ಮನುಷ್ಯ ತಾನು ಏನನ್ನಾದರೂ ಸಾಧಿಸಬೇಕು ಅನ್ನೋ ಹಂಬಲ ತನ್ನಲ್ಲಿ ಇರುತ್ತದೆಯೋ, ಅದನ್ನ ಸಾಧಿಸೆ ಸಾಧಿಸುತ್ತಾನೆ. ಆದ್ರೆ ಅದಕ್ಕೆ ತನ್ನದೆಯಾದ ಪರಿಶ್ರಮ ಇರಬೇಕು ಅಷ್ಟೇ. ಇಲ್ಲೊಬ್ಬ ಮಹಿಳೆ ತಾನು ಅಂಗವೈಕಲ್ಯೆ ಆಗಿದ್ದರು ಸಹ ಎದೆಗುಂದದೆ ತಾನು ಸಾಧಿಸಬೇಕು ಅನ್ನೋ ಹಠವನ್ನು ತನ್ನೆಯೇ ಬೆಳೆಸಿಕೊಂಡು ಇಂದು ಸಾಧನೆಯಾ ಹಾದಿಯನ್ನು ಮೆಟ್ಟಿದ್ದಾಳೆ. ಅಷ್ಟಕ್ಕೂ ಇವರು ಯಾರು ಇವರ ಸಾಧನೆಯ ಹಾದಿ ಹೇಗಿತ್ತು ಅನ್ನೋದನ್ನ ನೋಡುವುದಾದರೆ ಬೇರೆಯವರಿಗೂ ಇವರ ಜೀವನ ಕಥೆ ಸ್ಪೂರ್ತಿಯಾಗುತ್ತದೆ.
ಹೌದು ಹೆಸರು ಉಮ್ಮುಲ್ ಖೇರ್ ಎಂಬುದಾಗಿ ಮೂಲತಃ ರಾಜಸ್ತಾನದವರು ಇವರು ಚಿಕ್ಕವರಿದ್ದಾಗಲೇ ತಮ್ಮ ಕುಟುಂಬ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿದ್ದರು, ತಂದೆ ವೃತ್ತಿಯಲ್ಲಿ ಬಟ್ಟೆ ವ್ಯಾಪಾರೀ ಇವರು ಕುಟುಂಬದ ಜೊತೆ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಸಮೀಪದ ಕೊಳಗೇರಿಯಲ್ಲಿ ವಾಸಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ದುರ್ಬಲ ಮೂಳೆಗೆ ಸಂಬಂಧಿಸಿದ ಅಸ್ವಸ್ಥತೆಯನ್ನು ಹೊಂದಿದ್ದರು ಈ ರೋಗದಿಂದ ಬಳಲುತ್ತಿದ್ದ ಈ ಹೆಣ್ಣು ಮಗಳು ಎಂಟು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೆ ಇವರ ಕುಟುಂಬದವರು ಈಕೆಯನ್ನು ಶಿಕ್ಷಣ ಕೊಡಿಸಲು ನಿರಾಕರಿಸಿದ್ದರು ಕಾರಣ ಅಂಗವೈಕಲ್ಯತೆ ಹಾಗೂ ಬಡತನ ಇರುವ ಕಾರಣಕ್ಕೆ.
ಉಮ್ಮುಲ್ ಖೇರ್ ತನ್ನ ಶಿಕ್ಷಣವನ್ನು ೫ ರಿಂದ ೮ ನೇ ತರಗತಿಯವರೆಗೆ ಅಮರ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮೂಲಕ ಪಡೆಯುತ್ತಾರೆ ನಂತರ ಸ್ಕಾಲರ್ಶಿಪ್ ಮೂಲಕ ತನ್ನ ಶಿಕ್ಷಣವನ್ನು ಮುಂದುವರೆಸುತ್ತಾರೆ ಅಷ್ಟೇ ಅಲ್ದೆ ಮನೆ ಬಿಟ್ಟು ಸಣ್ಣ ಜೋಪಡಿಯಲ್ಲಿ ಒಬ್ಬಂಟಿಯಾಗಿ ವಾಸಮಾಡುತ್ತ ನೆರೆ ಹೊರೆ ಮಕ್ಕಳಿಗೆ ಪಾಠ ಮಾಡುತ್ತ ತಮ್ಮ ಜೀವನ ಹಾದಿಯನ್ನು ಮುಂದುವರೆಸುತ್ತಾರೆ.
ಹೀಗೆ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತ ೨೦೧೬ ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಸಿವಿಎಲ್ ಸರ್ವೀಸಸ್ ಪರೀಕ್ಷೆಯನ್ನು ಪಾಸು ಮಾಡಿ ೪೨೦ ನೇ ರ್ಯಾನ್ಕ್ ಪಡೆಯುತ್ತಾರೆ. ನಿಜಕ್ಕೂ ಇವರ ಪಟ್ಟ ಕಷ್ಟ ಹಾಗು ಇವರ ಈ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ ಅದೇನೇ ಇರಲಿ ಜೀವನದಲ್ಲಿ ಸಾಧಿಸುವ ಛಲ ಹಠ ಇದ್ರೆ ಖಂಡಿತ ಸಾಧನೆಯ ಹಾದಿ ಸುಲಭವಾಗಿ ಸ್ವೀಕರಿಸಬಹುದು ಅನ್ನೋದನ್ನ ತಿಳಿಯಬಹುದಾಗಿದೆ. ಈ ಹೆಣ್ಣು ಮಗಳ ಸಾಧನೆಯ ಹಾದಿ ನಿಮಗೂ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇವರು ಇತರರಿಗೂ ಮಾದರಿಯಾಗಿದ್ದಾರೆ.