ಈಡಿ ಸೃಷ್ಟಿಯೆ ವಿಚಿತ್ರಗಳ, ವಿಸ್ಮಯಗಳ ಬೀಡಾಗಿದೆ. ಏನಾದರೊಂದು ಅದ್ಭುತ ಎನ್ನಿಸುವಂತ ಘಟನೆಗಳು ನಮ್ಮೆದುರು ಬರುತ್ತಲೆ ಇರುತ್ತವೆ. ಇಂತಹ ವಿಸ್ಮಯಗಳನ್ನು ಪ್ರತ್ಯಕ್ಷವಾಗಿ ಕಂಡಾಗ ಇಲ್ಲವೆ ನೋಡಿದವರಿಂದ ಕೇಳಿದಾಗ ಅಚ್ಚರಿಯೊಂದಿಗೆ ರೋಮಾಂಚನ ಆಗುವುದು ಸಹಜ. ಇಂತಹದ್ದೆ ಒಂದು ವಿಸ್ಮಯ ಸಂಗತಿಯ ಕುರಿತು ಇಲ್ಲಿ ನಾವು ತಿಳಿಯೋಣ.
ಅರ್ಜಂಟೀನಾದ ಒಬ್ಬ ಮೀನುಗಾರ ಮೀನು ಹಿಡಿಯುವುದಕ್ಕೆಂದು ಸಮುದ್ರಕ್ಕೆ ಹೊರಟಿದ್ದ. ಸ್ನೇಹಿತರೊಂದಿಗೆ ಸಮುದ್ರದ ಬಳಿ ಹೋದಾಗ ಅಲ್ಲೊಂದು ಗುಂಡಗೆ ಇರುವ ಕಲ್ಲು ಕಾಣಿಸಿತ್ತು. ಅರೆ ಇದರಲ್ಲೆನು ವಿಶೇಷ ಕಲ್ಲು ಸಮುದ್ರದ ಬಳಿ ಇರುವುದು ಸಹಜ ಅಂದುಕೊಂಡರೆ ಮುಂದೆ ಕೇಳಿ. ಆ ಕಲ್ಲು ಮೊದಲಿಗೆ ಅಲ್ಲಿ ಇರಲಿಲ್ಲ. ಆದ್ದರಿಂದ ಆ ಯುವಕ ಅದನ್ನು ಸರಿಯಾಗಿ ಗಮನಿಸಿದಾಗ, ಆ ಕಲ್ಲು ಆಮೆಯ ಚಿಪ್ಪಿನ ಆಕಾರ ಹೊಂದಿತ್ತು. ಇದನ್ನು ನೋಡಿದ ಯುವಕರ ಗುಂಪಿಗೆ ಗಾಬರಿಯಾಗಿ ಡೈನೋಸಾರ್ ಮೊಟ್ಟೆ ಇರಬಹುದು ಎಂಬ ಅನುಮಾನದಿಂದ ಅಲ್ಲಿಂದ ಓಡಿ ಹೋಗಿದ್ದರು. ನಂತರ ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತಂದರು. ವಿಷಯ ತಿಳಿದ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅವರು ಕೂಲಂಕಷವಾಗಿ ಪರಿಶೀಲಿಸಿದಾಗ ಅರಿವಾದ ಸತ್ಯ ಎಂದರೆ ಅದು ಯಾವುದೇ ರೀತಿಯ ಕಲ್ಲು ಆಗಿರದೆ ಗ್ಲಿಪ್ಲೋಡನ್ ಚಿಪ್ಪಾಗಿತ್ತು.
ಈ ಗ್ಲಿಪ್ಲೋಡನ್ ಹತ್ತು ಸಾವುರ ವರ್ಷಗಳ ಹಿಂದೆ ಬದುಕಿದ್ದ ಜೀವಿ. ಈಗ ಅದರ ಯಾವ ಸಂತತಿಯು ಇಲ್ಲ. ಗ್ಲಿಪ್ಲೋಡನ್ ಆಮೆ ಜಾತಿಗೆ ಸೇರಿದ ಗಾತ್ರದಲ್ಲಿ ದೊಡ್ಡದಾದ ಜೀವಿ. ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯ ಕಷ್ಷಬಿದ್ದು ಬೇಟೆಯಾಡುತ್ತಿದ್ದ. ಹೀಗೆ ಬೇಟೆಯಾಡಿದ ಗ್ಲಿಪ್ಲೋಡನ್ ಚಿಪ್ಪನ್ನು ಶೇಖರಿಸಿ ಇಟ್ಟುಕೊಳ್ಳುತ್ತಿದ್ದ ಮನುಷ್ಯ, ಚಳಿಗಾಲದಲ್ಲಿ ಈ ಚಿಪ್ಪನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದ. ಚಿಪ್ಪಿನ ಒಳಗಡೆಯಲ್ಲಿ ಮಲಗುತ್ತಿದ್ದ. ಅರ್ಜಂಟೀನಾದಲ್ಲಿ 2015 ರಲ್ಲಿಯೆ ಒಂದು ಗ್ಲಿಪ್ಲೋಡನ್ ಚಿಪ್ಪು ದೊರಕಿದ್ದು ಈಗ ಮತ್ತೊಂದು ಚಿಪ್ಪು ಸಿಕ್ಕಿರುವುದು ಆಶ್ಚರ್ಯಕರವಾಗಿ ಕಂಡಿದೆ. ಹತ್ತು ಸಾವಿರ ವರ್ಷಗಳ ಹಿಂದೆ ಅಳಿಸಿ ಹೋದ ಜೀವಜಾತಿಯ ಕುರುಹು ಈಗ ಸಿಗುವುದು ಆಶ್ಚರ್ಯಕ್ಕೆ ಆಸ್ಪದ ಕೊಟ್ಟಿದೆ. ಹತ್ತು ಸಾವಿರ ವರ್ಷಗಳ ಹಿಂದಿನ ಸಂಶೋಧನೆ ಮಾಡಲು ಈ ಚಿಪ್ಪನ್ನು ಭೂಗೋಳ ಸಂಶೋಧನಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಏನೋ ಇರಬೇಕು ಎಂದು ನೋಡದೆ ಹೋಗದೆ, ಸೂಕ್ಷ್ಮವಾಗಿ ಗಮನಿಸಿ ಆ ಯುವಕ ತನ್ನ ಸೂಕ್ಷ್ಮ ಬುದ್ದಿಯಿಂದ ಸಾವಿರ ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ತಿಳಿಯಲು ಸಹಾಯಕವಾಗಿದ್ದಾನೆ.
ಭೂಮಿಯಲ್ಲಿ ಊಹಿಸಲಾಗದಂತಹ ಎಷ್ಟೋ ರಹಸ್ಯಗಳು ಇವೆ. ಎಷ್ಟು ಸಂಶೋಧನೆ ಮಾಡಿದರೂ ಭೇಧಿಸಲಾಗದ ಒಂದು ಅಂಶವಿದೆ. ಅದರ ಮೂಲ ತಲುಪಲು ಸಾಧ್ಯವಾಗುತ್ತಿಲ್ಲ. ಇಂತಹ ಅದೆಷ್ಟು ವಿಸ್ಮಯಗಳು ಭೂಮಿಯ ಒಡಲಲ್ಲಿ ಅಡಗಿದೆಯೊ ತಿಳಿದಿಲ್ಲ.