ಜಗತ್ತಿನಲ್ಲಿ ಎಂಬತ್ನಾಲ್ಕು ಲಕ್ಷ ಜೀವರಾಶಿಗಳು ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಣ್ಣಿಗೆ ಕಾಣಿಸುವ ಹಾಗೆ ಕೆಲವು ಇದ್ದರೆ,, ಕೆಲವು ಕಣ್ಣಿಗೆ ಕಾಣದಂತಹವು. ಇಂತಹ ಪ್ರಾಣಿಗಳಲ್ಲಿ ಮನುಷ್ಯನು ಒಬ್ಬ. ಇತರ ಪ್ರಾಣಿಗಳಿಗೆ ಇರದಂತಹ ಯೋಚಿಸುವ ಶಕ್ತಿಯನ್ನು, ಮಾತನಾಡುವ ಶಕ್ತಿಯನ್ನು ಹೊಂದಿದ್ದಾನೆ. ಆದರೂ ದೊಡ್ದ ಶಬ್ದಗಳಿಗೂ ಭಯ ಪಡುತ್ತಾನೆ.. ಆದರೆ ಕೆಲವು ಜೀವಿಗಳು ದೇಹದ ಭಾಗ ತುಂಡಾಗಿ ಜೀವ ಹೋಗುವ ಪರಿಸ್ಥಿತಿ ಬಂದರೂ ಮತ್ತೆ ಎದ್ದು ಬರುತ್ತವೆ. ಅಂತಹ ನಾಲ್ಕು ಪ್ರಾಣಿಗಳ ಬಗೆಗೆ ತಿಳಿಯೊಣ. ಅದರಲ್ಲಿ ಒಂದು ಆಕ್ಟೋಪಸ್. ಆಕ್ಟೋಪಸ್ ನೋಡಲು ಎಷ್ಟು ಮೃದುವೋ ಅಷ್ಟೇ ಬುದ್ದಿವಂತ ಪ್ರಾಣಿ. ಹಿಡಿತಕ್ಕೆ ಸಿಕ್ಕಷ್ಟು ತನ್ನ ಬುದ್ದಿವಂತಿಕೆ ಇಂದ ತಪ್ಪಿಸಿಕೊಳ್ಳುತ್ತದೆ.
ಆಕ್ಟೋಪಸ್ ಮೂರು ಹೃದಯಗಳನ್ನು ಹೊಂದಿದ್ದು, ಅದರ ಎಂಟು ಭಾಗಗಳು ಬೇರೆ ಬೇರೆ ಮೆದುಳುಗಳನ್ನು ಹೊಂದಿರುತ್ತವೆ. ಅದರಿಂದಾಗಿಯೆ ದೇಹದ ಯಾವುದೇ ಭಾಗ ತುಂಡಾದರೂ ಅವು ಒದ್ದಾಡುವುದು. ಆಕ್ಟೋಪಸ್ ನ ಇಂತಹ ವಿಶೇಷತೆಯಿಂದಲೆ ಜಪಾನಿಗರು ಆಕ್ಟೋಪಸ್ ಜೀವಂತ ಇರುವಾಗಲೆ ಬೇಯಿಸಿ ತಿನ್ನುತ್ತಾರೆ. ಹಾಗೆ ತಿಂದವರಿಗೆ ಹೊಟ್ಟೆಯ ಒಳಗೆ ಆಕ್ಟೋಪಸ್ ನ ಚಲನೆಯ ಅನುಭವ ಆಗುತ್ತದೆಯಂತೆ. ಎರಡನೆಯ ಪ್ರಾಣಿ ಸೆಲ್ಮಾಂಡರ್. ಸೆಲ್ಮಾಂಡರ್ ಒಂದು ಬಗೆಯ ಹಲ್ಲಿಯ ಜಾತಿಗೆ ಸೇರಿದ ಪ್ರಾಣಿಯಾಗಿದೆ. ಈ ಸೆಲ್ಮಾಂಡರ್ ಗಳ ವಿಶೇಷ ಎಂದರೆ ದೇಹದ ಭಾಗಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿರುತ್ತದೆ. ಅಂದರೆ ಕಾಲುಗಳೆನಾದರೂ ತುಂಡಾದರೆ ಅವುಗಳನ್ನು ಮರಳಿ ಸೃಷ್ಟಿಸುವ ಶಕ್ತಿ ಹೊಂದಿರುತ್ತದೆ. ಅಷ್ಟೇ ಅಲ್ಲದೇ ಅವುಗಳ ಹೃದಯದಲ್ಲಿ ಅಥವಾ ಸಿಡ್ನಿಯಲ್ಲಿ, ದೇಹದ ಒಳ ಭಾಗದಲ್ಲಿ ಯಾವುದೇ ಸಮಸ್ಯೆ ಇದ್ದರೂ ಬೇಗ ಗುಣವಾಗುತ್ತದೆ. ಇಂತಹ ವಿಶೇಷತೆ ಹೊಂದಿರುವ ಸೆಲ್ಮಾಂಡರ್ ನ ಜಿನ್ಸ್ ಗಳ ಮೇಲೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಮನುಷ್ಯನಿಗೆ ಇವುಗಳಿಂದ ಉಪಯೋಗ ಆಗಬಹುದು ಎಂದು.
ಮೂರನೆಯ ಪ್ರಾಣಿ ಹಾವು. ಕಲ್ಲಿನ ನಾಗರಕ್ಕೆ ಪೂಜಿಸುವ ಮನುಷ್ಯರು ನಿಜವಾದ ಹಾವು ಬಂದಾಗ ಓಡಿ ಹೋಗುತ್ತೆವೆ ಇಲ್ಲವೇ ಹಾವನ್ನು ಹೊಡೆದು ಸಾಯಿಸಿಬಿಡುತ್ತೆವೆ. ಕೆಲವು ಹಾವುಗಳು ಕತ್ತರಿಸಿ ತುಂಡು ತುಂಡಾದರೂ ಬದುಕಿರುತ್ತವೆ. ಅದು ಹೇಗೆಂದರೆ ಹಾವಿನ ತಲೆಯ ಮೇಲೆ ಎರಡು ರಂದ್ರಗಳು ಇರುತ್ತವೆ. ಅದರಿಂದ ಹಾವುಗಳಿಗೆ ಬೇರೆ ಪ್ರಾಣಿಗಳ ದೇಹದ ಬಿಸಿಯ ಅನುಭವವಾಗುತ್ತದೆ. ಹಾವಿನ ಮೂಳೆಗಳಲ್ಲಿ ಹಾಗೂ ಮಾಂಸ ಖಂಡಗಳಲ್ಲಿ ಸತ್ತ ಮಂತರವೂ ಕೆಲವು ಕಾಲ ಶಕ್ತಿ ಇರುತ್ತದೆ. ಅದಕ್ಕೆ ಹಾವುಗಳು ಹೊಡೆದ ನಂತರವೂ ತಮ್ಮನ್ನು ರಕ್ಷಿಸಿಕೊಳ್ಳುವ ಕಾರ್ಯ ಮಾಡುತ್ತವೆ. ಒಂದು ವೇಳೆ ಆ ಸಮಯದಲ್ಲಿ ಅವುಗಳ ಸನಿಹ ಹೋದರೆ ಕಚ್ಚುವ ಅಪಾಯವೂ ಇರುತ್ತದೆ. ರ್ಯಾಟಿಲ್ ನಂತಹ ಹಾವುಗಳ ತಲೆ ಕತ್ತರಿಸಿದರು ಅವು ಎರಡುಗಂಟೆಗಳ ಕಾಲ ಬದುಕುತ್ತವೆ ಹಾಗೂ ದಾಳಿ ಕೂಡ ಮಾಡುತ್ತವೆ. ಅದಕ್ಕಾಗಿಯೇ ಹಾವನ್ನು ಹೊಡೆದಾಗ ಮಣ್ಣಿನಲ್ಲಿ ಮುಚ್ಚುವುದೊ ಇಲ್ಲವೇ ಬೆಂಕಿ ಇಡುವುದೊ ಮಾಡುತ್ತಾರೆ.
ನಾಲ್ಕನೆಯ ಪ್ರಾಣಿ ಜಿರಲೆ. ಜಿರಲೆಗಳು ಡೈನೋಸಾರ್ ಕಾಲದಿಂದಲೂ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಂದರೆ ಮೂವತ್ತು ಕೋಟಿ ವರ್ಷಗಳ ಹಿಂದಿನಿಂದಲೂ ಇದೆ. ದೊಡ್ಡ ದೊಡ್ಡ ಪ್ರಳಯಗಳಿಂದಲೂ ತಪ್ಪಸಿಕೊಂಡು ಬದುಕುವ ಶಕ್ತಿಯನ್ನು ಜಿರಲೆಗಳು ಹೊಂದಿದೆ. ಜಿಲ್ಲೆಗಳನ್ನು ಪ್ರಿಡ್ಜ್ ನಲ್ಲಿ ಇಟ್ಟರು, ಮಂಜುಗಡ್ಡೆಯನ್ನು ಅದಕ್ಕೆ ಕಟ್ಟಿದರು ಅದು ಸಾಯುವುದಿಲ್ಲ. ಅದರ ತಲೆ ಕಟ್ಟದರೂ ಜಿರಲೆಗಳು ಅಷ್ಟು ಬೇಗ ಸಾಯುವುದಿಲ್ಲ ಸಾಯಲು ವಾರವಾದರೂ ಬೇಕು. ತಲೆ ಇಲ್ಲದೆಯು ಜಿರಲೆ ಬದುಕಲು ಕಾರಣ ಅದರ ದೇಹದ ಮೇಲಿನ ಸಣ್ಣ ಸಣ್ಣ ರಂದ್ರಗಳಿಂದ ಅದು ಉಸಿರಾಡುವುದು. ಆಹಾರ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲದೆಯೆ ಜಿರಲೆ ವಸರದ ನಂತರ ಸಾಯುವುದು. ಆರು ಕಾಲು ಹೊಂದಿರುವ ಜಿರಲೆಗಳು ಆಕಸ್ಮಿಕವಾಗಿ ಒಂದು ಕಾಲು ಕಳೆದುಕೊಂಡರು ಸ್ವಲ್ಪ ದಿನಗಳಲ್ಲಿಯೆ ಅಲ್ಲಿ ಮತ್ತೊಂದು ಕಾಲು ಹುಟ್ಟಿಬರುತ್ತದೆ.