ದೀಪಾವಳಿ ಹಬ್ಬದಲ್ಲಿ ಐಶ್ವರ್ಯ ಅರ್ಜುನ್ ಸೀರೆಯಲ್ಲಿ ಬಳಕುವ ಬಳ್ಳಿಯಂತೆ ಕಾಣಿಸಿಕೊಂಡಿದ್ದಾರೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬೆಳಕಿನ ಹಬ್ಬ ಎಂದರೆ ಮನೆ, ಮನೆಗಳಲ್ಲೂ ಮತ್ತು ಗಲ್ಲಿ, ಗಲ್ಲಿಗಳಲ್ಲೂ ಪಟಾಕಿಯ ಶಬ್ಧ ಕೇಳುತ್ತದೆ ಆದರೆ ಈ ಬಾರಿಯ ದೀಪಾವಳಿ ಬಹಳ ವಿಶೇಷವಾಗಿದ್ದು ಎಲ್ಲರೂ ಕೂಡ ಪಟಾಕಿಯನ್ನು ದೂರಕ್ಕೆ ತಳ್ಳಿ ಕೇವಲ ದೀಪಗಳನ್ನು ಹಚ್ಚುವ ಮೂಲಕ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಇದೇ ರೀತಿ ಚಂದನವನದಲ್ಲಿ ದೀಪಾವಳಿ ಸಡಗರ ಜೋರಾಗಿತ್ತು. ಎಲ್ಲ ನಟ ನಟಿಯರು ತಮ್ಮ ಮನೆಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ನಟ ಅರ್ಜುನ ಸರ್ಜಾ ಅವರು ತಮ್ಮ ಕುಟುಂಬದವರೊಂದಿಗೆ ಸೇರಿ ಚೆನ್ನೈನ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸರ್ಜಾ ಅವರ ಇಬ್ಬರು ಮಕ್ಕಳಾದ ಐಶ್ವರ್ಯ ಹಾಗೂ ಅಂಜನಾ ಕೂಡ ಬಹಳ ಮುದ್ದಾಗಿ ಕಂಗೊಳಿಸುತ್ತಿದ್ದರು.
ಐಶ್ವರ್ಯಾ ಸರ್ಜಾ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವುದು ವಿರಳ. ಆದರೆ ದೀಪಾವಳಿ ಹಬ್ಬಕ್ಕೆಂದು ಐಶ್ವರ್ಯಾ ಸೀರೆಯುಟ್ಟು ಸಂಭ್ರಮಿಸಿದ್ದಾರೆ. ಅವರು ಅಮ್ಮ, ಅಪ್ಪ, ತಂಗಿಯ ಜೊತೆ ಸೇರಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಅವರು ಹಬ್ಬಕ್ಕಾಗಿ ಸೀರೆಯನ್ನು ಉಟ್ಟಿದ್ದಾರೆ ನೋಡಲು ಸುಂದರವಾಗಿರುವ ಅವರು ಸೀರೆಯಲ್ಲಿ ಮುದ್ದಾಗಿ ಕಾಣುತ್ತಾರೆ. ಅವರ ಮನೆಯ ನಾಯಿ ಕೂಡ ಮನೆಯ ಹಬ್ಬದಲ್ಲಿ ಭಾಗಿಯಾಗಿತ್ತು. ಸೀರೆ ಉಟ್ಟುಕೊಂಡು ಕುಟುಂಬದವರೊಂದಿಗೆ ಫೋಟೊ ತೆಗೆಸಿಕೊಂಡು ಅರ್ಜುನ ಸರ್ಜಾ ಮತ್ತು ಐಶ್ವರ್ಯ ಅವರು ತಮ್ಮ ಇನ್ಸಟಾಗ್ರಾಮ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರಿಗೆ ಮಕ್ಕಳೆಂದರೆ ತುಂಬಾ ಅಚ್ಚು ಮೆಚ್ಚು. ಅವರ ಇಡೀ ಕುಟುಂಬ ಸಂತೋಷವಾಗಿರಲಿ ಎಂದು ಆಶಿಸೋಣ.