ನಾವು ದಿನನಿತ್ಯ ಮೊಬೈಲ್ ಬಳಸುತ್ತೇವೆ. ಆದರೆ ಮೊಬೈಲ್ನಲ್ಲಿರುವ ಎಷ್ಟೋ ಮಾಹಿತಿ ನಮಗೆ ತಿಳಿದಿರುವುದಿಲ್ಲ. ಎಷ್ಟೋ ಆಪ್ಸ್ ಗಳು ನಮಗೆ ತಿಳಿಯದೇ ಮೊಬೈಲ್ ನಲ್ಲಿ ಸ್ಟೋರೆಜ್ ತುಂಬಿಕೊಂಡಿರುತ್ತವೆ. ಆಪ್ಸ್ ಬಗ್ಗೆ ಹೇಳುವುದಾದರೆ ವಾಟ್ಸಾಪ್, ಫೇಸ್ಬುಕ್, ಶೇರ್ ಚಾಟ್ ಹೀಗೆ ಹಲವಾರು ಇದೆ. ಹಾಗೆಯೇ ನಾವು ವಾಟ್ಸಾಪ್ ನ 4 ಟಿಪ್ಸ್ ಬಗ್ಗೆ ತಿಳಿಯೋಣ.

ಟಿಪ್ಸ್ 1: ನಾವು ನೀವೆಲ್ಲ ವಾಟ್ಸಾಪ್ ಸ್ಟೇಟಸ್ ಅಪಡೆಟ್ ಮಾಡುತ್ತಲೇ ಇರುತ್ತೇವೆ. ಹಾಗೇ ಸ್ನೇಹಿತರ ಸ್ಟೇಟಸ್ ನೋಡುತ್ತಿರುತ್ತೇವೆ. ಕೆಲವೊಮ್ಮೆ ಸ್ನೇಹಿತರ ಸ್ಟೇಟಸ್ ನೋಡಿದರೂ ನಾವು ನೋಡಿದ್ದು ಕಾಣಬಾರದು ಎಂದು ಅಂದುಕೊಳ್ಳುತ್ತೇವೆ. ಆಗ ವಾಟ್ಸಪ್ ಓಪನ್ ಮಾಡಿ ಮೇಲುಗಡೆ ಕಾಣುವ 3ಡಾಟ್ಸ್ ಗಳನ್ನು ಒತ್ತಿ ಸೆಟ್ಟಿಂಗ್ಸ್ ಸೆಲೆಕ್ಟ್ ಮಾಡಿದಾಗ ಒಂದಷ್ಟು ಆಯ್ಕೆಗಳು ಬರುತ್ತದೆ. ಅಲ್ಲಿ ಪ್ರೈವಸಿ ಯನ್ನು ಒತ್ತಿ ನಂತರ ರೀಡ್ ರೇಷಿಪ್ಟ್ಸ್ ಅನ್ನು ಡಿಸೇಬಲ್ ಮಾಡಿ.

ಟಿಪ್ಸ್ 2: ನಮಗೆ ಸ್ನೇಹಿತರ ಜೊತೆ ಚಾಟ್ ಮಾಡುವಾಗ ಅನುಮಾನ ಇರುತ್ತದೆ. ಅವರು ನಮ್ಮ ಹೆಸರನ್ನು ಸೇವ್ ಮಾಡಿದ್ದಾರೋ ಇಲ್ಲ ಎಂದು. ಆಗ ಅವರ ಸ್ಟೇಟಸ್ ನಿಮಗೆ ಕಂಡರೆ ಅವರು ನಿಮ್ಮ ನಂಬರ್ ಸೇವ್ ಮಾಡಿದ್ದಾರೆ ಎಂದು ಅರ್ಥ.

ಟಿಪ್ಸ್ 3:- ವಾಟ್ಸಾಪ್ ಸ್ಟೋರೇಜ್ ಬಗ್ಗೆ ಹೇಳುವುದಾದರೆ ನಾವು ಚಾಟ್ ಮಾಡುವ ಪ್ರತಿಯೊಂದು ಶಬ್ದ ಮೊಬೈಲ್ನಲ್ಲಿ ಸ್ಪೇಸ್ ಹಿಡಿಯುತ್ತದೆ. ಮೊದಲು ಸೆಟ್ಟಿಂಗ್ಸ್ ಓಪನ್ ಮಾಡಿ ನಂತರ ಡಾಟಾ ಆಂಡ್ ಸ್ಟೋರೇಜ್ ನ್ನು ಒತ್ತಿ ನಂತರ ಸ್ಟೋರೇಜ್ ಯುಸೇಜ್ ನ್ನು ಒತ್ತಿ ಆಗ ಪ್ರತಿಯೊಂದು ನಂಬರ್ ಚಾಟ್ ನ ಮಾಹಿತಿ ಸಿಗುತ್ತದೆ. ಆಗ ಬೇಡದ ಡಾಟಾವನ್ನು ಅನ್ಚೆಕ್ ಮಾಡಿ ಡಿಲೀಟ್ ಮಾಡಿಕೊಳ್ಳಬಹುದು.

ಟಿಪ್ಸ್ 4: ತುಂಬಾ ಜನರಿಗೆ ತಮ್ಮ ಸ್ಟೇಟಸ್ ಕೆಲವರಿಗೆ ಕಾಣಿಸದೇ ಹಾಕಬೇಕು ಎಂಬ ಉದ್ದೇಶ ಇರುತ್ತದೆ. ಅಂತಹವರು ಸ್ಟೇಟಸ್ಗೆ ಹೋಗಿ ಮೇಲೆ ಕಾಣುವ 3 ಡಾಟ್ಸ್ ಗಳನ್ನು ಒತ್ತಿ ಆಮೇಲೆ ಸ್ಟೇಟಸ್ ಪ್ರೈವಸಿ ಯನ್ನು ಕ್ಲಿಕ್ ಮಾಡಿ ನಂತರ 2ನೇ ಆಯ್ಕೆ ಮೈ ಕಾಂಟೆಕ್ಟ್ಸ್ ಎಕ್ಸೆಪ್ಟ್ ನ್ನು ಕ್ಲಿಕ್ ಮಾಡಿ ಇಲ್ಲಿ ಯಾರಿಗೆ ನಿಮ್ಮ ಸ್ಟೇಟಸ್ ಕಾಣಬಾರದೋ ಅವರ ಹೆಸರನ್ನು ಸೆಲೆಕ್ಟ್ ಮಾಡಿ ನಂತರ ರೈಟ್ ಸಿಮ್ಬೋಲ್ ಒತ್ತಿ.

Leave a Reply

Your email address will not be published. Required fields are marked *