ಅನಾದಿ ಕಾಲದಿಂದಲೂ ನಾವು ನೋಡಿಕೊಂಡೇ ಬರುತ್ತಿರುವ ಒಂದು ಸಂಪ್ರದಾಯ ಎಂದರೆ ಅದು ದೇವರ ಪೂಜೆಗೆ ಹೂವನ್ನು ಬಳಸುವುದು, ಅದರಲ್ಲಿಯೂ ಅನಾದಿ ಕಾಲಕ್ಕಿಂತ ಹೆಚ್ಚಾಗಿ ಇಂದಿನ ಆಧುನಿಕ ಯುಗದಲ್ಲಿಯಂತೂ ದೇವರ ಪೂಜೆಯಲ್ಲಿ ಹೂವುಗಳದ್ದೇ ಕಾರುಬಾರು ಹೂವಿನಿಂದ ಅಲಂಕೃತಗೊಂಡ ದೇವರ ವಿಗ್ರಹಗಳನ್ನು ನೋಡುವುದೇ ಒಂದು ಪುಣ್ಯ ಅದನ್ನು ಸವಿಯುವುದೇ ಒಂದು ಚಮತ್ಕಾರ ಹೌದು ಹೂವುಗಳಿಗೆ ಅನಾದಿಕಾಲದಿಂದಲೂ ಸಹ ಅದರದ್ದೇ ಆದ ಮಹತ್ವವಿದೆ ಆದ್ದರಿಂದಲೇ ಹೂವುಗಳಿಗೆ ನಮ್ಮ ಜನರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಹೂವುಗಳನ್ನು ಯಾವುದೇ ಧರ್ಮ ಬೇಧವಿಲ್ಲದೆ ಬಳಸಲಾಗುತ್ತಿದೆ ಮದುವೆ ಪೂಜೆ ಶ್ರಾದ್ಧ ಸೇರಿದಂತೆ ಇನ್ನೂ ಹತ್ತು ಹಲವು ಶುಭ ಕಾರ್ಯಗಳಲ್ಲಿ ಹೂವುಗಳನ್ನು ಉಪಯೋಗಿಸಲಾಗುತ್ತದೆ, ಇನ್ನೂ ಗೃಹಪ್ರವೇಶದ ಸಂಧರ್ಭದಲ್ಲಂತೂ ಹೂವುಗಳಿಂದ ಅಲಂಕೃತಗೊಂಡ ಮನೆಗಳನ್ನು ನೋಡುವುದೇ ಚಂದ ಇನ್ನೂ ಮದುವೆಗಳಲ್ಲಿಯೂ ಸಹ ಅತಿ ಹೆಚ್ಚು ಹೂವುಗಳನ್ನು ಬಳಸಲಾಗುತ್ತದೆ. ದೇವರ ಪೊಜೆಯಂತೂ ಹೂವುಗಳಿಲ್ಲದೇ ನಡೆಯುವುದೇ ಇಲ್ಲ ಹಾಗಾದ್ರೆ ಯಾವ ಕಾರಣಕ್ಕಾಗಿ ದೇವರ ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಹೂವುಗಳಿಗೆ ನಮ್ಮ ಹಿಂದೂ ಪುರಾಣಗಳಲ್ಲಿ ಅದರದ್ದೇ ಆದ ಮಹತ್ವವಿದೆ ಮತ್ತು ಬಹಳ ಹಿಂದಿನ ಕಾಲದಿಂದಲೂ ದೇವರ ಪೂಜೆಗೆ ಹೂವುಗಳನ್ನು ಬಳಸುವುದು ರೂಡಿಯಲ್ಲಿದೆ ಹೂವುಗಳು ಪ್ರಕೃತಿದತ್ತವಾಗಿ ಬಂದಂತಹವು ಮತ್ತು ಅತ್ಯಂತ ಸುವಾಸನೆಯಿಂದ ಕೂಡಿರುವ ಪದಾರ್ಥಗಳವು ಅಲ್ಲದೆ ಹೂವುಗಳಿಂದ ಅಲಂಕೃತಗೊಂಡ ದೇವರ ವಿಗ್ರಹವೂ ಸಹ ಬಹು ಸುಂದರವಾಗಿಯೇ ಕಾಣುತ್ತದೆ ಮತ್ತು ಹೂವುಗಳನ್ನು ಪೂಜೆಯಲ್ಲಿ ಬಳಸುವುದರಿಂದ ಅಲ್ಲಿನ ವಾತಾವರಣ ಕೆಟ್ಟ ವಾಸನೆಯನ್ನು ಕಳೆದು ಹೂವುಗಳ ಪರಿಮಳ ಸುವಾಸನೆಯಿಂದ ತುಂಬುತ್ತದೆ, ದೇವರು ಪೂಜೆಯ ಸಮಯದಲ್ಲಿ ದೇವಲೋಕದಿಂದ ಭೂಲೋಕಕ್ಕೆ ಇಳಿದು ಬರುತ್ತಾನೆಮ ನಂಬಿಕೆ ಇದೆ ಹಾಗೆ ಬಂದಂತಹ ದೇವರು ಇಲ್ಲಿ ಸುಂದರವಾಗಿದೆಯೋ ಯಾವ ಜಾಗ ನೈಸರ್ಗಿಕವಾದ ಪುಷ್ಪಗಳಿಂದ ಸುಂದರವಾಗಿದೆಯೋ ಆ ಜಾಗದಲ್ಲಿ ಬಂದು ನೆಲೆಸುತ್ತಾನೆಂಬುದು ನಂಬಿಕೆ.
ಇನ್ನೂ ಎಲ್ಲ ಧರ್ಮಗಳು ಪ್ರಕೃತಿಯನ್ನು ನಂಬುವುದರಿಂದ ನಮ್ಮ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ಈ ಪುಷ್ಪಗಳನ್ನು ಇಷ್ಟಪಡುತ್ತಾರೆ, ಪ್ರಕೃತಿಯಲ್ಲಿ ದೇವರು ನೆಲೆಸಿರುವುದರಿಂದ ದೇವರಿಗೆ ಪುಷ್ಪಗಳು ಪ್ರಿಯವಾಗಿರುತ್ತವೆ ಮತ್ತು ಸುಗಂಧಿತ ಪುಷ್ಪಗಳಿಂದ ಅಲಂಕೃತಗೊಂಡಿರುವ ಜಾಗ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ದೇವರ ವಿಗ್ರಹಕ್ಕೆ ಹೂವುಗಳಿಂದ ಅಲಂಕಾರ ಮಾಡುವುದರಿಂದ ಅದನ್ನು ನೋಡುವ ಜನರ ಮನಸ್ಸು ಪ್ರಪಂಚದ ಯಾವ ಕಡೆಗೂ ವಾಲದಂತೆ ಏಕಾಗ್ರತೆ ವಹಿಸಲು ಹೂವುಗಳು ಸಹಾಯ ಮಾಡುತ್ತವೆ ಮತ್ತು ಜನರ ಮನಸ್ಸಿನಲ್ಲಿ ಭಕ್ತಿ ಭಾವ ಮೂಡಲು ಸಹ ಸಹಾಯಕಾರಿಯಾಗಿವೆ ಮತ್ತು ಈ ರೀತಿಯ ಹೂವುಗಳು ಜನರ ಮನಸ್ಸಿಗೆ ಮುದ ನೀಡುತ್ತವೆ ಆದ್ದರಿಂದಲೇ ದೇವರ ಪೂಜೆಯಲ್ಲಿ ಹೂವುಗಳನ್ನು ಬಳಸಲಾಗುತ್ತದೆ.
ನಿಮ್ಮ ಯಾವುದೇ ಸಮಸ್ಯೆ ಇರಲಿ ಯಾವುದೇ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಇದ್ರೂ ಕರೆ ಮಾಡಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಎಂಪಿ ಶರ್ಮ ಗುರೂಜಿಯವರೊಂದಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ