ಜನರನ್ನು ನಕ್ಕು ನಗಿಸುವ ಕಾಮಿಡಿ ಹೀರೊ ಆಗಿ ದಶಕಗಳ ಕಾಲ ತೆರೆಯ ಮೇಲೆ ಮಿಂಚಿದ ಜಗ್ಗೇಶ್ ತಾತ ಆಗಿದ್ದಾರೆ. ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಮತ್ತು ಸೊಸೆ ಕೇಟಿಗೆ ಗಂಡು ಮಗು ಜನಿಸಿದೆ. ಜಗ್ಗೇಶ್ ಕುಟುಂಬದಲ್ಲಿ ಮೊದಲ ಮೊಮ್ಮಗನ ಆಗಮನವಾಗಿದೆ. ಜಗ್ಗೇಶ್ ಅವರ ಸೊಸೆ ಮತ್ತು ಮೊಮ್ಮಗ ಹೇಗಿದ್ದಾರೆ ಎನ್ನುವುದನ್ನು ಈ ಲೇಖನ ಹಾಗೂ ಕೆಲವು ಫೋಟೋಗಳ ಮೂಲಕ ತಿಳಿದುಕೊಳ್ಳೋಣ.

ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಅವರು ಹಾಲೆಂಡ್‌ನ ಚೆಲುವೆ ಕೇಟಿ ಅವರನ್ನು ವಿವಾಹವಾಗಿದ್ದರು. ಇವರಿಬ್ಬರದು ಪ್ರೇಮ ವಿವಾಹ. ಜಗ್ಗೇಶ್ ಸಂತೋಷದಿಂದ ಒಪ್ಪಿ ಮದುವೆ ಮಾಡಿದ್ದರು. ಈಗ ಗುರುರಾಜ್ ಅಪ್ಪ ಆದ ಸಂಭ್ರಮ. ಜಗ್ಗೇಶ್‌ಗೆ ತಾತನಾದ ಸಂತಸ. ಗುರುರಾಜ್ ಗಿಲ್ಲಿ ಮತ್ತು ಸಂಕ್ರಾಂತಿ ಚಿತ್ರಗಳಲ್ಲಿ ನಟಿಸಿದ್ದರು. ಥಾಯ್ಲೆಂಡ್‌ನಲ್ಲಿ ಕೇಟಿ ಅವರನ್ನು ಭೇಟಿಯಾಗಿದ್ದರು. ಪ್ರೇಮಕ್ಕೆ ತಿರುಗಿದ ಸ್ನೇಹ ಮದುವೆಯಾಗುವ ತನಕ ಮುಂದುವರಿದಿತ್ತು. ವಿದೇಶದಲ್ಲೇ ವಿವಾಹವಾದ ನಂತರ ಮಂತ್ರಾಲಯದಲ್ಲೂ ವಿವಾಹ ಕಾರ್ಯವನ್ನು ನಡೆಸಲಾಗಿತ್ತು.

ಹೀಗಿದ್ದಾಗ ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಇತ್ತೀಚಿಗೆ ತಮ್ಮ ಸುಂದರ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತ್ನಿ ಪರಿಮಳ ಇಬ್ಬರು ಮಕ್ಕಳು ಸೊಸೆ ಮತ್ತು ಮೊಮ್ಮಗನ ಫೋಟೋವನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಜಗ್ಗೇಶ್ ಇತ್ತೀಚಿಗಷ್ಟೆ ಪತ್ನಿ ಪರಿಮಳ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಕುಟುಂಬದರೆಲ್ಲರು ಸೇರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ. ಇಡೀ ಕುಟುಂಬ ಪರಿಮಳ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಜಗ್ಗೇಶ್ ಮಡದಿ ಪರಿಮಳನಿಗೆ ಸಣ್ಣಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು ಎಂದು ಬರೆದುಕೊಂಡಿದ್ದಾರೆ. ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ನನ್ನ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರದ ನೆನಪು ಮಾತ್ರ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪುಮಾತ್ರ ಎಂದಿದ್ದಾರೆ.

ಇನ್ನು ಎಷ್ಟೇ ಬಿಝಿಯಾಗಿರುವ ತಾತಂದಿರಾದರೂ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ ಅವರನ್ನು ಖುಷಿಪಡಿಸಲು ಅವರೊಂದಿಗೆ ಆಟವಾಡುತ್ತಾರೆ. ಮಗುವಿನ ಜೊತೆ ಮಗುವಾಗಿ ಖುಷಿಯಿಂದಿರುತ್ತಾರೆ. ಈ ವಿಷಯದಲ್ಲಿ ನಟ ಜಗ್ಗೇಶ್‌ ಯಾವತ್ತೂ ಹಿಂದೆ ಬಿದ್ದಿಲ್ಲ. ತಮ್ಮ ಮೊಮ್ಮಗ ಅರ್ಜುನನ್ನು ಖುಷಿಪಡಿಸಲು, ಅವನೊಂದಿಗೆ ಕಾಲ ಕಳೆಯಲು ಜಗ್ಗೇಶ್‌ ಸಾಕಷ್ಟು ಸಮಯ ಮೀಸಲಿಡುತ್ತಾರೆ. ಈ ಹಿಂದೆ ಮೊಮ್ಮಗನ ಮುಂದೆ ಕೈ ಕಟ್ಟಿ ನಿಂತು ವಿಧೇಯ ವಿದ್ಯಾರ್ಥಿಯಾಗಿದ್ದ ಜಗ್ಗೇಶ್‌ ಈ ಬಾರಿ ಮೊಮ್ಮಗನಿಗಾಗಿ ಪೌರಾಣಿಕ ವೇಷ ಧರಿಸಿದ್ದಾರೆ.

ಹಾಸ್ಯ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಜಗ್ಗೇಶ್‌ ಈಗ ಮೊಮ್ಮಗನಿಗಾಗಿ ಪೌರಾಣಿಕ ವೇಷ ಧರಿಸಿ, ಮೊಮ್ಮಗನನ್ನು ಖುಷಿಪಡಿಸಿದ್ದಾರೆ. ಅರ್ಜುನ್‌ ಕೂಡಾ ತಾತನ ಗೆಟಪ್‌ಗೆ ಫಿದಾ ಆಗಿದ್ದಾನೆ. ಮೊಮ್ಮಗ ಪೌರಾಣಿಕ ವೇಷ ನೋಡಿರದ ಕಾರಣ ಜಗ್ಗೇಶ್‌ ಆ ಗೆಟಪ್‌ ಹಾಕಿ, ತೋರಿಸಿದ್ದಾರೆ. ಈ ಖುಷಿಯನ್ನು ಜಗ್ಗೇಶ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೊಮ್ಮಗ ಅರ್ಜುನ ನೋಡಿರದ ಪೌರಾಣಿಕ ವೇಷದೊಂದಿಗೆ. ತಾತನ ಪೌರಾಣಿಕ ವೇಷಕಂಡು ಮೂಕವಿಸ್ಮಿತನಾದ ಅರ್ಜುನ. ಅವನ ಸಂತೋಷಕ್ಕಾಗಿ ನನ್ನ ಸಣ್ಣ ಪ್ರಯತ್ನ. ಮಕ್ಕಖು ಅಸಲು, ಮೊಮ್ಮಕ್ಕಳು ಬಡ್ಡಿ. ಮನುಷ್ಯರಿಗಿಂತ ಅಸಲಿಗಿಂತ ಬಡ್ಡಿಯ ಮೇಲೆ ಆಸೆ ಹೆಚ್ಚು. ವಾರದ ಯಾಂತ್ರಿಕ ಬದುಕು ಬದಲಿಸಲು ಭಾನುವಾರ ನನ್ನ ಬಳಿ ಬಂದು ಬಿಡುತ್ತಾನೆ ಎಂದು ಟ್ವೀಟ್‌ ಮಾಡಿದ್ದಾರೆ ಜಗ್ಗೇಶ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!