ಸಾಮಾನ್ಯವಾಗಿ ಇಂದಿನ ಬೇಸಿಗೆಯ ಬಿಸಿಲಿಗೆ ಮಾನವನ ದೇಹವು ಬಹಳಷ್ಟು ಉಷ್ಣತೆಯಿಂದ ಕೂಡಿರುತ್ತದೆ ದೇಹದ ಉಷ್ಣತೆಯಿಂದಾಗಿ ಜನರಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ ಸಾಮಾನ್ಯವಾಗಿ ಸರಿಯಾದ ಸಮಯದಲ್ಲಿ ಮೂತ್ರ ಮಾಡಲು ಆಗದೇ ಇರುವುದು ದೇಹದಲ್ಲಿನ ಉಷ್ಣತೆಯಿಂದ ಉರಿಮೂತ್ರದ ಸಮಸ್ಯೆ ಉಂಟಾಗುವುದು ದೇಹದಲಿನ ಉಷ್ಣತೆಯ ಪ್ರಭಾವ ಹೆಚ್ಚು ಆಯಾಸಗೊಳ್ಳುವುದು ಹೀಗೆ ಹಲವಾರು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ ಇಂತಹ ಬೇಸಿಗೆಯ ಸಮಯದಲ್ಲಿ ನಮ್ಮ ದೇಹದ ಉಷ್ಣತೆಯನ್ನು ಕಡೆಮೆ ಮಾಡಿಕೊಳ್ಳಲು ಮತ್ತು ಉರಿಮೂತ್ರವನ್ನು ನಿಯಂತ್ರಿಸಲು ನಾವು ಸೇವಿಸಬಹುದಾದ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಒಂದು ಚಮಚ ಕಾಮಕಸ್ತೂರಿ ಬೀಜವನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎದ್ದ ನಂತರ ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ ಇನ್ನೂ ನಿಂಬೆ ಹಣ್ಣಿನ ಶರಬತ್ತನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹವನ್ನು ಬೇಸಿಗೆಯ ಬಿಸಿಲಿನಿಂದ ತಂಪಾಗಿಡಲು ಇದು ಸಹಾಯ ಮಾಡುತ್ತದೆ
ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಉಪ್ಪನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉರಿಮೂತ್ರ ನಿಯಂತ್ರಣಕ್ಕೆ ಬರುತ್ತದೆ ಅಲ್ಲದೆ ರಾತ್ರಿ ವೇಳೆ ಬಾರ್ಲಿಯನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಸೇವಿಸುವುದರಿಂದ ದೇಹದ ಉಷ್ಣತೆ ಕ್ರಮೇಣ ಸುದಾರಿಸುತ್ತದೆ
ಅಲ್ಲದೇ ಸಾಮಾನ್ಯವಾಗಿ ಈ ಬೇಸಿಗೆಯ ಸಮಯದಲ್ಲಿ ಆಗಾಗ್ಗೆ ಎಳನೀರನ್ನು ಕುಡಿಯುತ್ತಿರುವುದರಿಂದ ನಮ್ಮ ದೇಹವನ್ನು ಬಿಸಿಲಿನಿಂದ ರಕ್ಷಿಸಲು ಮತ್ತು ಉಷ್ಣತೆಯನ್ನು ಕಡಿಮೆ ಮಾಡಲು ಎಳನೀರು ನೆರವಾಗುತ್ತದೆ ಹಾಗೂ ಲೋಳೆಸರದ ಲೋಳೆಯನ್ನು ತೆಗೆದು ಅದನ್ನು ಬಿಸಿನೀರಿನೊಂದಿಗೆ ಸೇವಿಸುವುದರಿಂದ ದೇಹವು ತಂಪಾಗಿರುತ್ತದೆ ಅಲ್ಲದೇ ಹಾಲನ್ನು ಕುಡಿಯುವಾಗ ನೀವು ಕುಡಿಯುವ ಹಾಲಿನೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ
ಒಂದು ಗ್ಲಾಸ್ ಬಿಸಿ ನೀರಿನೊಂದಿಗೆ ಅರ್ಧ ಹೋಳು ನಿಂಬೆ ರಸವನ್ನು ಹಿಂಡಿ ಅದಕ್ಕೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪನ್ನು ಬೆರೆಸಿ ದಿನದಲ್ಲಿ ಮೂರ್ನಾಲ್ಕು ಬಾರಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಅದು ನಿಮ್ಮ ದೇಹವನ್ನು ತಂಪಾಗಿಡುವುದಲ್ಲದೇ ಉರಿಮೂತ್ರದಂತಹ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ