ಆಹಾರದಲ್ಲಿನ ವ್ಯತ್ಯಾಸಗಳಿಂದ ದೇಹದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತದೆ. ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆ ಉಬ್ಬುವುದು, ಗ್ಯಾಸ್ ಸ್ಟ್ರೀಕ್, ಮಲಬದ್ಧತೆ, ಕಿಡ್ನಿಯಲ್ಲಿ ಕಲ್ಲುಗಳಾಗುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಮುಖವಾಗಿ ಕಿಡ್ನಿಯಲ್ಲಿ ಕಲ್ಲುಗಳಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಮನೆಯಲ್ಲೇ ಮದ್ದು ತಯಾರಿಸಿ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಅಂತಾ ತಿಳಿದುಕೊಳ್ಳಣ.
ಕಿಡ್ನಿಯಲ್ಲಿನ ಸಮಸ್ಯೆಯು ಇತ್ತಿಚೇಗೆ ಉಲ್ಬಣವಾಗುತ್ತಿದೆ. ಇದರ ಸಮಸ್ಯೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಮತ್ತೆ ಸಮಸ್ಯೆ ಮರುಕಳಿಸುತ್ತದೆ ಹಾಗಾಗಿ ಮನೆಯ ಪದಾರ್ಥಗಳೇ ಇದಕ್ಕೆ ರಾಮ ಬಾಣವಾಗಿ ಕೆಲಸ ಮಾಡುತ್ತವೆ.ಇದಕ್ಕೆ ಕಶಾಯವೇ ಸೂಕ್ತ.
ಕಷಾಯಕ್ಕೆ ಬೇಕಾದ ಪದಾರ್ಥಗಳು
3 ಗ್ರಾಂ ಶರಪುಂಕ ಬೇರಿನ ಪೌಡರ್, ಸೈಂಧವ ಲವಣ, ಹುರುಳಿಕಾಳು,
ಮಾಡುವ ವಿಧಾನ: ಒಂದು ಪಾತ್ರೆಗೆ 600 ಎಂ.ಎಲ್ ನೀರು, 3 ಗ್ರಾಂ ಶರಪುಂಕ ಬೇರಿನ ಪುಡಿ, ಸೈಂಧವ ಲವಣ, ಹುರುಳಿಕಾಳಿನ ಪುಡಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಸೂಸಿ ಕಶಾಯದಂತೆ ಮಾಡಿಕೊಳ್ಳಿ.
ಈ ಕಶಾಯವನ್ನು ಪ್ರತಿ ದಿನ ಬೆಳಗ್ಗೆ ಮಧ್ಯಾಹ್ನ, ರಾತ್ರಿಯಂತೆ 100 ಎಂ ಎಲ್ ಕುಡಿಯಿರಿ. ಈ ರೀತಿ ಈ ಕಷಾಯವನ್ನು ಮಾಡಿ ಕುಡಿಯುವುದರಿಂದ ಕಿಡ್ನಿಯಲ್ಲಿನ ಕಲ್ಲು ಕರಗಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.