ಇಂದಿಗೂ ಪ್ರಸಿದ್ಧವಾದ ಪ್ರೇಮಕಥೆಯ ರಾಧಾ ಕೃಷ್ಣರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರಾಧಾ ಕೃಷ್ಣರ ಪ್ರೇಮ ಪ್ರಸಿದ್ದವಾಗಿದೆ. ಆದರೆ ಅವರು ಒಂದಾಗುವುದಿಲ್ಲ. ಕೃಷ್ಣ ಒಮ್ಮೆ ರಾಧೆಯನ್ನು ಪ್ರೇಮಿಸುವ ವಿಷಯವನ್ನು ತನ್ನ ತಾಯಿಯ ಬಳಿ ಹೇಳಿದಾಗ ಯಶೋದೆ ಕೃಷ್ಣನ ಹತ್ತಿರ ರಾಧಾ ನಿನಗಿಂತ 5 ವರ್ಷ ದೊಡ್ಡವಳು ಆದ್ದರಿಂದ ಇದು ಸರಿಯಲ್ಲ ಎಂದು ಹೇಳುತ್ತಾಳೆ. ಅದೇನೆ ಇರಲಿ ನಾನು ರಾಧಾಳನ್ನು ಪ್ರೀತಿಸಿದ್ದೇನೆ ಅವಳು ನನ್ನನ್ನು ಪ್ರೀತಿಸಿದ್ದಾಳೆ ಇದರ ಹೊರತು ನನಗೇನು ಬೇಕಿಲ್ಲ ಎಂದು ಕೃಷ್ಣನು ಹೇಳುತ್ತಾನೆ. ಯಶೋದಾ ಈ ವಿಷಯವನ್ನು ನಂದನ ಬಳಿ ಹೇಳುತ್ತಾಳೆ. ನಂದ ಕೃಷ್ಣನನ್ನು ಗಂಗಾಚಾರ್ಯರ ಆಶ್ರಮಕ್ಕೆ ಕಳುಹಿಸುತ್ತಾನೆ. ಗಂಗಾಚಾರ್ಯರು ಕೃಷ್ಣನಿಗೆ ತನ್ನ ಜೀವನದ ಗುರಿಯನ್ನು ಅರ್ಥೈಸುವ ಕಾರ್ಯ ಮಾಡುತ್ತಾರೆ. ಗಂಗಾಚಾರ್ಯರು ಕೃಷ್ಣನಿಗೆ ನೀನು ಜನಿಸಿರುವುದೆ ಬೇರೆ ಕಾರಣಕ್ಕಾಗಿ, ಧರ್ಮದ ರಕ್ಷಣೆಗಾಗಿ ನೀನು ಜನಿಸಿದ್ದೀಯಾ ಎಂದು ಹೇಳುತ್ತಾರೆ. ಅದಕ್ಕೆ ಕೃಷ್ಣ ನನಗೆ ಯಾವ ಧರ್ಮವು ತಿಳಿದಿಲ್ಲ, ಆಸಕ್ತಿಯೂ ಇಲ್ಲ. ನನಗೆ ಗೊತ್ತಿರುವುದು ದನ, ಪ್ರಕೃತಿ ಹಾಗೂ ಈ ಜನರು ನನಗೆ ಇಷ್ಟೇ ಸಾಕು ಎಂದು ಹಠ ಹಿಡಿದನು.
ಆಗ ಗಂಗಾಚಾರ್ಯರು ಕೃಷ್ಣನಿಗೆ ನಿಜವಾದ ತಂದೆ ತಾಯಿ ನಂದ ಯಶೋದೆಯಲ್ಲ ದೇವಕಿ ವಸುದೇವ ಎಂಬ ಸತ್ಯವನ್ನು ಹೇಳುತ್ತಾರೆ. ಇದರಿಂದ ಗೊಂದಲಕ್ಕೊಳಗಾದ ಕೃಷ್ಣನು ಗೋವರ್ಧನ ಗಿರಿಯ ತುದಿಗೆ ಹೋಗಿ ನಿಲ್ಲುತ್ತಾನೆ ಆಗ ಸೂರ್ಯಾಸ್ತದ ಸಮಯವಾಗಿತ್ತು ಸೂರ್ಯನ ಪ್ರಭೆಯಿಂದ ದಿವ್ಯ ಶಕ್ತಿಯೊಂದು ಕೃಷ್ಣನೊಳಗೆ ಸೇರಿತು. ಅವನೊಳಗೆ ಜ್ಞಾನೋದಯವಾಯಿತು. ಇದರಿಂದ ಅವನ ಕರ್ತವ್ಯ ಪ್ರಜ್ಞೆ ಜಾಗೃತಿಗೊಳ್ಳುತ್ತದೆ. ಈ ವಿಷಯದಿಂದ ರಾಧೆಗೂ ಗರ್ವ ಹಾಗೂ ಹೆಮ್ಮೆ ಉಂಟಾಗುತ್ತದೆ. ಕೃಷ್ಣ ತನ್ನ ಪ್ರೀತಿಯ ಕೊಳಲನ್ನು ರಾಧೆಗೆ ನೀಡುತ್ತಾನೆ. ನೀಡುವಾಗ ಈ ಕೊಳಲು ನಿನಗೆ ಮಾತ್ರ ಸ್ವಂತ ಎಂದು ಹೇಳುತ್ತಾನೆ. ಅಂದಿನಿಂದ ಕೃಷ್ಣ ಕೊಳಲನ್ನು ನುಡಿಸುವುದಿಲ್ಲ ಎಂಬ ಪ್ರತೀತಿ ಇದೆ. ಅಂತ್ಯದಲ್ಲಿ ಇಬ್ಬರು ಬೇರೆಯವರೊಂದಿಗೆ ವಿವಾಹವಾಗುತ್ತಾರೆ. ಆದರೂ ಇವರ ಪ್ರೇಮ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಹಾಗೂ ಇಂದಿಗೂ ಶಾಶ್ವತವಾಗಿದೆ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.