ಬಿಳಿತೊನ್ನು ಕೆಲವರಿಗೆ ಆಗುತ್ತದೆ. ಹಾಗೆಯೇ ಇದು ವಂಶಪಾರಂಪರಿಕವಾಗಿ ಬರುತ್ತದೆ. ಇದು ಕಾಲು, ಕೈ, ಎದೆಯ ಮೇಲೆ ಮತ್ತು ಬೆನ್ನಮೇಲೆ ಹೀಗೆ ಎಲ್ಲಾ ಕಡೆ ಆಗುತ್ತದೆ. ಇದು ಶುರುವಾದ ತಕ್ಷಣವೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಏಕೆಂದರೆ ಅತಿಯಾಗಿ ಇದು ಆದರೆ ಕಡಿಮೆ ಮಾಡಿಕೊಳ್ಳುವುದು ಬಹಳ ಕಷ್ಟ. ಆದ್ದರಿಂದ ನಾವು ಇಲ್ಲಿ ಇದರ ಪರಿಹಾರೋಪಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಬಿಳಿತೊನ್ನು ಇದನ್ನು ಇಂಗ್ಲೀಷ್ ನಲ್ಲಿ ವಿಟಿಲಿಗೋ ಎಂದು ಕರೆಯುತ್ತಾರೆ. ಎಷ್ಟೋ ಜನರಿಗೆ ಕಡಿಮೆ ಆದ ಸಾಧ್ಯತೆ ಕೂಡ ಇದೆ. ಇದರಿಂದ ಮುಕ್ತಿ ಹೊಂದಬೇಕು ಎಂದರೆ ಮೊದಲು ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಅನ್ನ, ಚಪಾತಿ, ರಾಗಿ, ಗೋಧಿ ಮತ್ತು ಜೋಳಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಹೆಚ್ಚಾಗಿ ಗಡ್ಡೆ, ಗೆಣಸು, ಹಣ್ಣು ಮತ್ತು ಹಂಪಲುಗಳನ್ನು ತಿನ್ನಬೇಕು. ಮೊದಲು ಇದು ಶುರುವಾದ ತಕ್ಷಣವೇ ಇದಕ್ಕೆ ತುಳಸಿ ರಸದೊಂದಿಗೆ ಉಪ್ಪನ್ನು ಸೇರಿಸಿ ಹಚ್ಚಬೇಕು.
ದಿನಕ್ಕೆ ಎರಡು ಬಾರಿ ಇದನ್ನು ಮಾಡಬೇಕು. ಕಲೆಗಳು ಆದಲ್ಲಿ ಹಚ್ಚಬೇಕು. ಇದು ಒಳ್ಳೆಯ ಪರಿಣಾಮವನ್ನು ನೀಡುತ್ತದೆ. ಹಾಗೆಯೇ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ಇದನ್ನು ಕಲೆ ಇರುವಲ್ಲಿ ಹಚ್ಚಿ 5ನಿಮಿಷ ಬಿಟ್ಟು ತೊಳೆಯುವುದರಿಂದ ಬಿಳಿ ತೊನ್ನು ಕಡಿಮೆ ಆಗುತ್ತದೆ. ಹಾಗೆಯೇ ಪೇಟೆಯಲ್ಲಿ ದೊರೆಯುವ ಶುಂಠಿಬೆಳ್ಳುಳ್ಳಿ ಪೇಸ್ಟ್ ನ್ನು ಹಾಕಬಾರದು. ಹಾಗೆಯೇ ಶುದ್ಧ ಅರಿಶಿನಪುಡಿ ಮತ್ತು ಕಾಳುಮೆಣಸಿನಪುಡಿಯನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಜಜ್ಜಿ ಕಲೆ ಇರುವ ಜಾಗದಲ್ಲಿ ಹಚ್ಚಬೇಕು.
ಹಾಗೆಯೇ ಇದಕ್ಕೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ತೈಲ ಮಾಡಬಹುದು. ಮೊದಲು ಅರಿಶಿನದ ಕೊಂಬುಗಳನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಿಗ್ಗೆ ನೆನೆಸಿದ ನೀರು ಮತ್ತು ಎಳ್ಳೆಣ್ಣೆಯನ್ನು ಸೇರಿಸಿ ಕುದಿಸಬೇಕು. ನೀರಿನ ಅಂಶ ಏನೂ ಇರಬಾರದು. ಈ ಎಣ್ಣೆಯನ್ನು ಹಚ್ಚುವುದರಿಂದ ಬಿಳಿ ತೊನ್ನು ಕಡಿಮೆಯಾಗುತ್ತದೆ. ಹಾಗೆಯೇ ನಂಜಿನ ಪದಾರ್ಥಗಳನ್ನು ತಿನ್ನಬಾರದು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬಾರದು. ಹೆಚ್ಚಾಗಿ ನೀರನ್ನು ಕುಡಿಯಬೇಕು. ವಿಟಮಿನ್ ಸಿ ಇರುವ ಪೇರಳೆಹಣ್ಣು ಇನ್ನೂ ಹಲವಾರುಗಳನ್ನು ತಿನ್ನಬೇಕು.