2018 ರ P. S.I ಸಿವಿಲ್ ಮಹಿಳಾ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಶಾಮಲಾ ರವರ ಅವರ ಯಶಸ್ಸು, ಸಾಧನೆ, ಜೀವನ ಕಥೆಯನ್ನು ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶಾಮಲಾರವರು ಮೈಸೂರು ಜಿಲ್ಲೆಯ ಕೆ. ಆರ್. ನಗರ ತಾಲೂಕು ಕರ್ತಾಳು ಗ್ರಾಮದವರು. ಇವರ ತಂದೆ ಮೂರ್ತಿ ವೃತ್ತಿಯಲ್ಲಿ ರೈತರು, ತಾಯಿ ಅಕ್ಕ ಇಷ್ಟು ಜನರ ಸುಂದರ ಕುಟುಂಬವನ್ನು ಹೊಂದಿದ್ದಾರೆ. ಶಾಮಲಾರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸುರು ಕಲ್ಲಳ್ಳಿ ಇಲ್ಲಿ ತಮ್ಮ ಅಜ್ಜನ ಮನೆಯಲ್ಲಿ ಓದಿದ್ದಾರೆ. ನಂತರ ಹೈಸ್ಕೂಲ್ ಅನ್ನು ಶ್ರೀ ವಿದ್ಯಾನಿಪತಿ ಪ್ರೌಢಶಾಲೆ ಕೇರಳಾಪುರದಲ್ಲಿಯೂ, ಪಿ. ಯು ಕಾಲೇಜನ್ನು ಪದವಿ ಪೂರ್ವ ಕಾಲೇಜು ಕೆ. ಆರ್ ನಗರದಲ್ಲಿ, ನಂತರ ಡಿಗ್ರಿ ಬಿಎಸ್ಸಿ ಯನ್ನು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ತಮ್ಮ ಕುಟುಂಬದಲ್ಲಿ ಮೂದಲು ಡಿಗ್ರಿ ಮತ್ತು ಸರಕಾರಿ ವೃತ್ತಿಯನ್ನು ಪಡೆದುಕೊಂಡವರು ಇವರೇ. ಮೂದಲಿನಿಂದಲೂ ಕಬಡ್ಡಿ, ಕೋ ಕೋ, ಆಟಗಳಲ್ಲಿ ಮೊದಲಿದ್ದವರು. ಬಡತನದ ಕುಟುಂಬದಲ್ಲಿ ಬೆಳೆದವರಾಗಿದ್ದರಿಂದ ಕೆಲವೊಂದು ಸಮಯ ಶಾಲೆಗೆ ಹಣವನ್ನು ತುಂಬಲು ಆಗದೆ ಇದ್ದಾಗ ಶಿಕ್ಷಕರು ಇವರ ಹಣವನ್ನು ಕೊಟ್ಟಿದ್ದರಂತೆ. ಮುಂದಿನ ವಿದ್ಯಾಭ್ಯಾಸ ಮಾಡಲು ಬಡತನ ಅಡ್ಡಿ ಬಂತು ಅದಕ್ಕಾಗಿ ಅಲ್ಲಿಗೆ ತಮ್ಮ ಓದನ್ನು ನಿಲ್ಲಿಸಿ ಬಿ. ಬಿ. ಒ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ. ಅಲ್ಲಿ ೧೨ ಗಂಟೆಗಳ ಕಾಲ ಕೆಲಸ ಮಾಡಬೇಕಾಗಿತ್ತು. ಕೆಲಸದ ಒತ್ತಡದಿಂದ ಹೊರಗಿನ ಪ್ರಪಂಚದ ಬಗ್ಗೆ ಏನೂ ತಿಳಿಯುತ್ತಿರಲ್ಲ.

ಹೀಗೆ ಒಂದು ದಿನ ಅವರ ಗೆಳತಿ ಅವರನ್ನು ಕಾದಂಬರಿ ಓದಲು ಕರೆದುಕೊಂಡು ಹೋದಾಗ ಅಲ್ಲಿ ಬೇರೆಯವರು ಓದೊದನ್ನು ನೋಡಿ ತಮಗೂ ಮುಂದೆ ಓದಬೇಕು ಅನ್ನೋ ಛಲ ಮನಸ್ಸಿನಲ್ಲಿ ಮೂಡಿತು. ಗ್ರಂಥಾಲಯಕ್ಕೆ ಹೋಗಿ ಪ್ರತಿಯೊಬ್ಬರನ್ನೂ ವಿಚಾರಿಸಿ ಅವರ ಸಲಹೆ ಪಡೆದು ೨೦೧೪ ರಲ್ಲಿ ಪಿ. ಎಸ್. ಐ, ಕೆ. ಎಸ್, ಪರೀಕ್ಷೆ ಬರೆದರು. ಆದರೆ ಗೆಲುವು ಸಿಗಲಿಲ್ಲ. ಬಡತನದಲ್ಲಿದ್ದ ಇವರಿಗೆ ಮೈಸೂರಿನಲ್ಲಿ ಇರಲು ತುಂಬಾ ಕಷ್ಟವಾಗಿತ್ತು. ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ ಸಾಧನೆ ಮಾಡುವುದು ಈ ಸಮಾಜದಲ್ಲಿ ತುಂಬಾ ಕಷ್ಟ ಅಂತಹದರಲ್ಲಿ ಇವರು ತಮ್ಮ ಛಲ ಬಿಡದೆ ಗುತ್ತಿಗೆದಾರರಾಗಿ ಸೇರಿಕೊಳ್ಳುತ್ತಾರೆ ಹಾಗೂ ಇದರ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಶಾಮಲಾರವರು ದೇಹದಲ್ಲಿ ತುಂಬಾ ದಪ್ಪವಾಗಿದ್ದರಿಂದ ಇವರು ಹೊರಗಡೆ ಓಡಲು ಹೋದರೆ ಅನೇಕ ಜನ ಟೀಕಿಸುತ್ತಿದ್ದರಂತೆ ಆದರೆ ಇವರು ಯಾವುದಕ್ಕೂ ಹೆದರದೆ ಅವರ ಮುಂದೆಯೇ ಓಡಲು ಶುರು ಮಾಡಿದರು. ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಿ ಮುಂದೆ ಬಂದಿದ್ದಾರೆ. ಶ್ರಮ ಬಿಡದೆ ಪರೀಕ್ಷೆಗಳನ್ನು ಬರೆಯುತ್ತಿದ್ದರು ಆದರೆ ಯಾವುದೇ ಗೆಲುವು ಇರಲಿಲ್ಲ. ೨೦೧೭ ರ ಓ. ಬಿ. ಸಿ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದರು. ಬೆಂಗಳೂರಿಗೆ ಬಂದು ಅಲ್ಲಿ ತರಗತಿಗಳನ್ನು ಕೇಳುತ್ತಾರೆ . ಶಾಮಲಾರವರಿಗೆ ಏನಾದರೂ ಸಾಧಿಸಬೇಕು ಅನ್ನುವ ಛಲವಿತ್ತು ೧೭/೧೮ ರಲ್ಲಿ ಬರುವಂತಹ ಎಲ್ಲಾ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಿದ್ದಾರೆ.

ಸರಕಾರಿ ಹುದ್ದೆ ಪಡೆಯಲು ದಪ್ಪ ಸಣ್ಣ, ಬಡವ ಶ್ರೀಮಂತ ಅನ್ನುವ ಭೇದ ಭಾವ ಇರಲ್ಲ. ನಮ್ಮನ್ನು ನಾವು ಮೊದಲು ನಂಬಬೇಕು ಆಗ ಖಂಡಿತ ವಾಗಿಯೂ ಯಶಸ್ಸು ಸಿಗುತ್ತದೆ. ೬ನೇ ತರಗತಿಯಿಂದ ೧೨ನೇ ತರಗತಿಯವರೆಗೆ, ಸಮಾಜ ವಿಜ್ಞಾನ, ಜಿ. ಕೆ. ಟುಡೇ, ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಬಿಡಿಸುವುದು, ಎಸ್. ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆ, ದಿನ ಪತ್ರಿಕೆ ಓದುವುದು ಒಳ್ಳೆಯದು ಹೀಗೆ ಹಲವಾರು ಮಾರ್ಗದರ್ಶನ ನೀಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!