ಈ ಭೂಮಿಯ ಮೇಲೆ ಹಲವಾರು ಸಸ್ಯಜಾತಿಗಳಿವೆ. ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ. ಅದರಲ್ಲಿ ಅಮೃತಬಳ್ಳಿ ಕೂಡ ಒಂದು. ನಾವು ಇಲ್ಲಿ ಈ ಬಳ್ಳಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಅಮೃತಬಳ್ಳಿಯಲ್ಲಿ ತುಂಬಾ ಔಷಧೀಯ ಗುಣ ಇದೆ.ಇದಕ್ಕೆ ಸುಮಾರು 75 ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಇದೆ. ಇದನ್ನು ‘ಆಯುರ್ವೇದಿಕ್ ಹರ್ಬ್’ ಎಂದು ಪರಿಗಣಿಸಲಾಗಿದೆ.ಹಲವಾರು ಔಷಧಿಗಳನ್ನು ತಯಾರಿಸುವಾಗ ಈ ಬಳ್ಳಿಯನ್ನು ಬಳಸಲಾಗುತ್ತದೆ.ಈ ಬಳ್ಳಿಯಲ್ಲಿ ಇರುವ ವಿಟಮಿನ್ ಗಳು, ಮಿನರಲ್ಸ್ ಗಳು ಔಷಧೀಯ ಗುಣಗಳನ್ನು ಹೆಚ್ಚಿಸುತ್ತವೆ.
ಜಾಂಯ್ಡೀಸ್ ಹಾಗೂ ಕಾಮಾಲೆ ಖಾಯಿಲೆ ಇರುವವರು ತಮ್ಮ ಡಯೆಟ್ ನಲ್ಲಿ ಈ ಅಮೃತಬಳ್ಳಿ ಅಥವಾ ಎಲೆಯನ್ನು ಸೇರಿಸಿಕೊಳ್ಳಬೇಕು.ಇದರ ಜ್ಯೂಸ್ ಮಾಡಿ ಕುಡಿಯಬಹುದು.ಇದರ ಎಲೆಯನ್ನು ಹಸಿಯಾಗಿ ಸೇವಿಸಬಹುದು.ಇದರ ಕಷಾಯ ಮಾಡಿಯಾದರೂ ಕುಡಿಯಬಹುದು. ಇದರಿಂದ ಕಾಮಾಲೆಯಂತಹ ರೋಗಗಳು ದೂರವಾಗುತ್ತವೆ.
ಕೀಲುನೋವಿನ ಸಮಸ್ಯೆ ಇರುವವರು ಈ ಬಳ್ಳಿಯ ದಂಟು ಅಥವಾ ಎಲೆಯ ಕಷಾಯವನ್ನು ಮಾಡಿ ಕುಡಿಯಬೇಕು. ಇದು ಕೀಲುನೋವನ್ನು ಹೋಗಲಾಡಿಸುತ್ತದೆ. ಹಾಗೆಯೇ ಇದನ್ನು ಜ್ವರ ಬಂದಾಗ ಕಷಾಯ ಮಾಡಿ ಕುಡಿದರೆ ಜ್ವರ ಕಡಿಮೆ ಆಗುತ್ತದೆ.ಅದರಲ್ಲೂ ಮಲೇರಿಯಾ ಮತ್ತು ಡೆಂಗ್ಯೂ ಕಾಣಿಸಿಕೊಂಡಾಗ ಜ್ವರ ಹೆಚ್ಚಾಗಿರುತ್ತದೆ. ಆಗ ಇದನ್ನು ಕುಡಿದರೆ ಒಳ್ಳೆಯದು.
ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೆಯೇ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಕಿಡ್ನಿಯಲ್ಲಿ ಇರುವ ವಿಷಕಾರಿಗಳನ್ನು ಹೊರ ಹಾಕುತ್ತದೆ. ಹಾಗೆಯೇ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಇದು ಸಹಕಾರಿ. ಇದರಿಂದ ಗ್ಯಾಸ್ಟ್ರಿಕ್, ಮಲಬದ್ಧತೆ,ಎಸ್ಸೆಡಿಟಿಯಂತಹ ತೊಂದರೆಗಳನ್ನು ನಿವಾರಿಸುತ್ತದೆ.ಹಾಗೆಯೇ ಕಿವಿನೋವು ಇರುವವರು ಅದರ ಎಲೆಯ 2 ಹನಿ ರಸವನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಕಿವಿನೋವು ಕಡಿಮೆ ಆಗುತ್ತದೆ.
ಅಷ್ಟೇ ಅಲ್ಲ ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ.ಹೈ ಬಿಪಿ ಇರುವವರು,ಅಧಿಕ ರಕ್ತದೊತ್ತಡ ಇರುವವರಿಗೆ ಇದು ಒಳ್ಳೆಯ ಔಷಧಿ ಆಗಿದೆ.ಡಯಾಬಿಟಿಸ್ ಇರುವವರು ತಮ್ಮ ಆಹಾರದಲ್ಲಿ ಆಗಾಗ ಈ ಎಲೆಯನ್ನು ಸೇವಿಸುತ್ತಿದ್ದರೆ ಅವರ ಶುಗರ್ ಲೆವೆಲ್ ಸರಿಯಾದ ಪ್ರಮಾಣದಲ್ಲಿ ಇರುತ್ತದೆ.ಇದು ರಕ್ತಹೀನತೆ ಅಥವಾ ಅನೀಮಿಯಾ ಖಾಯಿಲೆಗಳನ್ನು ಸಹ ದೂರಗೊಳಿಸುತ್ತದೆ.ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ.ಹಾಗೆಯೇ ಇದು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ.
ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಇರುವ ವಿಟಮಿನ್ ‘ಎ’ ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ.ತುಂಬಾ ಶೀತ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಎಲೆಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಎಲ್ಲಾ ಗುಣವಾಗುತ್ತದೆ. ಹೆಚ್ಚು ಮೊಡವೆ ಆಗುವವರು ಇದನ್ನು ಸೇವಿಸಬೇಕು.ಇದು ರಕ್ತವನ್ನು ಶುದ್ಧಿ ಮಾಡುತ್ತದೆ.ಇದು ನರಕೋಶದ ಶಕ್ತಿಯನ್ನು ವೃದ್ಧಿಸುತ್ತದೆ.