ಆಸ್ಟ್ರೇಲಿಯಾಗೆ ತಲೆ ನೋವು ತರಿಸಿರುವ ಭಾರತೀಯ ಆಟಗಾರನನ್ನು ಹೆಸರಿಸಿದ ಮ್ಯಾಕ್ಸ್‌ವೆಲ್‌! ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗಿಂತ ಹೆಚ್ಚು ತಲೆ ನೋವು ತರಿಸಿರುವ ಆಟಗಾರನನ್ನು ಆಸ್ಟ್ರೇಲಿಯಾ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೆಸರಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ ಹದಿಮೂರನೇ ಆವೃತ್ತಿಯು ಮುಗಿದಿದ್ದು ಅದು ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್‌ ಇಂಡಿಯಾ ನವೆಂಬರ್ 27 ರಿಂದ ಆರಂಭವಾಗುವ ಸೀಮಿತ ಓವರ್‌ಗಳ ಸರಣಿಗೆ ತಯಾರಿ ನಡೆಸುತ್ತಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿರುವ ಕೆ.ಎಲ್‌ ರಾಹುಲ್ ಔಟ್‌ ಮಾಡುವ ಬಗ್ಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡದ ಸಹ ಆಟಗಾರರಿಗೆ ಸಲಹೆ ನೀಡಿದ್ದಾರೆ. ಕೆ ಎಲ್‌ ರಾಹುಲ್‌ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇಬ್ಬರೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡದಲ್ಲಿ ಆಡಿದ್ದರು. ಆದರೆ ಈ ಇಬ್ಬರ ಪ್ರದರ್ಶನ ತದ್ವಿರುದ್ದವಾಗಿದೆ. ಕೆ ಎಲ್‌ ರಾಹುಲ್‌ ಟೂರ್ನಿಯ ಟಾಪ್‌ ಸ್ಕೋರರ್‌ ಆದರೆ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅದ್ಭುತ ಲಯದಲ್ಲಿರುವ ರಾಹುಲ್‌ ಆಸ್ಟ್ರೇಲಿಯಾ ವಿರುದ್ಧವೂ ಅದೇ ಆಟವನ್ನು ಮುಂದುವರಿಸುವ ಸಾಧ್ಯತೆ ಇದೆ.

ಕೆ ಎಲ್‌ ರಾಹುಲ್‌ ಗನ್‌ ಆಟಗಾರ ಆಗಿದ್ದು ಬೇರೆ ದಿನ ನಾವು ಟೀಮ್‌ ಮೀಟಿಂಗ್‌ ನಡೆಸಿದ್ದೆವು. ಈ ವೇಳೆ ರಾಹುಲ್‌ ಅವರನ್ನು ಔಟ್‌ ಮಾಡುವುದು ಹೇಗೆ ಎಂದು ನನ್ನನ್ನು ಎಲ್ಲರೂ ಕೇಳಿದಾಗ.
ಅದಕ್ಕೆ ನಾನು ಅವರನ್ನು ಓಡಿಸಿ ರನೌಟ್‌‌ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದೆ ಎಂದು ಕ್ರಿಕೆಟ್‌.ಕಾಮ್‌.ಎಯುಗೆ ತಿಳಿಸಿದರು.

ಇಡೀ ಸರಣಿಯುದ್ದಕ್ಕೂ ಕೆ ಎಲ್ ರಾಹುಲ್ ಅವರನ್ನು ನಿಯಂತ್ರಿಸಬೇಕಾದರೆ, ಓಡಿಸಿ ಔಟ್‌ ಮಾಡಲು ತಂಡದ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಈ ಯೋಜನೆ ನಮಗೆ ವರ್ಕ್‌ಔಟ್‌ ಆಗಲಿದೆ ಎಂದು ಭಾವಿಸುತ್ತೇನೆ. ಕೆ.ಎಲ್‌ ರಾಹುಲ್‌ ಅದ್ಭುತ ಪ್ರದರ್ಶನಕಾರ ಹಾಗೂ ದೊಡ್ಡ ಮನೋಧರ್ಮವನ್ನು ಹೊಂದಿದ್ದಾರೆ. ಒತ್ತಡದ ಸನ್ನಿವೇಶಗಳಲ್ಲಿ ತಂಡದ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನವೆಂಬರ್ 27 ರಿಂದ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ನಂತರ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಾದಾಟ ನಡೆಸಲಿವೆ. ಇದಾದ ಬಳಿಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಹೋರಾಟ ನಡೆಸಲಿವೆ. ವಿರಾಟ್‌ ಕೊಹ್ಲಿ ಸೀಮಿತ ಓವರ್‌ಗಳ ಸರಣಿ ಮುಗಿಸಿಕೊಂಡು ಕೇವಲ ಒಂದೇ ಟೆಸ್ಟ್‌ ಪಂದ್ಯದ ನಂತರ ತವರಿಗೆ ಮರಳಲಿದ್ದಾರೆ. ಕೊಹ್ಲಿ ಹಾಗೂ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಜನವರಿ ಆರಂಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಇರುವುದಿಲ್ಲ. ಮೊದಲನೇ ಟೆಸ್ಟ್ ಡಿಸೆಂಬರ್‌ 17 ರಿಂದ ಅಡಿಲೇಡ್‌ ಓವಲ್‌ನಲ್ಲಿ ಜರುಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!