ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಕನ್ನಡಿಗರ ಮನ ಗೆದ್ದ ಸಿನಿಮಾ ನಟಿ ರಾಧಿಕಾ ಪಂಡಿತ್ ಅವರು ಪ್ರತಿಯೊಂದು ಹಬ್ಬವನ್ನು ಬಹಳ ವಿಜೃಂಭಣೆಯಿಂದ, ಸಂಭ್ರಮದಿಂದ ಆಚರಿಸುತ್ತಾರೆ. ರಾಧಿಕಾ ಪಂಡಿತ್ ಅವರು 2020ರಲ್ಲಿ ತಮ್ಮ ಕುಟುಂಬದವರೊಂದಿಗೆ ಬಹಳ ಸಮಯ ಕಳೆದಿದ್ದಾರೆ. ಲಾಕ್ ಡೌನ್ ಆದ ಕಾರಣದಿಂದ ಯಶ್ ಅವರು ಶೂಟಿಂಗ್ ಇಲ್ಲದೆ ಮನೆಯಲ್ಲಿ ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆದಿದ್ದಾರೆ ಮಕ್ಕಳೊಂದಿಗಿನ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮಗನ ಬರ್ತಡೇಯನ್ನು ಗೋವಾದಲ್ಲಿ ಆಚರಿಸಿದ್ದಾರೆ. ಈ ವರ್ಷದ ದೀಪಾವಳಿಯನ್ನು ಯಶ್ ಅವರ ಮನೆಯಲ್ಲಿ ಕುಟುಂಬದವರೊಂದಿಗೆ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿದ್ದರು. ಇಡೀ ಮನೆಯನ್ನು ದೀಪದಿಂದ ಅಲಂಕರಿಸಿದ್ದರು.
ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಈ ಬಾರಿ ಪಟಾಕಿಯನ್ನು ಹೊಡೆಯುವುದು ನಿಷೇಧಿಸಿರುವುದರಿಂದ ಪಟಾಕಿ ಹೊಡೆಯದೇ ಇರುವುದಾಗಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ರಾಧಿಕಾ ಅವರು ದೀಪಾವಳಿ ಹಬ್ಬವನ್ನು ತಮ್ಮ ಮುದ್ದಾದ ಮಗ ಹಾಗೂ ಮಗಳೊಂದಿಗೆ ಸಂತೋಷದಿಂದ ಆಚರಿಸಿದ್ದಾರೆ ಅಲ್ಲದೇ ಮನೆಯ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸಿದ್ದಾರೆ. ಅವರು ದೀಪಾವಳಿ ಆಚರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ರಾಧಿಕಾ ಪಂಡಿತ್ ಅವರು ಅವರ ಕುಟುಂಬದವರೊಂದಿಗೆ ಸಂತೋಷವಾಗಿರಲಿ ಎಂದು ಆಶಿಸೋಣ.