ಸಾಮಾನ್ಯವಾಗಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ, ಈ ರೂಡಿ ನಮ್ಮ ಸುತ್ತಮುತ್ತಲಿನ ಬಹುತೇಕ ಜನರಲ್ಲಿ ಇದೆ ಆದರೆ ಕೆಲವರು ಅಂದರೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಿರುವಂತವರು ತುಂಬಾ ದಪ್ಪವಾಗಿ ಇರುವವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರು ಬೆಳಿಗ್ಗೆನ ಸಮಯದಲ್ಲಿ ಬಿಸಿನೀರಿನ ಜೊತೆಗೆ ನಿಂಬೆಹಣ್ಣು ಮತ್ತು ಜೇನುತುಪ್ಪವನ್ನು ಕುಡಿಯುವವರನ್ನು ಕಂಡಿದ್ದೇವೆ.
ಇನ್ನೂ ಗ್ರೀನ್ ಟೀ ಕುಡಿಯುವುದಂತೂ ಸರ್ವೇ ಸಾಮಾನ್ಯವಾಗಿದೆ ಆದರೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದಾಗುವ ಲಾಭಗಳು ಅವರಿಗೆ ತಿಳಿದಿರುವುದಿಲ್ಲ ತಿಳಿದರೆ ಖಂಡಿತ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನದೇ ಇರಲಾರರು, ಹೌದು ಬೆಳ್ಳುಳ್ಳಿಯು ಕೇವಲ ಅಡುಗೆಗೆ ಮತ್ತು ಖಾದ್ಯಗಳನ್ನು ತಯಾರಿಸಲು ಮಾತ್ರವಲ್ಲ ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯಕಾರಿ ಅಂಶಗಳಿವೆ ಹೌದು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮಗೆ ಮತ್ತು ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳಿವೆ ಹಾಗಾದ್ರೆ ಬನ್ನಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಇರುವವರಿಗೆ ಇದು ಬಹಳ ಪ್ರಯೋಜನಕಾರಿ ಯಾಕಂದ್ರೆ ಬೆಳ್ಳುಳ್ಳಿಯು ಮಾನವನ ದೇಹದಲ್ಲಿ ರಕ್ತ ಪರಿಚಲನಾ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮವನ್ನು ಬೀರುವುದಲ್ಲದೆ ಹೃದಯದಿಂದ ದೇಹದ ಎಲ್ಲ ಭಾಗಗಳಿಗೆ ರಕ್ತವು ಸರಾಗವಾಗಿ ಸಂಚಲನ ಮಾಡುವಂತೆ ಇದು ನೋಡಿಕೊಳ್ಳುತ್ತದೆ ಮತ್ತು ಯಾವುದೇ ಹೃದಯ ಸಂಬಂದಿ ಕಾಯಿಲೆಗಳು ನಮ್ಮನ್ನು ಬಾದಿಸದಂತೆ ಇದು ತಡೆಯುತ್ತದೆ ಬೆಳ್ಳುಳ್ಳಿಯ ಜೊತೆ ಜೇನುತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಇದು ಕೂಡ ರಕ್ತನಾಳಗಳನ್ನು ಶುದ್ದೀಕರಿಸಿ ಸರಿಯಾಗಿ ರಕ್ತ ಪರಿಚಲನೆ ಆಗುವಂತೆ ನೋಡಿಕೊಳ್ಳುತ್ತದೆ
ಬೆಳ್ಳುಳ್ಳಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಜ್ವರ ಶೀತ ತಲೆನೋವು ವಾಸಿಯಾಗುವುದಲ್ಲದೆ ಹೀಗೆ ಮಾಡುವುದರಿದ ಬೆಳ್ಳುಳ್ಳಿಯು ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರತೆಗೆಯುತ್ತದೆ, ಅಲ್ಲದೆ ಬೆಳುಳ್ಳಿಯನ್ನು ಅಗಿದು ತಿನ್ನುವುದರಿಂದ ಹಲ್ಲು ನೋವಿಗೆ ಮುಕ್ತಿ ಸಿಗುತ್ತದೆ ಮತ್ತು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಅಗಿದು ತಿನ್ನುವುದರಿಂದ ಆ ಬೆಳ್ಳುಳ್ಳಿಯ ಅಂಶವು ದೇಹದಲ್ಲಿ ಸೇರಿ ನರಗಳಿಗೆ ಮತ್ತು ದೇಹದ ಬಲಿಷ್ಠ ಸ್ನಾಯುಗಳಿಗೆ ಪುಷ್ಟಿ ಒದಗಿಸುತ್ತದೆ.
ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಮಗೆ ಇರುವ ಮಾನಸಿಕ ತೊಂದರೆಗಳು ದೂರವಾಗುತ್ತವೆ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ ಟೆಂಷನ್ ನಿಂದ ಮುಕ್ತಿ ಪಡೆಯಬಹುದು ಮತ್ತು ತಲೆ ನೋವನ್ನು ಇದು ಶಮನ ಮಾಡುತ್ತದೆ, ಅಂತೆಯೇ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬೆಳ್ಳುಳ್ಳಿಯೂ ನಮ್ಮ ದೇಹದಲ್ಲಿನ ಜೀರ್ಣ ಕ್ರಿಯೆಯ ಮೇಲೆ ಪ್ರಭಾವ ಬೀರಿ ನಮ್ಮ ಜೀರ್ಣ ಕ್ರಿಯೆಯು ಸರಾಗವಾಗಿ ಆಗುವಂತೆ ಸಹಾಯಕವಾಗುತ್ತದೆ ಮತ್ತು ಹಸಿವು ಹೆಚ್ಚಾಗುವಂತೆ ಮಾಡುತ್ತದೆ.