ತುಳಸಿ ಗಿಡವನ್ನು ಮನೆಯ ಮುಂದೆ ನೆಡಲಾಗುತ್ತದೆ ಪ್ರತಿದಿನ ಪೂಜಿಸಬೇಕು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಪ್ರತಿವರ್ಷ ತುಳಸಿ ಪೂಜೆ ಆಚರಿಸಲಾಗುತ್ತದೆ. ಅಲ್ಲದೇ ಧಾರ್ಮಿಕವಾಗಿ ತುಳಸಿಯನ್ನು ಬಹಳ ಗೌರವದಿಂದ ನೋಡಲಾಗುತ್ತದೆ. ಅದರ ಜೊತೆಗೆ ತುಳಸಿ ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿಯನ್ನು ಹೇಗೆ, ಯಾವಾಗ ಸೇವಿಸಬೇಕು ಹಾಗೂ ಇದರ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 5 ತುಳಸಿ ಎಲೆಗಳನ್ನು ತಿನ್ನುವುದರಿಂದ 50 ಕ್ಕೂ ಹೆಚ್ಚು ಖಾಯಿಲೆಗಳಿಂದ ದೂರವಿರಬಹುದು. ಪ್ರತಿಯೊಂದು ಪೂಜೆಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚು ಬಳಸುತ್ತಾರೆ. ತುಳಸಿಯನ್ನು ಪೂಜಿಸುವುದರಿಂದ ಖಾಯಿಲೆಗಳು ವಾಸಿಯಾಗುತ್ತದೆ. ತುಳಸಿಯನ್ನು ಎಲ್ಲರೂ ತಮ್ಮ ಮನೆಯ ಮುಂದೆ ಸುಂದರವಾದ ಕಟ್ಟೆಯನ್ನು ಮಾಡಿ ಅದರಲ್ಲಿ ನೆಡುತ್ತಾರೆ ಅದೊಂದು ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರವಲ್ಲದೆ ಔಷಧೀಯ ಗುಣವನ್ನು ಹೊಂದಿದೆ. ಸಾಮಾನ್ಯವಾಗಿ ಬರುವ ಜ್ವರ, ಶೀತಕ್ಕೆ ತುಳಸಿ ರಾಮಬಾಣ ತುಳಸಿ ರಸ ಜ್ವರವನ್ನು ತಗ್ಗಿಸಲು ಒಳ್ಳೆಯ ಔಷಧಿ. ಜ್ವರ ಅಥವಾ ಶೀತ ಬಂದಾಗ ತುಳಸಿ ಎಲೆಯನ್ನು ಚಹಾದೊಂದಿಗೆ ಕುದಿಸಿ ಕುಡಿಯಬೇಕು ಆಗ ಮಲೇರಿಯಾ, ಡೆಂಗ್ಯೂ ನಿವಾರಣೆಯಾಗುತ್ತದೆ.
ತುಳಸಿಯ ಎಲೆಯನ್ನು ಜಗಿದು ತಿನ್ನುವುದರಿಂದ ಶೀತ, ಕೆಮ್ಮು ನಿವಾರಣೆಯಾಗುತ್ತದೆ. ಕಿಡ್ನಿಯಲ್ಲಿ ಕಲ್ಲಾದಾಗ ಯಮಯಾತನೆ ಅದನ್ನು ತುಳಸಿಯಿಂದ ನಿವಾರಿಸಿಕೊಳ್ಳಬಹುದು, ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ನೋವಿನ ಪ್ರಮಾಣ ಕಡಿಮೆಯಾಗುತ್ತದೆ. ತುಳಸಿ ಖಾಯಿಲೆಗಳಿಗೆ ಔಷಧಿಯಲ್ಲದೆ ವಾತಾವರಣಕ್ಕೂ ಒಳ್ಳೆಯದು. ತುಳಸಿಯನ್ನು ಬೆಳೆಸಲು ಯಾವುದೇ ರೀತಿಯ ಖರ್ಚು ಮಾಡಬೇಕಾಗಿಲ್ಲ ಮಣ್ಣು, ನೀರು ಇದ್ದರೆ ಸಾಕು. ತುಳಸಿ ಎಲೆಯನ್ನು ಪ್ರತಿದಿನ ತಿನ್ನುವುದರಿಂದ ಹಲವು ಸೋಂಕಿನಿಂದ ದೂರವಿರಬಹುದು ಅಲ್ಲದೇ ಜ್ಞಾಪಕ ಶಕ್ತಿ ಹೆಚ್ಚಾಗಿ ಬುದ್ಧಿವಂತಿಕೆ ಹೆಚ್ಚಾಗುತ್ತದೆ, ಮಕ್ಕಳಿಗೆ ತಿನ್ನಿಸುವುದು ಒಳ್ಳೆಯದು. ಮಕ್ಕಳಿಗಷ್ಟೇ ಅಲ್ಲದೇ ವಯಸ್ಸಾದವರು ತುಳಸಿ ಎಲೆಯನ್ನು ತಿಂದರೆ ಸುಸ್ತು ನಿವಾರಣೆಯಾಗುತ್ತದೆ. ಬೊಜ್ಜು ಇದ್ದವರು ತುಳಸಿ ಎಲೆಯನ್ನು ತಿನ್ನುವುದರಿಂದ ಬೊಜ್ಜು ಕರಗುತ್ತದೆ ಅಲ್ಲದೇ ರಕ್ತದಲ್ಲಿರುವ ಕೊಬ್ಬಿನಂಶವನ್ನು ನಿಯಂತ್ರಿಸುತ್ತದೆ. ಜ್ವರ, ಟಿಬಿ, ಕೆಮ್ಮು ರೋಗಿಗಳು 3 ಗ್ರಾಂ ತುಳಸಿಯನ್ನು ಪ್ರತಿನಿತ್ಯ ಸೇವಿಸಿದರೆ ಅವರ ಆರೋಗ್ಯಕ್ಕೆ ಒಳ್ಳೆಯದು. ತುಳಸಿ ಎಲೆಯನ್ನು ಆಗಾಗ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಕೊರೋನ ವೈರಸ್ ನಿಂದ ರಕ್ಷಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.