುದು ಅಥವಾ ಫುಡ್ ರ್ಯಾಪ್ ಕವರ್ ನಲ್ಲಿ ಹಾಕಿ ಸುತ್ತಿ ಇಟ್ಟುಕೊಳ್ಳಬಹುದು. ಏರ್ ಟೈಟ್ ಬಾಕ್ಸ್ ನಲ್ಲಿ ಹಾಕಿ ಇಟ್ಟರೆ ಬೇಗ ಹಾಳಾಗುವುದಿಲ್ಲ. ಇದನ್ನು ಈಗ ಹೆಚ್ಚಾಗಿ ಯಾರೂ ಮಾಡುವುದಿಲ್ಲ ಆದ್ದರಿಂದ ಇದನ್ನು ಮಾಡಿದರೆ ಎಲ್ಲರೂ ತಿನ್ನುತ್ತಾರೆ. ಇದನ್ನು ಸಣ್ಣ ಮಕ್ಕಳು ಇಷ್ಟ ಪಡುತ್ತಾರೆ, ಸುಲಭವಾಗಿ 20-25 ನಿಮಿಷದಲ್ಲಿ ಮಾಡಬಹುದು. ಹುಣಸೆಹಣ್ಣನ್ನು ಹೆಚ್ಚು ತಿಂದರೆ ಕೆಲವರಿಗೆ ಪಿತ್ತ ಆಗುತ್ತದೆ. ಈ ರೆಸಿಪಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.