ಜೀವನ ಎಂದರೆ ಆಧುನಿಕ ಶೈಲಿಯಲ್ಲಿ ಜೀವಿಸುವುದಲ್ಲ. ಆಧ್ಯಾತ್ಮಿಕತೆಯ ಪ್ರಕಾರ ಜೀವನವನ್ನು ಪರಿಪೂರ್ಣಗೊಳಿಸಬೇಕಾದರೆ. ಧರ್ಮ, ಅರ್ಥ, ಕಾಮ, ಮೋಕ್ಷ ಸಾಧಿಸಬೇಕು ಆಗ ಮಾತ್ರ ಜೀವನ ಸಂಪೂರ್ಣವಾಗುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಆಧ್ಯಾತ್ಮದ ಪ್ರಕಾರ ಮನುಷ್ಯನ ಜೀವನ ಸಾರ್ಥಕ ಆಗುವುದು ಧರ್ಮ, ಅರ್ಥ, ಕಾಮ,ಮೋಕ್ಷ ಇವುಗಳನ್ನು ಸಾಧಿಸಿದಾಗ. ಯಾವುದನ್ನು ನಮ್ಮ ಜೀವನದಲ್ಲಿ ಧಾರಣೆ ಮಾಡಿ ಪಾಲಿಸುತ್ತೇವೆ, ಯಾವ ರೀತಿ ಬದುಕುತ್ತೇವೆ ಎಂಬುದು ಧರ್ಮ. ಅರ್ಥ ಎಂದರೆ ಗಳಿಕೆ ಕೇವಲ ಹಣ ಗಳಿಕೆ ಅಲ್ಲ ಪುಣ್ಯ ಗಳಿಕೆ ಎಂಬ ಅರ್ಥವಾಗಿದೆ. ಹಣ ಗಳಿಸಿದರೂ ಅರ್ಥಪೂರ್ಣವಾಗಿರಬೇಕು. ಎಲ್ಲ ಜೀವಿಗಳು ಸಪ್ತ ಧಾತುಗಳಿಂದ ಮಾಡಲ್ಪಟ್ಟಿರುತ್ತದೆ. ಅದರಲ್ಲಿ ಶುಕ್ರ ಧಾತುವಿನಿಂದ ಸಂತಾನ ಅಭಿವೃದ್ಧಿ ಸಾಧ್ಯ. ಜೀವನದಲ್ಲಿ ಲೈಂ ಗಿಕ ಚಟುವಟಿಕೆಯಲ್ಲಿ ಸಕ್ರೀಯನಾಗಿ ಸಂತುಷ್ಟನಾಗಿ ಜೀವನ ನಡೆಸುವುದು ಮುಖ್ಯ. ಒಂದು ವೇಳೆ ಸಾಮರ್ಥ್ಯ ಇಲ್ಲವಾದರೆ ಅದಕ್ಕೆ ತಕ್ಕ ಆಹಾರ ಪದ್ಧತಿ, ದಿನಚರಿ ಇತ್ಯಾದಿಗಳನ್ನು ಒಳಗೊಂಡಿರುವುದು ವಾಜಿಕರಣ ಚಿಕಿತ್ಸೆ. ಪ್ರತಿಯೊಬ್ಬ ವ್ಯಕ್ತಿ ಬ್ರಹ್ಮಚರ್ಯ,ವಾನಪ್ರಸ್ಥ, ಗೃಹಸ್ಥಾಶ್ರಮ, ಸನ್ಯಾಸತ್ವ ಪಾಲನೆ ಮಾಡಬೇಕು. ಜೀವನದಲ್ಲಿ ಲೈಂಗಿಕ ಸಾಮರ್ಥ್ಯವನ್ನು ಪಡೆಯುವುದು ಮುಖ್ಯವಾಗಿದೆ. ಕಾಮವನ್ನು ಸಾಧಿಸಿ ನಂತರ ಮೋಕ್ಷ ಸಾಧ್ಯ ಜೀವನ ಸಾರ್ಥಕ ಆಗಬೇಕಾದರೆ ಇವೆಲ್ಲವೂ ಮುಖ್ಯ.
ಸಂಸಾರದಲ್ಲಿ ಸುಖ ದುಃಖವನ್ನು ಅನುಭವಿಸಿ ನಂತರ ವೈರಾಗ್ಯ ಬಂದ ನಂತರ ಆಧ್ಯಾತ್ಮದ ಕಡೆ ಒಲವು ಬರಲು ಸಾಧ್ಯ. ಮನಸ್ಸಿನಲ್ಲಿ ಮೋಹ ಇದ್ದಾಗ ಮೋಕ್ಷ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಸಂಸಾರ ಸುಖ ಅನುಭವಿಸಿ ನಂತರ ಮೋಕ್ಷ ಸಾಧ್ಯ. ಜೀವನದ ಪ್ರತಿ ಹಂತವನ್ನು ಒಂದೊಂದಾಗಿ ದಾಟಬೇಕು ಆಗ ಸಾಧಿಸಲು ಸಾಧ್ಯ. ಜೀವನದ ಒಂದು ಹಂತ ದಾಟಿದ ನಂತರ ಮುಂದೆ ನೋಡಬೇಕು ಹೊರತು ಹಿಂದಿನ ಹಂತವನ್ನು ನೋಡಬಾರದು ಆಗ ಮೋಕ್ಷ ಸಾಧ್ಯ. ಸಾಮಾನ್ಯವಾಗಿ ಕಾಮ ಅಂದರೆ ಲೈಂಗಿಕ ವಿಷಯವನ್ನು ಅಸಹ್ಯವಾಗಿ ನೋಡುತ್ತಾರೆ ಆದರೆ ಅದು ಜೀವನದ ಭಾಗ ಜೀವನ ಸಂಪೂರ್ಣವಾಗಬೇಕಾದರೆ ಧರ್ಮ ಪಾಲನೆ, ಅರ್ಥ ಗಳಿಕೆ, ಕಾಮ ಸಾಧನೆ ಮಾಡಿದಾಗ ಮಾತ್ರ ಮೋಕ್ಷ ಸಾಧ್ಯ ಇದರಿಂದ ಜೀವನ ಸಂಪೂರ್ಣವಾಗುತ್ತದೆ. ಈ ವಿಷಯವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಬಹಳ ಒಳ್ಳೆಯದು. ಮನುಷ್ಯನ ಜೀವನ ಅಮೂಲ್ಯವಾದದ್ದು ಹಾಗಾಗಿ ಮೋಕ್ಷ ಸಾಧಿಸುವುದು ಮುಖ್ಯ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.