ಒಂದುಷ್ಟು ಆಹಾರ ಪದ್ದತಿಗಳು ಜನ ಪ್ರಿಯ ಗಳಿಸಿವೆ ಅವುಗಳ ಸಾಲಿನಲ್ಲಿ ಈ ಅಡುಗೆ ಕೂಡ ರುಚಿಗೆ ಅಷ್ಟೇ ಅಲ್ಲದೆ ಮಲೆನಾಡಿ ಜನರ ಪ್ರಸಿದ್ದಿ ಅಡುಗೆ ಆಗಿದೆ, ಇದರಲ್ಲಿ ಹಲವು ದೈಹಿಕ ಸಮಸ್ಯೆಗಳನ್ನು ನಿಯಂತ್ರಿಸುವ ಗುಣಗಳನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಈ ಅಡುಗೆ ಯಾವುದು ಹಾಗೂ ಇದರಿಂದ ಎಷ್ಟೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಒಮ್ಮೆ ತಿಳಿದುಕೊಳ್ಳೋಣ, ನಿಜಕ್ಕೂ ನಿಮಗೆ ಈ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ತಿಳಿಸಲು ಮರೆಯಬೇಡಿ.
ಇದನ್ನು ನಾವುಗಳು ಮನೆಮದ್ದು ಅನ್ನೋದರಲ್ಲಿ ತಪ್ಪಿಲ್ಲ ಯಾಕೆಂದರೆ ನಾವುಗಳು ಸೇವನೆ ಮಾಡುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ ಆದ್ದರಿಂದ ಈ ಅಡುಗೆ ಕೂಡ ಮನೆಮದ್ದಾಗಿ ಕೆಲಸ ಮಾಡುತ್ತದೆ, ಶೀತ ಕೆಮ್ಮು ನೆಗಡಿ ಕಫ ನಿವಾರಣೆಯ ಜೊತೆಗೆ ಮಲಬದ್ಧತೆ ಅಜೀರ್ಣತೆ ಇವುಗಳಿಂದ ತಕ್ಷಣವೇ ರಿಲೀಫ್ ನೀಡುವ ಆರೋಗ್ಯಕಾರಿ ಆಹಾರ ಇದು. ಇದನ್ನು ಹೇಗೆ ತಯಾರಿಸಬೇಕು ಇದಕ್ಕೆ ಬೇಕಾಗುವ ಸಾಮಗ್ರಿಗಳು ಯಾವುವು ಅನ್ನೋದನ್ನ ತಿಳಿಯೋಣ
ಮೊದಲನೆಯದಾಗಿ ಈ ರೆಸಪಿಗೆ ಅಂದರೆ ಈ ಅಡುಗೆಗೆ ಮಲೆನಾಡಿನಲ್ಲಿ ಪುನರ್ಪುಳಿ ಅಥವಾ ಕೋಕಂ ಸಿರಪ್ ಎಂಬುದಾಗಿ ಕರೆಯಲಾಗುತ್ತದೆ, ಇದಕ್ಕೆ ಬೇಕಾಗುವ ಸಾಮಗ್ರಿಗಳು ನಾಲ್ಕು ಒಣ ಪುನರ್ಪುಳಿ ಅಥವಾ ಅರ್ಧ ಕಪ್ ಕೋಕಂ ಸಿರಪ್ ಎರಡು ಚಮಚ ಕರಿಮೆಣಸಿನ ಕಾಳಿನ ಪುಡಿ ಇದು ಶೀತಕ್ಕೆ ಒಳ್ಳೆಯದು ಒಂದು ಚಮಚ ತುಪ್ಪ, ಅರ್ಧ ಚಮಚ ಬೆಲ್ಲ ಅರ್ಧ ಚಮಚ ಜೀರಿಗೆ, ಒಂದು ಹಸಿಮೆಣಸು 10 ಕರಿಬೇವು, 2 ಚಮಚ ಕೊತ್ತಂಬರಿ ಸೊಪ್ಪು ನೀರು ಹಾಗೂ ರುಚಿಗೆ ಉಪ್ಪು.
ಈ ಕೋಕಂ ಸಿರಪ್ ತಯಾರಿಸುವ ವಿಧಾನ ಹೇಗೆ ಅನ್ನೋದನ್ನ ತಿಳಿಯುವುದಾದರೆ ಮೊದಲು ಪುನರ್ಪುಳಿಯನ್ನು ಅರ್ಧ ಗಂಟೆಗಳ ಕಾಲ ಒಂದು ಕಪ್ ಬಿಸಿನೀರಿನಲ್ಲಿ ನೆನಸಿಡಬೇಕು, ನಂತರ ಅದು ಮೆತ್ತಗಾದ ಬಳಿಕ ಚೆನ್ನಾಗಿ ಹಿಂಡಿ ರಸ ತೆಗೆಯಿರಿ. ಇದಾದ ಮೇಲೆ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ ಅದು ಸಿಡಿಯುತ್ತಿದ್ದಂತೆಯೇ ಪುನರ್ಪುಳಿ ರಸವನ್ನು ಬಾಣಲೆಗೆ ಸುರಿದುಕೊಳ್ಳಿ ಇಷ್ಟು ಆದ ಮೇಲೆ ಇದಕ್ಕೆ ಒಂದು ಲೋಟ ನೀರು ಉಪ್ಪು ಹಸಿಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ.
ಎಷ್ಟೆಲ್ಲ ಮಾಡಿದ ಮೇಲೆ ಚನ್ನಾಗಿ ಮಿಕ್ಸ್ ಮಾಡಿ ಹತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ ಅರ್ಧ ಚಮಚ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಪೆಪ್ಪರ್ ಪೌಡರ್ ಹಾಕಿ ಗೊಟಾಯಿಸಿ ಇನ್ನೊಂದು ರೌಂಡ್ ಕುದಿಸಿ ಸ್ವಲ್ಪ ಹೊತ್ತು ಬಿಟ್ಟು ಒಲೆಯಿಂದ ಕೆಳಗೆ ಇಳಿಸಿ ಇದನ್ನು ಕಪ್ ನಲ್ಲಿ ಹಾಕಿಕೊಂಡು ಬಿಸಿ ಇದ್ದಾಗಲೇ ಸೇವಿಸಬಹುದು ಅಥವಾ ಅನ್ನದೊಂದಿಗೆ ಕೂಡ ಇದರ ಬಳಕೆ ಮಾಡಿಕೊಂಡು ಸೇವನೆ ಮಾಡಬಹುದು.