ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಲವು ಹಣ್ಣುಗಳ ಪೈಕಿ ಈ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದೆ, ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹತ್ತಾರು ಲಾಭಗಳಿವೆ, ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವಂತ ಗುಣಗಳನ್ನು ಈ ಕಲ್ಲಂಗಡಿ ಹಣ್ಣು ಹೊಂದಿದೆ, ಇದರ ಜ್ಯುಸ್ ಕೂಡ ಅಷ್ಟೇ ಮಹತ್ವವನ್ನು ಹೊಂದಿದೆ. ಹಾಗಾದರೆ ಈ ಹಣ್ಣು ಯಾವೆಲ್ಲ ರೋಗಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ನೋಡುವ ಮೊದಲು ಇದರಲ್ಲಿರುವಂತ ಆರೋಗ್ಯಕಾರಿ ಅಂಶಗಳು ಯಾವುವು ಅನ್ನೋದನ್ನ ತಿಳಿಯೋಣ.
ಕಲ್ಲಂಗಡಿಯಲ್ಲಿ ಇರುವಂತ ಆರೋಗ್ಯಕಾರಿ ಅಂಶಗಳು ಯಾವುವು ಅನ್ನೋದಾದರೆ ವಿಟಮಿನ್ ಬಿ ಕ್ಯಾಲ್ಶಿಯಂ ಮ್ಯಾಗ್ನಿಷಿಯಂ ಜಿಂಕ್ ಸಕ್ಕರೆ ನಾರು ಸಸಾರಜನಕ ಹೀಗೆ ಹತ್ತಾರು ಅಂಶಗಳಿವೆ, ಇದರಲ್ಲಿರುವ ಔಷಧಿ ಗುಣಗಳು ದೇಹಕ್ಕೆ ತಂಪು ನೀಡುವ ಜೊತೆಗೆ ಉಷ್ಣವನ್ನು ಕಳೆಯುವಂತ ಗುಣವಿದೆ ಇನ್ನು ಉರಿಮೂತ್ರ ನಿವಾರಿಸುವ ಗುಣಗಳನ್ನು ಕಲ್ಲಂಗಡಿಯಲ್ಲಿ ಕಾಣಬಹುದು. ಹೌದು ಎರಡರಿಂದ ಮೂರೂ ಚಮಚದಷ್ಟು ಕಲ್ಲಂಗಡಿ ಬೀಜಗಳನ್ನು ಅಕ್ಕಿ ತೊಳೆದ ಎರಡನೇ ನೀರಿನಲ್ಲಿ ಅರೆದು ಸೋಸಿ ಆ ನೀರನ್ನು ದಿನಕ್ಕೆ ಎರಡು ಬಾರಿ ನಾಲ್ಕು ದಿನಗಳ ಕಾಲ ಸೇವನೆ ಮಾಡಿದರೆ ಉರಿಮೂತ್ರ ನಿವಾರಣೆಯಾಗುವುದು.
ಇನ್ನು ಮೂತ್ರನಾಳದಲ್ಲಿರುವಂತ ಕಲ್ಲು ಕರಗಿಸುವ ಗುಣಗಳನ್ನು ಹೊಂದಿದೆ, ಕಲ್ಲಂಗಡಿ ಹಣ್ಣಿನ ರಸಕ್ಕೆ ಜೀರಿಗೆ ಪುಡಿ ಮತ್ತು ಸಕ್ಕರೆ ಬೆರಸಿ ಕುಡಿದರೆ ಮೂತ್ರ ತಡೆ ನಿವಾರಣೆಯಾಗುವುದು, ಜೊತೆಗೆ ಮೂತ್ರದಲ್ಲಿ ಕಲ್ಲು ಕರಗುವುದು, ಇದನ್ನು ಕೆಲವು ತಿಂಗಳುಗಳ ಕಾಲ ಮಾಡಬೇಕಾಗುತ್ತದೆ. ಕಲ್ಲಂಗಡಿ ದೇಹಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ ಹೇಗೆ ಅನ್ನೋದಾದರೆ ಪ್ರತಿದಿನ ಕಲ್ಲಂಗಡಿ ಹಣ್ಣಿ ಬೀಜಗಳನ್ನು ಪುಡಿ ಮಾಡಿಕೊಂಡು ಸಕ್ಕರೆಯೊಂದಿಗೆ ಸೇವಿಸಿದರೆ, ಅದು ದೇಹಕ್ಕೆ ಶಕ್ತಿ ವರ್ಧಕ ಟಾನಿಕ್ ನಂತೆ ಕೆಲಸ ಮಾಡುವುದು.ಅಷ್ಟೇ ಅಲ್ದೆ ಅಧಿಕ ರಕ್ತದೊತ್ತಡ ಕಡಿಮೆ ಗೊಳಿಸುತ್ತದೆ. ಇನ್ನು ಇದರ ಬೀಜದ ಎಣ್ಣೆಯು ಜಂತು ಹುಳು ನಿವಾರಣೆ ಮಾಡುವುದು.
ಹೃದಯಾಘಾತದಿಂದ ಸಂರಕ್ಷಿಸುತ್ತದೆ ಈ ಕಲ್ಲಂಗಡಿ ಹಣ್ಣಿನ ರಸದಲ್ಲಿ ಲ್ಯಾಕೊಪಿನ್ ಎಂಬ ಅಂಶವಿದ್ದು ಇದು ಹೃದಯಾಘಾತ ಆಗದಂತೆ ತಡೆಯುತ್ತದೆ. ಇನ್ನು ಮಧ್ಯ ಸೇವನೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲಲ್ದೆ ಸೌಂದರ್ಯಕ್ಕೆ ಕಲ್ಲಂಗಡಿ ಹೇಗೆ ಸಹಕಾರಿ ಅನ್ನೋದನ್ನ ಹೇಳುವುದಾರೆ ಕಲ್ಲಂಗಡಿ ಹಣ್ಣಿನ ರಸದಿಂದ ಮುಖವನ್ನು ಆಗ್ಗಾಗೆ ಮಾಲೀಶು ಮಾಡಿದರೆ ಮುಖದ ಕಾಂತಿ ಹೆಚ್ಚುವುದು