ಯಾವುದೇ ಬಯೋಗ್ರಾಫಿ ಯಲ್ಲಿ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ.ಆದರೆ ನಾವು ಇಲ್ಲಿ ಒಬ್ಬರು ದಂಪತಿಗಳ ಬಗ್ಗೆ ತಿಳಿಯೋಣ.ಈ ದಂಪತಿಗಳಲ್ಲಿ ಒಬ್ಬರ ಆಸ್ತಿ 17,00ಕೋಟಿ ರೂಪಾಯಿಗಳು. ಇನ್ನೊಬ್ಬರ ಆಸ್ತಿ 12070 ಕೋಟಿ ರೂಪಾಯಿಗಳು.ಆದರೂ ಸಹ ಯಾರೂ ಇವರನ್ನು ನೋಡಿದರೆ ಇಷ್ಟ ಆಸ್ತಿ ಇದೆ ಎಂದು ನಂಬುವುದಿಲ್ಲ.ಅವರ ಮೇಲೆ ಯಾವುದೇ ರೀತಿಯ ಆಭರಣ ಇರುವುದಿಲ್ಲ.ಅವರು ಮತ್ತ್ಯಾರು ಅಲ್ಲ ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ.
ಎಲ್ ಆರ್ ನಾರಾಯಣಮೂರ್ತಿ ಅವರು 20 ಆಗಸ್ಟ್ 1946 ರಲ್ಲಿ ಕರ್ನಾಟಕದ ಶಿಡ್ಲಘಟ್ಟ ಗ್ರಾಮದಲ್ಲಿ ಐಐಟಿ ಮುಗಿಸಿ ಡಿಗ್ರಿಯನ್ನು ಮುಗಿಸುತ್ತಾರೆ. ಅಹಮದಾಬಾದಿನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಸಿಗುತ್ತದೆ.ಮೊದಲಿಗೆ ಅವರು ಸಾಫ್ಟ್ರೋನಿಕ್ಸ್ ಎಂಬ ಕಂಪನಿಯನ್ನು ಶುರು ಮಾಡುತ್ತಾರೆ.ಆದರೆ ಈ ಕಂಪನಿ ಮಾರಾಟ ಆಗುತ್ತದೆ.
ಅವರ ಪತ್ನಿಯಾದ ಸುಧಾಮೂರ್ತಿ ಅವರು ಸಹ ಡಾಕ್ಟರ್ ಕುಟುಂಬವೊಂದರಲ್ಲಿ ಜನಿಸುತ್ತಾರೆ.ಅವರು ಚಿಕ್ಕ ವಯಸ್ಸಿನಿಂದಲೂ ತುಂಬಾ ಧೈರ್ಯಶಾಲಿ.ಹುಬ್ಬಳ್ಳಿಯ ವಿವಿವಿ ಕಾಲೇಜಿನಲ್ಲಿ ಅವರು ಇಂಜಿನಿಯರಿಂಗ್ ಮಾಡುತ್ತಾರೆ.ಆದರೆ 100ಜನ ಹುಡುಗರು ಮತ್ತು ಇವರೊಬ್ಬರೇ ಹುಡುಗಿ ಆಗಿರುತ್ತಾರೆ.ಯುವತಿಯರ ಶೌಚಾಲಯ ಕೂಡ ಇರುವುದಿಲ್ಲ. ಮೊದಲು ಹುಡುಗರು ತುಂಬಾ ರೇಗಿಸುತ್ತಿರುತ್ತಾರೆ.ಆದರೆ ಅವರಿಗೆ ಗೋಲ್ಡ್ ಮೆಡಲ್ ಬಂದಮೇಲೆ ಎಲ್ಲರೂ ಗೌರವಿಸುತ್ತಾರೆ.ನಂತರ ಇಂಜಿನಿಯರಿಂಗ್ ಮುಗಿಸಿ ಒಂದು ಪ್ರಕಟಣೆಯನ್ನು ನೋಡುತ್ತಾರೆ.ಆ ಪ್ರಕಟಣೆಯು ಟಾಟಾ ಎಂಜಿನಿಯರಿಂಗ್ ಅಂಡ್ ಲಾಕಮೋಟಿವ್ ಕಂಪನಿಯಲ್ಲಿ ಉದ್ಯೋಗದ ಬಗ್ಗೆ ಇರುತ್ತದೆ.ಆದರೆ ಅಲ್ಲಿ ಈ ಕೆಲಸಕ್ಕೆ ಮಹಿಳೆಯರು ಅರ್ಜಿ ಹಾಕುವ ಅವಶ್ಯಕತೆಯಿಲ್ಲ ಎಂದು ಇರುತ್ತದೆ.
ಇದರಿಂದ ಬೇಸರಗೊಂಡು ಸುಧಾಮೂರ್ತಿಯವರು ಜೆಆರ್ ಡಿ ಟಾಟಾ ರವರಿಗೆ ಮಹಿಳೆಯರ ಧೋರಣೆಯ ಬಗ್ಗೆ ಒಂದು ಪತ್ರವನ್ನು ಬರೆಯುತ್ತಾರೆ.ನಂತರ ಇವರಿಬ್ಬರ ಸಂವಾದಗಳ ನಡುವೆ ಟಾಟಾರವರು ಇವರ ಧೈರ್ಯ-ಸಾಹಸಗಳನ್ನು ಮೆಚ್ಚಿ ಅವರಿಗೆ ಒಂದು ಕೆಲಸವನ್ನು ಈ ಕಂಪನಿಯಲ್ಲಿ ನೀಡುತ್ತಾರೆ.
ಅಲ್ಲಿಗೆ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ವಿವಾಹವಾಗುತ್ತದೆ.ನಂತರ ನಾರಾಯಣಮೂರ್ತಿಯವರಿಗೆ ಒಂದು ಕಂಪನಿ ಶುರುಮಾಡಬೇಕು ಆಲೋಚನೆ ಬರುತ್ತದೆ.ಆಗ ಸುಧಾಮೂರ್ತಿಯವರು ಹತ್ತು ಸಾವಿರ ರೂಪಾಯಿಗಳನ್ನು ಬಂಡವಾಳವಾಗಿ ನೀಡುತ್ತಾರೆ.ಇವರ ಜೊತೆ 6 ಪರಸ್ಪರ ಸ್ನೇಹಿತರು ಸೇರಿ 1981ರಲ್ಲಿ ಇನ್ಪೋಸಿಸ್ ಕಂಪನಿಯನ್ನು ಶುರುಮಾಡುತ್ತಾರೆ.ಆಗಿನಕಾಲದಲ್ಲಿ ಕಂಪ್ಯೂಟರ್ ಇದ್ದವರು ಶ್ರೀಮಂತರು.ಒಂದು ಕಂಪ್ಯೂಟರ್ ಖರೀದಿಸಲು 25 ಸಾವಿರ ಬಾರಿ ಓಡಾಡುತ್ತಿದ್ದರಂತೆ.
ಟೆಲಿಫೋನ್ ವ್ಯವಸ್ಥೆ ಮಾಡಲು ಎರಡು ವರ್ಷ ಕಷ್ಟಪಟ್ಟಿದ್ದರಂತೆ.ಆಗಿನಕಾಲದಲ್ಲಿ ಲಂಚ ಕೊಟ್ಟರೆ ಬೇಗನೇ ಕೆಲಸವಾಗುತ್ತಿತ್ತು.ಆದರೆ ಅವರು ಲಂಚದ ಸುದ್ದಿಗೆ ಹೋಗಿರಲಿಲ್ಲ.ತಮ್ಮ ಮನೆಯ ಚಿಕ್ಕ ರೂಮಿನಲ್ಲಿ ಶುರುಮಾಡುತ್ತಾರೆ.ಎಷ್ಟೇ ಕಷ್ಟ ಆದರೂ ಮರೆತು ಮುಂದುವರಿಸಿಕೊಂಡು ಹೋಗಿದ್ದರಿಂದ 1991ರಲ್ಲಿ ಇನ್ಫೋಸಿಸ್ ಆದಾಯ 100 ಮಿಲಿಯನ್ ಡಾಲರ್ ಗಳು.ಅಷ್ಟೇ ಅಲ್ಲದೆ ಅಮೆರಿಕದ ಶೇರ್ ಮಾರ್ಕೆಟ್ ನಲ್ಲಿ ಸೇರಿದ ಮೊದಲ ಭಾರತೀಯ ಕಂಪನಿ ಇನ್ಫೋಸಿಸ್.ಈಗ ಈ ಕಂಪನಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿದೆ. ಅದರಲ್ಲಿ 30 ಪರ್ಸೆಂಟ್ ಮಹಿಳೆಯರು.1996ರಲ್ಲಿ ಇನ್ಫೋಸಿಸ್ ಎಂಬ ಫೌಂಡೇಶನ್ ಶುರು ಮಾಡಿ ಕಂಪನಿಗೆ ಕಂಡ ಲಾಭದಲ್ಲಿ ಸ್ವಲ್ಪ ಹಣವನ್ನು ಸಮಾಜಸೇವೆಗೆ ಮೀಸಲಿಡಲಾಗಿದೆ.ಈ ಸಂಸ್ಥೆಗೆ ಸುಧಾಮೂರ್ತಿಯವರು ಅಧ್ಯಕ್ಷರು.
ನಮ್ಮ ಭಾರತದಲ್ಲಿ ಜಾಸ್ತಿ ಹಣ ಇರುವ ಮಹಿಳೆಯರಲ್ಲಿ ಇವರು ಒಬ್ಬರು.ಒಂದು ಸಾರಿ ಲಂಡನ್ನಲ್ಲಿ ಫ್ಲೈಟ್ ಹತ್ತಲು ಹೋದಾಗ ಅವರ ಮುಂದಿರುವ ಮಹಿಳೆಯರು ಅವಮಾನ ಮಾಡುತ್ತಾರೆ.ಆದರೆ ನಂತರ ಎಲ್ಲರೂ ಹೋದ ಸಭೆಗೆ ಇವರು ಅತಿಥಿಗಳಾಗಿರುತ್ತಾರೆ.ದಿನಗಳಲ್ಲಿ ಅಲ್ಲ ಅಂತ ಹೇಳ್ತಾರೆ ಆದ್ದರಿಂದ ಅವರು ನಿಮಗಾಗಿ ನೀವು ಬದುಕಿ ಬೇರೆಯವರಿಗಾಗಿ ಅಲ್ಲ ಅಂತ ಹೇಳುತ್ತಾರೆ ಒಂದು ಸಾರಿ ಸುಧಾಮೂರ್ತಿಯವರು ಅಲ್ಲಿ ಹೋಗುವಾಗ ನಾಲ್ಕು ವರ್ಷದ ಒಂದು ಹುಡುಗಿ ಜೊತೆ ಒಂದು ಸಾರಿ ಸುಧಾಮೂರ್ತಿಯವರು ಟ್ರೈನ್ನಲ್ಲಿ ಹೋಗುವಾಗ 14ವರ್ಷದ ಒಂದು ಹುಡುಗಿ ಸೀಟಿನ ಕೆಳಗೆ ಅವಿತುಕೊಂಡಿರುತ್ತಾಳೆ.ನಂತರ ಟಿಸಿ ಬಂದು ಟಿಕೆಟಿನ ಬಗ್ಗೆ ವಿಚಾರಿಸಿದಾಗ ಅವಳ ಬಳಿ ಟಿಕೆಟ್ ಇರುವುದಿಲ್ಲ.ಆಗ ಸುಧಾಮೂರ್ತಿಯವರು ಟಿಕೆಟ್ ಅನ್ನು ತೆಗೆಸಿ ತಮ್ಮ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ.ನಂತರ ಅವಳನ್ನು ಕರೆದುಕೊಂಡು ಹೋಗಿ ತಮ್ಮ ಸಂಸ್ಥೆ ಹಣದಲ್ಲಿ ಅವಳನ್ನು ಓದಿಸುತ್ತಾರೆ.
ವೀರಯೋಧರಿಗೆ ತಲಾ 10 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.ಆರ್ಮಿಯಲ್ಲಿ ಸಾವನ್ನಪ್ಪಿರುವ ಸೈನಿಕರಿಗೆ ವರ್ಷಕ್ಕೆ ಹತ್ತು ಕೋಟಿಯನ್ನು ಖರ್ಚು ಮಾಡುತ್ತಾರೆ.ಕರ್ನಾಟಕದ ಪ್ರತಿ ಶಾಲೆಯಲ್ಲಿ ಲೈಬ್ರರಿ ಮತ್ತು ಕಂಪ್ಯೂಟರ್ ಇರುವಂತೆ ಶ್ರಮಿಸುತ್ತಿದ್ದಾರೆ.ಕರ್ನಾಟಕದಲ್ಲಿ ಪ್ರವಾಹ ಬಂದಾಗ ಇವರು ಹತ್ತು ಕೋಟಿ ರೂಪಾಯಿಗಳನ್ನು ನೀಡಿದ್ದರು.ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 2300 ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ.ಚಿಕ್ಕ ಮಕ್ಕಳಿಗೆ ಊಟ ಹಾಕುವ ಅಕ್ಷಯಪಾತ್ರೆ ಎಂಬ ಸಂಸ್ಥೆಗೆ ಇವರು ಪ್ರತಿವರ್ಷ ಧಾರಾಳವಾಗಿ ಹಣವನ್ನು ನೀಡುತ್ತಾರೆ.ಕ್ಯಾನ್ಸರ್ ರೋಗಿಗಳಿಗೆ ಬೆಂಗಳೂರಿನಲ್ಲಿ ಕ್ಯಾನ್ಸರ್ ಹಾಸ್ಪಿಟಲ್ ತೆಗೆಯಲು 40 ಕೋಟಿ ಹಣವನ್ನು ಹಾಕಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇನ್ಫೋಸಿಸ್ ಸ್ಕಾಲರ್ಶಿಪ್ ಗಳನ್ನು ನೀಡುತ್ತಿದೆ. ಸುಧಾಮೂರ್ತಿ ಅವರಿಗೆ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.ನಾರಾಯಣಮೂರ್ತಿಯವರಿಗೆ 2000ದಲ್ಲಿ ಪದ್ಮಶ್ರೀ ಮತ್ತು 2008ರಲ್ಲಿ ಪದ್ಮವಿಭೂಷಣ ಸಿಕ್ಕಿದೆ. ಇಷ್ಟು ಶ್ರೀಮಂತರಾಗಿದ್ದರೂ ಇವರಿಬ್ಬರೂ ತುಂಬಾ ಸರಳವಾಗಿರುತ್ತಾರೆ. ಇವರ ಮನೆಯ ಲೈಬ್ರರಿಯಲ್ಲಿ 25,000ಕ್ಕೂ ಅಧಿಕ ಪುಸ್ತಕಗಳಿವೆ.ಅಷ್ಟೇ ಅಲ್ಲದೆ ನಮ್ಮ ದೇಶದ ಪ್ರಮುಖ ಬರಹಗಾರರಲ್ಲಿ ಇವರು ಒಬ್ಬರು.ಆದ್ದರಿಂದ ಇವರಿಬ್ಬರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.