ಸರ್ಪ ಸುತ್ತು ಅನ್ನೋ ರೋಗದ ಬಗ್ಗೆ ಎಲ್ಲರೂ ಕೇಳಿರ್ತೀವಿ. ಸರ್ಪಗಳ ದೋಷದಿಂದ ಬರತ್ತೇ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ಇದರ ಹೆಸರೇ ಹೇಳುವಂತೆ, ಸರ್ಪ ಸುತ್ತು ಇದು ಯಾವ ಜಾಗಕ್ಕೆ ಆಗತ್ತೋ ಅಲ್ಲಿಂದ ಒಂದು ಸುತ್ತು ರೌಂಡ್ ಆಗಿ ಇನ್ನೊಂದು ತುದಿಯನ್ನ ತಲುಪತ್ತೆ. ಒಂದು ತುದಿಯಿಂದ ಇನ್ನೊಂದು ತುದಿ ತಲುಪಿ ಆ ತುದಿ ಕೂಡುವಷ್ಟರಲ್ಲಿ ಸರಿಯಾದ ಪತ್ಯ ಮಾಡಿ ಔಷಧಿ ಮಾಡಿಕೊಳ್ಳಬೇಕು. ಇಲ್ಲವಾದರೆ ಇದು ಅತಿಯಾದರೆ ಪ್ರಾಣಕ್ಕೆ ಅಪಾಯ ಬಂದರೂ ಬರಬಹುದು. ಹಾಗಾದ್ರೆ ಈ ಸರ್ಪ ಸುತ್ತಿಗೆ ನಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಆಯುರ್ವೇದ ಔಷಧಿಗಳು ಏನು ಇದೆ ಅನ್ನೋದನ್ನ ನೋಡೋಣ.
ಬಹಳಷ್ಟು ಜನ ನಮ್ಮ ಸುತ್ತ ಮುತ್ತಲು ಸರ್ಪ ಸುತ್ತನ್ನು ಸರ್ಪಗಳ ದೋಷ ಅಂತ ಹೇಳ್ತಾರೆ. ಆದರೆ ಇದಕ್ಕೆ ಸೂಕ್ತವಾದ ಆಯುರ್ವೇದ ಔಷಧಿ ಮನೆಮದ್ದುಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ವೈರಸ್, ಸೋಂಕು ಹೆಚ್ಚಾಗಿ ದೇಹದಲ್ಲಿ ನೋವು ಹಾಗೂ ಉರಿಯುಳ್ಳ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ ಮತ್ತು ದೇಹದ ಇತರೆ ಭಾಗಗಳಿಗೂ ಸಹ ಇವು ಹರಡುತ್ತವೆ. ಇದನ್ನ ನಾವು ಸರ್ಪ ಸುತ್ತು ಅಂತ ಭಾವಿಸುತ್ತೇವೆ. ಇದಕ್ಕೆ ಮನೆಯಲ್ಲಿಯೇ ಮಾಡುವ ಆಯುರ್ವೇದದ ಮನೆ ಮದ್ದಾದ ಕಹಿ ಬೇವಿನ ಸೊಪ್ಪನ್ನು ಮೈಗೆಲ್ಲಾ ಹಚ್ಚಬೇಕು. ಈ ರೀತಿ ಮಾಡುವುದರಿಂದ ಸರ್ಪ ಸುತ್ತು ಕಡಿಮೆ ಆಗುತ್ತದೆ.
ಗರಿಕೆ ಹುಲ್ಲನ್ನು ಬೇರು ಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು ಪೇಸ್ಟ್ ಮಾಡಿ ಸರ್ಪ ಸುತ್ತು ಆದ ಜಾಗಕ್ಕೆಲ್ಲಾ ಹಚ್ಚುವುದರಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಹಾಗೆ ಗೋಟು ಅಡಿಕೆಯನ್ನ ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶರೀರದ ತುಂಬಾ, ದಿನಕ್ಕೆ ನಾಲ್ಕು ಬಾರಿ ಲೇಪಿಸುವುದರಿಂದ ಉತ್ತಮ ಪರಿಹಾರವನ್ನು ಪಡೆಯಬಹುದು.