ಎಲ್ಲರಿಗೂ ಕೆಲವೊಂದು ಪ್ರಶ್ನೆಗಳು ಹುಟ್ಟುವುದು ಸಹಜವಾಗಿದೆ. ವಯಸ್ಸಿಗೆ ತಕ್ಕಂತೆ ಮನುಷ್ಯನ ಬುದ್ಧಿ ಕೂಡ ಬದಲಾವಣೆ ಆಗುತ್ತಾ ಹೋಗುತ್ತದೆ. ನಾವು ಇಲ್ಲಿ ತಲೆಯಲ್ಲಿ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೆಲವು ಮಂದಿ ನಿದ್ರೆಯಲ್ಲಿ ಕೂಡ ನಡೆಯುತ್ತಾರೆ ಏಕೆ?
ಏಕೆಂದರೆ ನಿದ್ರೆಯಲ್ಲಿ ಇರುವಾಗ ಮೆದುಳು ಕೈ ಕಾಲುಗಳನ್ನು ಕದಲಿಸುತ್ತಾ ಇರುತ್ತದೆ. ಇದು ನಮ್ಮ ದಿನನಿತ್ಯದ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ಮೆದುಳು ಕೈ ಕಾಲು ನಡೆಯುವಂತೆ ಸಿಗ್ನಲ್ ಮಾಡಿದರೂ ಗಾಬಾ ಎನ್ನುವ ರಾಸಾಯನಿಕ ಅದನ್ನು ತಡೆಯುತ್ತದೆ. ಹೀಗಾಗಿ ಎಲ್ಲರೂ ನಿದ್ರೆಯಲ್ಲಿ ನಡೆಯುವುದಿಲ್ಲ. ಗಾಬಾ ಬೇಕಾದಷ್ಟು ಪ್ರೊಡ್ಯೂಸ್ ಆಗದೇ ಇದ್ದಾಗ ನಡೆಯಲು ಶುರು ಮಾಡುತ್ತಾರೆ. ಇದು ಮುಖ್ಯವಾಗಿ ವಂಶಪಾರಂಪರ್ಯವಾಗಿ ಬರುತ್ತದೆ.
ವಯಸ್ಸು ಏಕೆ ಆಗುತ್ತದೆ? ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಸಹ ವಯಸ್ಸಾಗುವುದು ಸಹಜವಾಗಿದೆ. ಇದಕ್ಕೆ ಕಾರಣವೇನೆಂದರೆ ನಮ್ಮ ದೇಹವು ಅನೇಕ ಕಣಗಳಿಂದ ತುಂಬಿರುತ್ತದೆ. ದೇಹದಲ್ಲಿ ಜೀವಕೋಶಗಳು ಹುಟ್ಟುತ್ತಿರುತ್ತವೆ. ಜೀವಕೋಶ ಎರಡು ಆದಾಗ ಡಿ.ಎನ್.ಎ. ಸ್ವಲ್ಪ ದೊಡ್ಡದಾಗುತ್ತದೆ. ಇದನ್ನು ಕ್ರೋಮೋಸೋಮ್ ಎಂದು ಕರೆಯಲಾಗುತ್ತದೆ. ಜೀವಕೋಶ ಪ್ರತಿ ಬಾರಿ ಎರಡು ಆದಾಗ 40ವರ್ಷಗಳ ನಂತರ ಟಿಲೋಮೀರ್ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ವಯಸ್ಸು ಆಗುತ್ತದೆ.
ಮನುಷ್ಯರಲ್ಲಿ ಬೆವರು ಏಕೆ ಬರುತ್ತದೆ? ಸಾಮಾನ್ಯವಾಗಿ ಮನುಷ್ಯನ ದೇಹದ ತಾಪಮಾನ 98.6°ಫ್ಯಾರನ್ ಹೀಟ್ ಇರುತ್ತದೆ. ವ್ಯಾಯಾಮ ಮಾಡಿದಾಗ ಶರೀರದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಗ್ರಂಥಿಗಳು ಬೆವರನ್ನು ಉತ್ಪತ್ತಿ ಮಾಡುತ್ತವೆ. ಈ ಬೆವರಿನಲ್ಲಿ ನೀರು ತುಂಬಿರುತ್ತದೆ. ಬೆವರು ಹೊರಗೆ ಬರುವುದರಿಂದ ಶರೀರದ ಉಷ್ಣತೆ ಕಡಿಮೆ ಆಗುತ್ತದೆ.ಬಿಸಿನೀರಿನಿಂದ ಸ್ನಾನ ಮಾಡಿದಾಗ ಈ ಬಿಸಿ ನಮ್ಮ ದೇಹದಲ್ಲಿ ಇರುತ್ತದೆ. ಇದರಿಂದಾಗಿ ಸ್ನಾನ ಮುಗಿಸಿದ ಮೇಲೆ ದೇಹದಿಂದ ಬೆವರು ಉತ್ಪತ್ತಿಯಾಗುತ್ತದೆ.ಸ್ನಾನ ಮಾಡಿದ ನಂತರ ಬೆವರಬಾರದು ಎಂದರೆ ಬಿಸಿನೀರು ಮತ್ತು ತಣ್ಣನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಸ್ನಾನ ಮಾಡಬೇಕು.