ಪ್ರತಿಯೊಬ್ಬ ವ್ಯಕ್ತಿಗೆ ತಮ್ಮದೇ ಆದ ಗುರಿ ಇರುತ್ತದೆ ಅದಕ್ಕಾಗಿ ಪ್ರತಿದಿನ ಕೆಲಸ ಮಾಡಬೇಕು ಡೇಲಿ ರೂಟೀನ್ ಮಾಡಿಕೊಂಡು ಅದನ್ನು ಪಾಲಿಸಬೇಕು. ಅದರಲ್ಲಿ ಮಾರ್ನಿಂಗ್ ರೂಟೀನ್ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಎಲ್ಲ ಯಶಸ್ವಿ ವ್ಯಕ್ತಿಗಳು ತಮ್ಮ ಮಾರ್ನಿಂಗ್ ರೂಟೀನ್ ನ್ನು ಪ್ರಾಮಾಣಿಕವಾಗಿ ಅನುಸರಿಸುತ್ತಾರೆ. ಮಾರ್ನಿಂಗ್ ಸಮಯದಲ್ಲಿ ಮಾಡುವ ಕೆಲವು ಆಕ್ಟಿವಿಟಿಗಳ ಲೀಸ್ಟ್ ಇರುತ್ತದೆ. ಇದರಿಂದ ಇಡೀ ದಿನ ಸಂತೋಷವಾಗಿ, ಆಕ್ಟೀವ್ ಆಗಿ ಇರಬಹದು. ಮುಂಜಾನೆಯ ಪ್ರಾರಂಭ ಶಾಂತಿಯಿಂದ ಆಗಬೇಕು ಆದ್ದರಿಂದ ಮೊದಲು ಧ್ಯಾನ ಮಾಡಬೇಕು. ನಂತರ ನಮ್ಮ ಬಗ್ಗೆ ಕೆಲವು ಪಾಸಿಟಿವ್ ವಾಕ್ಯಗಳನ್ನು ನಮಗೆ ನಾವೇ ಹೇಳಿಕೊಳ್ಳಬೇಕು ಇದರಿಂದ ಮೆದುಳಿನಲ್ಲಿ ನ್ಯೂರಾನ್ ಸರ್ಕ್ಯೂಟ್ ಹೆಚ್ಚಾಗುತ್ತದೆ. ಮನಸ್ಸು ಬಹಳ ಶಕ್ತಿಯನ್ನು ಹೊಂದಿರುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ಕನಸು ಇರುತ್ತದೆ. ಪ್ರತಿದಿನ ಬೆಳಗ್ಗೆ ನಿಮ್ಮ ಕನಸು ಈಗಾಗಲೇ ಈಡೇರಿದೆ ಎಂದು ಕಣ್ಣುಮುಚ್ಚಿ ಮನಸಿನೊಳಗೆ ಯೋಚನೆ ಮಾಡಬೇಕು ಇದರಿಂದ ನಮ್ಮ ಕನಸು ಈಡೇರುವ ಸಾಧ್ಯತೆಗಳಿರುತ್ತವೆ.

ದೇಹದಲ್ಲಿ ಕೋರ್ಟಿಸೋಲ್ ಎಂಬ ಹಾರ್ಮೋನ್ ಇರುತ್ತದೆ ಅದು ಭಯ, ಒತ್ತಡಕ್ಕೆ ಕಾರಣವಾಗಿರುತ್ತದೆ. ಮುಂಜಾನೆ ವ್ಯಾಯಾಮ ಮಾಡುವುದರಿಂದ ಕೋರ್ಟಿಸೋಲ್ ಹಾರ್ಮೋನ್ ಕಡಿಮೆಯಾಗುತ್ತದೆ ಹಾಗೂ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಮುಖದಲ್ಲಿ ಕಳೆ ಬರುತ್ತದೆ. ನಂತರ ಪ್ರತಿ ಮುಂಜಾನೆ ಕನಿಷ್ಟ 20 ನಿಮಿಷ ಒಳ್ಳೆಯ ಪುಸ್ತಕಗಳನ್ನು ಓದಬೇಕು ಇದರಿಂದ ಮನಸ್ಸಿನ ವ್ಯಾಯಾಮ ಆಗುತ್ತದೆ ಇದರಿಂದ ಮೈಂಡ್ ನಲ್ಲಿ ಒಳ್ಳೆಯ ವಿಚಾರಗಳು ತುಂಬುತ್ತವೆ. ಮುಂಜಾನೆ ಈ ದಿನ ಏನು ಮಾಡಬೇಕು ಎಂಬ ಲೀಸ್ಟ್ ಬರೆಯಬೇಕು. ಇದರಿಂದ ಆ ದಿನ ಏನು ಮಾಡಬೇಕು ಎಂದು ಪ್ಲಾನ್ ಇರುತ್ತದೆ. ಹೀಗೆ ಪ್ರತಿದಿನ ಮಾಡಿದರೆ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ವಿಡಿಯೋ ಕೃಪೆ: ಯು ಕನ್ನಡ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!