ಬಹಳ ಜನರು ದೇಹದ ಶಾಖದ ಸಮಸ್ಯೆಯನ್ನು ಎದುರಿಸುತ್ತಾರೆ. ಕಾಲು, ಕೈ ಬೆವರುವುದು, ಬಾಯಿಯಲ್ಲಿ ಗುಳ್ಳೆಯಾಗಿ ಆಹಾರ ಸೇವಿಸಲು ಕಷ್ಟವಾಗುತ್ತದೆ, ಹೀಗೆ ಹಲವು ಲಕ್ಷಣಗಳು ಕಂಡುಬರುತ್ತದೆ. ಇಂತಹ ದೇಹದ ಶಾಖವನ್ನು ಹೇಗೆ ಮನೆಯಲ್ಲೇ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.
ದೇಹ ಬಿಸಿಯಾಗಲು ಮತ್ತು ಶರೀರದ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ಸುತ್ತಲಿನ ಪರಿಸರದ ಕಾರಣದಿಂದ ನಮ್ಮ ದೇಹದಲ್ಲಿ ಶಾಖ ಉಂಟಾಗುತ್ತದೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಈ ಸಮಸ್ಯೆಯನ್ನು ಎದುರಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ತೆಗೆದುಕೊಳ್ಳುವ ಆಹಾರವು ಮುಖ್ಯ, ಮಸಾಲೆಯುಕ್ತ ಆಹಾರ, ಜಂಕ್ ಫುಡ್, ಆಲ್ಕೋಹಾಲ್, ಕೆಫೀನ್ ಗಳು ದೇಹದ ಶಾಖಕ್ಕೆ ಕಾರಣವಾಗಿದೆ ಇದಲ್ಲದೆ ಯಾವುದಾದರೂ ಖಾಯಿಲೆ ಇದ್ದು ಅದಕ್ಕಾಗಿ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದರಿಂದಲೂ ದೇಹದ ಶಾಖ ಹೆಚ್ಚುತ್ತದೆ. ಕೆಲವರ ಶರೀರ ಶಾಖದ ಪ್ರವೃತ್ತಿಯನ್ನು ಹೊಂದಿರುತ್ತದೆ ಆಗ ಬೇಸಿಗೆಯಲ್ಲಿ ಅವರಿಗೆ ಆರೋಗ್ಯಕರ ಸಮಸ್ಯೆ ಉಂಟಾಗುತ್ತದೆ. ದೇಹದ ಶಾಖ ಕಡಿಮೆ ಮಾಡಲು ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆ ಮದ್ದನ್ನು ತಯಾರಿಸಬಹುದು. ಆಹಾರದಿಂದ ದೇಹದ ಶಾಖವನ್ನು ಕಡಿಮೆ ಮಾಡಿಕೊಳ್ಳಬಹುದು.
ಮಸಾಲೆಯುಕ್ತ ಆಹಾರವನ್ನು ತೆಗೆದುಕೊಳ್ಳಬಾರದು, ಬಿಸಿ ಪ್ರದೇಶಗಳಿಗೆ ಹೋಗಬಾರದು. ದೇಹದಲ್ಲಿ ಕೊಬ್ಬನ್ನು ಉಂಟುಮಾಡುವ ಆಹಾರವನ್ನು ಸೇವಿಸಬಾರದು. ಕಡಿಮೆ ಸೋಡಿಯಂ ಪದಾರ್ಥಗಳನ್ನು ಸೇವಿಸುವುದು ಉತ್ತಮ. ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿ, ಕಡಲೆ ಕಾಯಿ ಎಣ್ಣೆಯಿಂದ ಕೂಡ ಕುಕೀಸ್ ತಯಾರಿಸಬಹುದು. ಡ್ರೈ ಫ್ರೂಟ್ಸ್ ತಿನ್ನುವ ಹವ್ಯಾಸ ಎಲ್ಲರಿಗೂ ಇರುತ್ತದೆ. ಆದರೆ ದೇಹದ ಶಾಖ ಕಡಿಮೆಯಾಗಲು ದಿನನಿತ್ಯದ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇವಿಸಬಾರದು. ವಾರಕ್ಕೆ 2-3 ಬಾರಿ ಮಾತ್ರ ಸೇವಿಸಬೇಕು. ಸಸ್ಯಾಹಾರಿ ಆಹಾರವನ್ನು ಸೇವಿಸಿ, ಮಾಂಸಾಹಾರವನ್ನು ಸೇವಿಸಬಾರದು, ಅದರಲ್ಲೂ ರೆಡ್ ಮಟನ್ ಸೇವಿಸಬಾರದು. ಆದಷ್ಟು ತಣ್ಣೀರಿನಿಂದ ಸ್ನಾನ ಹಾಗೂ ಮುಖವನ್ನು ಆಗಾಗ ತಣ್ಣೀರಿನಿಂದ ವಾಶ್ ಮಾಡಿದಾಗ ಸ್ವಲ್ಪ ಆರಾಮಾಗುತ್ತದೆ. ಹೀಗೆ ಮಾಡಿದಾಗ ದೇಹದ ಶಾಖ ಕಡಿಮೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.