ಕೆಲವೊಮ್ಮೆ ಪ್ರಕೃತಿಯ ಮಡಿಲಲ್ಲಿ ನಡೆಯುವಂತ ಘಟನೆಗಳು ವಿಸ್ಮಯಕಾರಿಯಾಗಿ ಕಾಣಿಸುತ್ತದೆ, ಇನ್ನು ಕೆಲವೊಮ್ಮೆ ವೈದ್ಯಲೋಕಕ್ಕೆ ಸಾಲವಾಗಿ ಕೆಲವೊ ಸಂಗತಿ ನಡೆದಿರುವಂತ ಬಹಳಷ್ಟು ಉದಾಹರಣೆಗಳಿವೆ. ನೇರವಾಗಿ ವಿಷ್ಯಕ್ಕೆ ಬರೋಣ ಒಬ್ಬ ವ್ಯಕ್ತಿ ದಿನಕ್ಕೆ ಕಡಿಮೆ ಅಂದರು ೬ ರಿಂದ ೭ ಗಂಟೆಯವರೆಗೆ ನಿದ್ರೆಯನ್ನು ಮಾಡಿದರೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ಅಷ್ಟೇ ಅಲ್ಲದೆ ಅವನು ಬದಕಲು ನಿದ್ರೆ ಕೂಡ ಹೆಚ್ಚು ಅಗತ್ಯವಿದೆ ಆದ್ರೆ ಇಲ್ಲೊಬ್ಬ ವ್ಯಕ್ತಿ ಸುಮಾರು 45 ವರ್ಷಗಳಿಂದ ಒಂದು ಬಾರಿಯೂ ನಿದ್ರೆ ಮಾಡದೇ ವಿಜ್ಞಾನ ಲೋಕಕ್ಕೆ ಸವಾಲಾಗಿದ್ದಾನೆ ಅಂದರೆ ನಿಜಕ್ಕೂ ನೀವು ನಂಬಲೇ ಬೇಕು.

ಹೌದು ಅಷ್ಟಕ್ಕೂ ಈ ವ್ಯಕ್ತಿ ಯಾರು ಎಲ್ಲಿ ವಾಸವಾಗಿದ್ದಾನೆ ಇದರ ಬಗ್ಗೆ ವಿಜ್ಞಾನ ಏನ್ ಹೇಳುತ್ತೆ ಅನ್ನೋದನ್ನ ತಿಳಿಯೋಣ ವಿಯೇಟ್ನಾಂ ದೇಶದ ಟ್ರಂಗ್ ಹಾ ಎಂಬ ಹಳ್ಳಿಯ ಥಾಯ್ ಯಿಂಗಾಕ್ ಎಂಬ ವ್ಯಕ್ತಿ ನಿದ್ದೇನೆ ಮಾಡಿಲ್ಲ, ಈ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಿಜಕ್ಕೂ ಅಚ್ಚರಿ ಉಂಟಾಗಿದೆ. ಆದ್ರೆ ಈ ವ್ಯಕ್ತಿ ಆರೋಗ್ಯವಂತನೇ ಆಗಿದ್ದಾನೆ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾನೆ ಸಾಮಾನ್ಯರಂತೆ ಕೂಡ ಇರುವುದು ಇನ್ನೊಂದು ಅಚ್ಚರಿ ಮೂಡಿಸುವಂತ ವಿಚಾರವಾಗಿದೆ. ಈ ವ್ಯಕ್ತಿ ನಿದ್ರೆ ಮಾಡದೇ ಇದ್ರೂ ಕೂಡ ಸಾಮಾನ್ಯ ವ್ಯಕ್ತಿಗಳ ಹಾಗೆ ಆರೋಗ್ಯವಂತನಾಗಿದ್ದಾನೆ.

ಈ ವ್ಯಕ್ತಿ ಹುಟ್ಟಿನಿಂದಲೂ ಹೀಗೆಯೇ? ಅನ್ನೋ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡಬಹದು ಆದ್ರೆ ಈ ವ್ಯಕ್ತಿಗೆ 1973 ರಲ್ಲಿ ಥಾಯ್ ಯಿಂಗಾಕ್ ಗೆ ಒಮ್ಮೆ ಜ್ವರ ಬಂದಿರುತ್ತದೆ ಅಂದಿನಿಂದ ಅವರು ನಿದ್ರೆಯನ್ನೇ ಮಾಡಿಲ್ಲ. ಇನ್ನು ಈ ವ್ಯಕ್ತಿ ವಾಸ ಮಾಡುತ್ತಿರುವುದು ಕೋ ಟ್ರಂಗ್ ಎಂಬ ಬೆಟ್ಟದ ಪಕ್ಕದಲ್ಲಿ ಮತ್ತೊಂದು ವಿಶೇಷತೆ ಏನು ಅಂದ್ರೆ ಈ ವ್ಯಕ್ತಿ ರಾತ್ರಿ ನಿದ್ರೆ ಮಾಡದೇ ಕಳ್ಳ ಕಾಕಾರನನ್ನು ಕಾಯುತ್ತ ಇರುತ್ತಾನೆ ರಾತ್ರಿಯೆಲ್ಲ. ಒಟ್ಟಾರೆಯಾಗಿ ಒಮ್ಮೆಯೂ ನಿದ್ರೆ ಮಾಡದ ಈ ವ್ಯಕತಿ ಸಾಮಾನ್ಯರಂತೆ ಆರೋಗ್ಯವಂತನಾಗಿರುವುದು ಅಚ್ಚರಿ ಮೂಡಿಸುತ್ತದೆ ಕೆಲವೊಮ್ಮೆ ಪ್ರಕೃತಿಯ ಮಡಿಲಲ್ಲಿ ಇಂತಹ ನಂಬಲಿಕೆ ಆಗದೆ ಇರುವಂತ ವಿಸ್ಮಯಗಳು ಕಾಣಿಸಿಕೊಳ್ಳುತ್ತವೆ.

Leave a Reply

Your email address will not be published. Required fields are marked *