ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಬೇರೆ ಬೇರೆ ಜಾತಿಯ ಹಣ್ಣುಗಳು ಬೇರೆ ಬೇರೆ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತವೆ. ಅಂತಹವುಗಳಲ್ಲಿ ಪ್ಯಾಶನ್ ಫ್ರೂಟ್ ಕೂಡ ಒಂದು. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಹಣ್ಣು ಬಹಳ ಅನುಕೂಲಕರವಾಗಿದೆ.ಅದರ ಹೊರಗಡೆ ಇರುವ ನಾರಿನ ಅಂಶ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಹೊಟ್ಟೆಯಲ್ಲಿ ಇರುವ ಬ್ಯಾಕ್ಟೀರಿಯಾಗಳಿಗೆ ಬಹಳ ಒಳ್ಳೆಯದು. ಈ ಹಣ್ಣನ್ನು ಅರ್ಧದಲ್ಲಿ ಕೊರೆದು ಚಮಚದಲ್ಲಿ ತಿನ್ನಬಹುದು. ಆದರೆ ಸ್ವಲ್ಪ ಹುಳಿಯಾಗಿರುತ್ತದೆ. ಅದನ್ನು ಹಾಲಿಗೆ ಅಥವಾ ಕೋಕೋನಟ್ ಹಾಲಿಗೆ ಸೇರಿಸಿ ಸೇವಿಸಬಹುದು. ಮೊಸರಿಗೆ ಹಾಕಿಕೊಳ್ಳಬಹುದು. ಐಸ್ ಕ್ರೀಮ್ ಗೆ ಫ್ಲೇವರ್ ಆಗಿ ಬಳಸಬಹುದು. ನಂತರ ಅದನ್ನು ಸಾಸ್ ಆಗಿ ಕೂಡ ಬಳಸಬಹುದು.
ಇದರಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಡಯಾಬಿಟಿಸ್ ರೋಗಿಗಳಿಗೆ ಬಹಳ ಒಳ್ಳೆಯದು.ಇದರಲ್ಲಿ ವಿಟಮಿನ್ ‘ಸಿ’ ಕೂಡ ಇದೆ. ಆದ್ದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ದೂರಗೊಳಿಸುತ್ತದೆ.ಹಾಗೆಯೇ ಇದರಲ್ಲಿ ವಿಟಮಿನ್ ‘ಎ’ ಕೂಡ ಇದೆ. ವಿಟಮಿನ್ ‘ಎ’ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಈ ಹಣ್ಣಿನ ಬೀಜದಲ್ಲಿ ಸುಮಾರು 8% ದಷ್ಟು ವಿಟಮಿನ್ ‘ಎ’ ಇದೆ.ಹಾಗಾಗಿ ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕೆಲವು ಹಣ್ಣನ್ನು ನಾವು ತಿಂದು ಸಿಪ್ಪೆಯನ್ನು ಬಿಸಾಡುತ್ತೇವೆ.ಆದರೆ ಈ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಹಾಗಿಲ್ಲ.ಇದರ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ದಿನ ನಿತ್ಯದ ಆಹಾರದಲ್ಲಿ ಚೂರು ಚೂರು ಪುಡಿ ಸೇರಿಸಿ ಸೇವಿಸಬೇಕು. ಇದರಿಂದ ಮನುಷ್ಯನ ದೇಹದ ಒಳ್ಳೆಯ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತದೆ. ಅಧಿಕ ರಕ್ತದೊತ್ತಡವನ್ನು ಸಹ ಕಡಿಮೆ ಮಾಡುತ್ತದೆ.
ಸರಿಯಾಗಿ ಹಣ್ಣಾದ ಪ್ಯಾಶನ್ ಫ್ರೂಟ್ ನ್ನು ತಿನ್ನಬೇಕು. ಕಾಯಿಯನ್ನು ತಿನ್ನಬಾರದು. ಮಕ್ಕಳಿಗೆ ಕೊಟ್ಟ ಕೂಡ ಇದನ್ನು ತುಂಬಾ ಖುಷಿಯಾಗಿ ತಿನ್ನುತ್ತಾರೆ. ಹುಳಿ ಇಷ್ಟ ಪಡುವವರು ಈ ಹಣ್ಣನ್ನು ಬಹಳ ಇಷ್ಟಪಡುತ್ತಾರೆ.ಈ ಹಣ್ಣನ್ನು ಎಲ್ಲರೂ ತಿಂದು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.