ಬಡೆಸೊಪ್ಪು, ಸೊಂಪು ಎಂಬ ಹೆಸರಿನಿಂದ ಕರೆಯುವ ನೋಡಲು ಜೀರಿಗೆಯಂತೆ ಕಾಣುವ ಸೊಂಪನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ ಆದರೆ ಅದರ ಉಪಯೋಗಗಳ ಬಗ್ಗೆ ಗೊತ್ತಿರುವುದಿಲ್ಲ. ಸೊಂಪನ್ನು ತಿನ್ನುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು ಯಾವುವು ಹಾಗೂ ಯಾರ್ಯಾರು ಸೊಂಪನ್ನು ತಿನ್ನಬಹುದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಜನರು ಊಟವಾದ ನಂತರ ಸೊಂಪನ್ನು ತಿನ್ನುತ್ತಾರೆ. ಕೆಲವು ಕಡೆಗಳಲ್ಲಿ ಮದುವೆ ಮನೆಗಳಲ್ಲಿ ಊಟದ ನಂತರ ಸೊಂಪನ್ನು ಕೊಡುವುದು ಪದ್ಧತಿಯಾಗಿದೆ. ಸೊಂಪು ತಿನ್ನುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ. ಪ್ರತಿದಿನ ಊಟವಾದ ನಂತರ 30 ನಿಮಿಷ ಬಿಟ್ಟು ಸೊಂಪನ್ನು ತಿನ್ನುವುದರಿಂದ ದೇಹದಲ್ಲಿ ಬ್ಯಾಡ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ. ಊಟದ ನಂತರ ಒಂದು ಸ್ಪೂನ್ ಸೊಂಪು ತಿನ್ನುವುದರಿಂದ ಲಿವರ್ ಗೆ ಉತ್ತಮ ಹಾಗೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಎರಡು ಕಪ್ ನೀರಿಗೆ ಸೊಂಪು ಹಾಕಿ ಕುದಿಸಿ ಸೋಸಿ ಈ ನೀರನ್ನು ಪ್ರತಿದಿನ 2-3 ಬಾರಿ ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುತ್ತದೆ. ಕಫದ ಸಮಸ್ಯೆಯನ್ನು ಎದುರಿಸುವವರು ಸೊಂಪನ್ನು ತಿನ್ನುವುದರಿಂದ ಕಫದ ಸಮಸ್ಯೆ ದೂರವಾಗುತ್ತದೆ. ಅಸ್ತಮಾ ಹಾಗೂ ಕೆಮ್ಮು ಇರುವವರು ಸೊಂಪನ್ನು ತಿನ್ನುವುದು ಒಳ್ಳೆಯದು. ಮುಟ್ಟಿನ ತೊಂದರೆ ಎದುರಿಸುತ್ತಿರುವ ಮಹಿಳೆಯರು ಊಟದ ನಂತರ ಬೆಲ್ಲದ ಜೊತೆ ಸೊಂಪು ತಿನ್ನುವುದರಿಂದ ಮುಟ್ಟಿನ ಕೆಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.

ಸೊಂಪನ್ನು ಮಕ್ಕಳು ಸಹ ತಿನ್ನಬಹುದು ಇದರಿಂದ ಹೊಟ್ಟೆಯಲ್ಲಿರುವ ಕೀಟಾಣುಗಳು ನಾಶವಾಗುತ್ತದೆ. ಒಂದು ಸ್ಪೂನ್ ಸೊಂಪನ್ನು ಒಂದು ಕಪ್ ನೀರಿಗೆ 20 ನಿಮಿಷದವರೆಗೆ ಕುದಿಸಿ ಈ ನೀರನ್ನು ತಣ್ಣಗಾಗಿಸಿ ಚಿಕ್ಕ ಮಗುವಿಗೆ ಕುಡಿಸುವುದರಿಂದ ಮಗುವಿನ ಬಣ್ಣ ಬಿಳುಪಾಗುತ್ತದೆ. ಮಗುವಿಗೆ 1-2 ಸ್ಪೂನ್ ಸೊಂಪು ಅಥವಾ ಅದರ ನೀರನ್ನು ಕುಡಿಸಬೇಕು ಹೆಚ್ಚು ಕುಡಿಸಬಾರದು. ಸೊಂಪಿನ ಪೌಡರನ್ನು ಸಕ್ಕರೆ ಪೌಡರ್ ಜೊತೆ ಸರಿಯಾದ ಪ್ರಮಾಣದಲ್ಲಿ ಸೇರಿಸಿ ಮಿಕ್ಸ್ ಮಾಡಿ ಸೇವಿಸುವುದರಿಂದ ಕೈ ಮತ್ತು ಕಾಲುಗಳ ಉರಿ ನಿವಾರಣೆಯಾಗುತ್ತದೆ ಹಾಗೂ ಆರಾಮೆನಿಸುತ್ತದೆ. ಕೆಲವರಿಗೆ ಬೇಸಿಗೆ ಕಾಲದಲ್ಲಿ ಕೈ, ಕಾಲು ಉರಿ ಬರುತ್ತದೆ. ಸೊಂಪಿನ ಸೇವನೆಯಿಂದ ಸಾಕಷ್ಟು ಉಪಯೋಗ ಇರುವುದರಿಂದ ಆರೋಗ್ಯಕರ ಲಾಭ ಪಡೆಯಬಹುದು. ಸೊಂಪನ್ನು ಎಲ್ಲಾ ವಯಸ್ಸಿನವರು ಸೇವಿಸಬಹುದು ಯಾವುದೇ ಅಡ್ದ ಪರಿಣಾಮ ಬೀರುವುದಿಲ್ಲ. ಕಿರಾಣಿ ಅಂಗಡಿಗಳಲ್ಲಿ ಸೊಂಪು ಸಿಗುತ್ತದೆ. ಅದರ ಪೌಡರ್ ಮಾಡಿಕೊಂಡು ಸೇವಿಸಬಹುದು. ಎಲ್ಲರೂ ಸೊಂಪನ್ನು ಊಟದ ನಂತರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!