ಹೊಸ ಮನೆ ನಿರ್ಮಾಣ ಮಾಡಿದ ನಂತರ ಮನೆಗೆ ಪೇಂಟ್ ಮಾಡದೆ ಇದ್ದರೆ ಮನೆ ಸುಂದರವಾಗಿ ಕಾಣುವುದಿಲ್ಲ, ಆಗ ನೆನಪಾಗುವುದು ಏಷಿಯನ್ ಪೇಂಟ್. ಏಷಿಯನ್ ಪೇಂಟ್ ಕಂಪನಿ ದೇಶದ ಫೇಮಸ್ ಬಣ್ಣ ತಯಾರಿಕಾ ಕಂಪನಿಯಾಗಿದೆ. ಈ ಕಂಪನಿ ಬೆಳೆದು ಬಂದ ರೀತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ದೇಶದ ಅತಿದೊಡ್ಡ ಪೇಂಟ್ಸ್ ಕಂಪನಿಗಳಲ್ಲಿ ಏಷಿಯನ್ ಪೇಂಟ್ಸ್ ಒಂದಾಗಿದೆ. ಭಾರತದ 53% ಪೇಂಟ್ಸ್ ಮಾರುಕಟ್ಟೆಯನ್ನು ಏಷಿಯನ್ ಪೇಂಟ್ಸ್ ಆಕ್ರಮಿಸಿದೆ, ಆ ಮಟ್ಟಕ್ಕೆ ಜನರು ಏಷಿಯನ್ ಪೇಂಟ್ಸ್ ಖರೀದಿಸುತ್ತಾರೆ. ಅಲ್ಲದೆ ದೇಶದ ಮೂರನೇ ಅತಿದೊಡ್ಡ ಬಣ್ಣ ತಯಾರಿಕಾ ಸಂಸ್ಥೆಯಾಗಿ ಹೊರಹೊಮ್ಮಿದೆ. 16 ದೇಶಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಏಷಿಯನ್ ಪೇಂಟ್ಸ್ ಇದು ಸ್ವಾತಂತ್ರ್ಯ ಸಿಕ್ಕ ಸಮಯಕ್ಕಿಂತ 78 ವರ್ಷಗಳ ಹಿಂದೆ ಅಂದರೆ ಬ್ರಿಟಿಷರ ಕಾಲದಲ್ಲಿ ಇತ್ತು. ಒಂದು ಕಡೆ ಗಾಂಧೀಜಿಯಂತಹ ಮಹಾನ್ ವ್ಯಕ್ತಿಗಳು ಚಳುವಳಿಯಲ್ಲಿ ತೊಡಗಿದ್ದರೆ ಇನ್ನೊಂದು ಕಡೆ ನಾಲ್ಕು ಜನ ಗ್ಯಾರೇಜ್ ನಲ್ಲಿ ಕುಳಿತು ಬಣ್ಣ ತಯಾರಿಕೆಯ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದರು. ಆ ಸಮಯದಲ್ಲಿ ವಿದೇಶದಿಂದ ಬಣ್ಣವನ್ನು ಆಮದು ಮಾಡಿಕೊಳ್ಳುವುದನ್ನು ಬ್ರಿಟಿಷರು ನಿಷೇಧಿಸಿದ್ದರು. ಚಂಪಕ್ಲಾಲ್ ಚೋಕ್ಸಿ, ಚಿಮನ್ ಲಾಲ್ ಚೋಕ್ಸಿ, ಸೂರ್ಯಕಾಂತ್ ಧಾನಿ, ಅರವಿಂದ ವಕೀಲರು ಈ ನಾಲ್ಕು ಜನ ಸ್ನೇಹಿತರು ಮುಂಬೈನಲ್ಲಿ ಏಷಿಯನ್ ಪೇಂಟ್ಸ್ ಹಾಗೂ ಆಯಿಲ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಆರಂಭದಲ್ಲಿ ಕೆಲವೇ ಬಣ್ಣವನ್ನು ತಯಾರಿಸಿ ನಾಲ್ಕು ಜನ ಸ್ನೇಹಿತರು ಸ್ಥಳೀಯ ಜನರನ್ನು ಸಂಪರ್ಕಿಸಿ ಬಹಳ ಶ್ರಮಪಟ್ಟರು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಬಣ್ಣವನ್ನು ತಯಾರಿಸಿದರು. ಕೆಲವೇ ವರ್ಷಗಳಲ್ಲಿ ಸಾಕಷ್ಟು ಲಾಭವನ್ನು ಗಳಿಸಿತು. 1950ರಲ್ಲಿ 23 ಕೋಟಿ ಲಾಭವನ್ನು ಗಳಿಸಿತು. ಜನರ ಮೆಚ್ಚಿನ ಪೇಂಟ್ ಕಂಪನಿಯಾಯಿತು. 1954ರಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರಕಾರನ ಹತ್ತಿರ ವ್ಯಂಗ್ಯಚಿತ್ರವನ್ನು ತಯಾರಿಸುತ್ತಾರೆ, ಜನರಿಗೆ ಹೆಸರಿಸಲು ಸ್ಪರ್ಧೆಯನ್ನು ಇಟ್ಟರು. ಜನರು ಸ್ಪರ್ಧಿಸಿ 47,000 ಅಕ್ಷರಗಳು ಬಂದಿತ್ತು. ಮ್ಯಾಸ್ಕಾಟ್ ಆದನಂತರ ಕಂಪನಿಯು ಅದನ್ನು ತನ್ನ ಪ್ರಸಿದ್ಧ ಡಿಸ್ಟಂಪರ್ ಬ್ರಾಂಡ್ ಟಾಟಾರಿಗೆ ಲಿಂಕ್ ಮಾಡಿ ಮಾರುಕಟ್ಟೆಯಲ್ಲಿ ಡೋಂಟ್ ಲೋಸ್ ಯುವರ್ ಟೆಂಪರ್, ಯೂಸ್ ಟ್ರ್ಯಾಕ್ಟರ್ ಡಿಸ್ಟಂಪರ್ ಎಂದು ಟ್ಯಾಗ್ ಲೈನ್ ನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಈ ಡಿಸ್ಟಂಪರ್ ಅನ್ನು ನೋಡುವುದು ಜನರ ಮೊದಲ ಆಯ್ಕೆಯಾಯಿತು. ನಂತರ ಈ ಕಂಪನಿಯು ತನ್ನದೇ ಆದ ಬಣ್ಣದ ಘಟಕವನ್ನು ಮಹಾರಾಷ್ಟ್ರದಲ್ಲಿ ಪ್ರಾರಂಭಿಸಿತು ನಂತರ ವಿದೇಶದಲ್ಲಿಯೂ ಪ್ರಾರಂಭಿಸಿತು.
ಮುಂಬೈನ ಬೀದಿಯಲ್ಲಿ ಶುರುವಾದ ಏಷಿಯನ್ ಪೇಂಟ್ ಕಂಪನಿ ಇಂದು ಪ್ರಪಂಚದಾದ್ಯಂತ ತನ್ನ ಕಾರ್ಯ ನಿರ್ವಹಿಸುತ್ತಿದೆ. ಇಷ್ಟೇ ಅಲ್ಲದೆ ಸ್ನಾನಗ್ರಹದ ಫಿಟಿಂಗ್ ಹಾಗೂ ಕಿಚನ್ ಫಿಟಿಂಗ್ ಕೂಡ ಇದು ಮಾಡುತ್ತದೆ. ನಂತರ ಏಷಿಯನ್ ಪೇಂಟ್ಸ್ ತನ್ನದೇ ಆದ ವೆಬ್ ಸೈಟ್ ಹಾಗೂ ಜಾಹೀರಾತನ್ನು ಪ್ರಾರಂಭ ಮಾಡಿತು. ಏಷಿಯನ್ ಪೇಂಟ್ಸ್ ಕಂಪನಿ ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರವನ್ನು ನಡೆಸುತ್ತದೆ ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವುದಲ್ಲದೆ, ಕಾಲಕಾಲಕ್ಕೆ ಅಭಿಯಾನವನ್ನು ಕೂಡ ನಡೆಸುತ್ತದೆ. ಏಷಿಯನ್ ಪೇಂಟ್ಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದೆ. ಏಷಿಯನ್ ಪೇಂಟ್ಸ್ ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾಗಿ ಇಂದಿಗೂ ಸಹ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿರುವ ಕೆಲವೇ ಕೆಲವು ಕಂಪನಿಗಳಲ್ಲಿ ಒಂದಾಗಿದೆ, ಪ್ರಪಂಚದಾದ್ಯಂತ ಅತಿ ಹೆಚ್ಚು ಬೇಡಿಕೆ ಇರುವ ಕಂಪನಿಗಳಲ್ಲಿ ಒಂದಾಗಿದೆ. ನಮ್ಮ ದೇಶದ ಮುಂಬೈ ನಗರದಲ್ಲಿ ಪ್ರಾರಂಭವಾಗಿ ಇಂದು ಪ್ರಪಂಚದಾದ್ಯಂತ ಸದ್ದು ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.